ಪುತ್ತೂರು: ಶ್ರೀ ರಕ್ತೇಶ್ವರಿ ಸೇವಾ ಸಮಿತಿ ಸರ್ವೆ ಇದರ ಆಶ್ರಯದಲ್ಲಿ ಸರ್ವೆ ಶ್ರೀ ನಾಗ ಮತ್ತು ಶ್ರೀ ರಕ್ತೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಸಾರ್ವಜನಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ, ದೈವಗಳ ನೇಮೋತ್ಸವ ಫೆ.11ರಂದು ನಡೆಯಿತು.
ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಶ್ರೀ ನಾಗದೇವರಿಗೆ ಪಂಚಾಮೃತ ಅಭಿಷೇಕ, ನವಕ ಕಲಶ, ತಂಬಿಲ ಸೇವೆ, ಶ್ರೀ ರಕ್ತೇಶ್ವರಿ ಹಾಗೂ ಪರಿವಾರ ದೈವಗಳಿಗೆ ತಂಬಿಲ ಸೇವೆ ನಡೆಯಿತು. ಸಂಜೆ ಸಾರ್ವಜನಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ ಹಾಗೂ ರಾತ್ರಿ ದೈವಗಳ ನೇಮೋತ್ಸವ ನಡೆಯಿತು. ಹಿಂದೂ ಸಂಘಟನೆಗಳ ಮುಖಂಡ ಅರುಣ್‌ಕುಮಾರ್ ಪುತ್ತಿಲ, ನಳಿನಿ ಲೋಕಪ್ಪ ಗೌಡ, ಮುಂಡೂರು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ ಸೇರಿದಂತೆ ಹಲವು ಮಂದಿ ಗಣ್ಯರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಆಡಳಿತ ಸಮಿತಿ ಅಧ್ಯಕ್ಷರಾದ ಉದಯಕುಮಾರ್ ತಂತ್ರಿ, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಬೆಳ್ಳಿಯಪ್ಪ ಗೌಡ ತಂಬುತಡ್ಕ, ಸುರೇಶ ಗೌಡ ತಂಬುತಡ್ಕ ಸರ್ವೆ, ಲೋಕೇಶ ಗೌಡ ತಂಬುತಡ್ಕ, ವಿಜಯಕುಮಾರ್ ರೈ ಸರ್ವೆ, ಪದ್ಮನಾಭ ಗೌಡ ತಂಬುತಡ್ಕ, ದೇವಪ್ಪ ಪೂಜಾರಿ ಸರ್ವೆ, ಗೌತಮ್ ರೈ ಸರ್ವೆ, ಸ್ವಸ್ತಿಕ್ ಮೇಗಿನಗುತ್ತು, ಯೋಗೀಶ ಟಿ. ತಂಬುತಡ್ಕ ಸರ್ವೆ, ಶಿವಪ್ಪ ಗೌಡ ತಂಬುತಡ್ಕ, ಜಯರಾಮ ತಂಬುತಡ್ಕ, ಮಾಧವ ಸರ್ವೆ ಮತ್ತಿತರರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.