ಕೆದಂಬಾಡಿ ಗ್ರಾಪಂನಲ್ಲಿ ಸಂವಿಧಾನ ಜಾಗೃತಿ ಜಾಥಾದ ಅದ್ಧೂರಿ ಸ್ವಾಗತ – ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ, ಬೀದಿ ನಾಟಕ, ದೇಶಭಕ್ತಿ ಗೀತೆ ಗಾಯನ

0

ಪುತ್ತೂರು: ಸಂವಿಧಾನ ದಿನಾಚರಣೆಯ ಅಂಗವಾಗಿ ಕರ್ನಾಟಕ ಸರಕಾರದ ಆದೇಶದಂತೆ ʼಸಂವಿಧಾನ ಜಾಗೃತಿ ಜಾಥಾ’ ಸ್ತಬ್ಧಚಿತ್ರದ ವಾಹನವು ಫೆ.15ರಂದು ಕೆದಂಬಾಡಿ ಗ್ರಾಮ ಪಂಚಾಯತ್‌ಗೆ ಆಗಮಿಸಿತು. ಸಂವಿಧಾನದ ಆಚರಣೆ ಮತ್ತು ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಈ ಜಾಥಾವನ್ನು ಕೆದಂಬಾಡಿ ಗ್ರಾಮ ಪಂಚಾಯತ್‌ನ ಗಡಿ ಪ್ರದೇಶವಾದ ಕಟ್ಟತ್ತಾರುನಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ವಾಹನ ಜಾಥದ ಮೂಲಕ ತಿಂಗಳಾಡಿಯಲ್ಲಿರುವ ಗ್ರಾಪಂ ಕಛೇರಿ ಆವರಣಕ್ಕೆ ಕರೆ ತರಲಾಯಿತು. ಗ್ರಾಪಂ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷೆ ಜಯಲಕ್ಷ್ಮೀ ಬಲ್ಲಾಳ್ ಕೆದಂಬಾಡಿಬೀಡುರವರು ಅಂಬೇಡ್ಕರ್‌ನ ಪ್ರತಿಮೆಗೆ ಹೂವಿನ ಮಾಲಾರ್ಪಣೆ ಮಾಡುವ ಮೂಲಕ ಗೌರವಾರ್ಪಣೆ ಸಲ್ಲಿಸಿದರು. ಬಳಿಕ ಅಂಬೇಡ್ಕರ್‌ರವರ ಭಾವಚಿತ್ರದ ಎದುರು ದೀಪ ಪ್ರಜ್ವಲನೆ ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.


ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಹಾರಾರ್ಪಣೆ
ಗ್ರಾಪಂ ಉಪಾಧ್ಯಕ್ಷೆ ಜಯಲಕ್ಷ್ಮೀ ಬಲ್ಲಾಳ್ ಕೆದಂಬಾಡಿಬೀಡು, ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆಯವರು ಸೇರಿದಂತೆ ಗ್ರಾಪಂ ಸದಸ್ಯರುಗಳು, ತಿಂಗಳಾಡಿ ಶಾಲಾ ಮುಖ್ಯಗುರು ವಿಜಯ ಹಾಗೇ ಅಂಗನವಾಡಿ ಶಿಕ್ಷಕಿಯರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವಾರ್ಪಣೆ ಸಲ್ಲಿಸಿದರು. ಅದೇ ರೀತಿ ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ ರೈ ಕೋರಿಕ್ಕಾರು ಹಾಗು ಪದಾಧಿಕಾರಿಗಳು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಕಾರ್ಯಕ್ರಮದ ವಿಶೇಷತೆಗಳು
ಸಂವಿಧಾನದ ಬಗ್ಗೆ ಪ್ರತಿಜ್ಞಾ ವಿಧಿ ಬೋಧನೆಯನ್ನು ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ನೆರವೇರಿಸಿದರು. ಸಂವಿಧಾನ ದಿನಾಚರಣೆಯ ಅಂಗನವಾಡಿ ಗ್ರಾಪಂ ವ್ಯಾಪ್ತಿಯ ಶಾಲೆಗಳಿಗೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ತಿಂಗಳಾಡಿ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಗಾಯನ ಹಾಗೂ ಸಂವಿಧಾನದ ಬಗ್ಗೆ ಘೋಷಣೆ ನಡೆಯಿತು. ಕಾರ್ಯಕ್ರಮ ಮುಗಿದ ಬಳಿಕ ತಿಂಗಳಾಡಿಯಿಂದ ತ್ಯಾಗರಾಜನಗರದವರೇಗೆ ವಾಹನ ಜಾಥ ನಡೆಯಿತು. ಬೈಕ್ ರ್‍ಯಾಲಿ ಹಾಗೇ ಜನರು ಕಾಲ್ನಡಿಗೆಯ ಮೂಲಕ ಜಾಥವನ್ನು ಬೀಳ್ಕೊಡಲಾಯಿತು.

ಅಸ್ಪರ್ಶೃತೆಯ ಬಗ್ಗೆ ಗಮನ ಸೆಳೆದ ಬೀದಿನಾಯಕ
ದೇಶದಲ್ಲಿ ತಾಂಡವಾಡಿದ ಅಸ್ಪರ್ಶೃತೆಯ ಬಗ್ಗೆ ಬೀದಿ ನಾಯಕ ನಡೆಯಿತು. ಗಿರೀಶ್ ನಾವಡ ಸುರತ್ಕಲ್ ಮತ್ತು ತಂಡದವರು ಬೀದಿ ನಾಟಕ ನಡೆಸಿಕೊಟ್ಟರು. ಇದರಲ್ಲಿ ದೇಶದಲ್ಲಿದ್ದ ಅಸ್ಪರ್ಶೃತೆಯ ಬಗ್ಗೆ ಜನರಿಗೆ ಮನಮುಟ್ಟುವಂತೆ ತಿಳಿಸಿಕೊಡಲಾಯಿತು. ನಾವೆಲ್ಲರೂ ಒಂದೇ ಎಂಬ ವಿಷಯವನ್ನು ನಾಟಕದ ಕೊನೆಯಲ್ಲಿ ತಿಳಿಸಲಾಯಿತು.

ಕಾರ್ಯಕ್ರಮದ ನೋಡೆಲ್ ಅಧಿಕಾರಿ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ನವೀನ್ ಸ್ಟಿಫನ್ ವೇಗಸ್, ಕಾರ್ಯಕ್ರಮ ಸಂಯೋಜಕ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಕೃಷ್ಣ ಬಿ ಹಾಗೇ ಗ್ರಾಪಂ ಗ್ರೇಡ್ 1 ಕಾರ್ಯದರ್ಶಿ ಸುನಂದ ರೈ, ಸದಸ್ಯರುಗಳಾದ ರತನ್ ರೈ ಕುಂಬ್ರ, ವಿಠಲ ರೈ ಮಿತ್ತೋಡಿ,ಪ್ರವೀಣ್ ಶೆಟ್ಟಿ ತಿಂಗಳಾಡಿ, ಅಸ್ಮಾ, ಸುಜಾತ ರೈ, ರೇವತಿ ಬೋಳೋಡಿ, ಮಾಜಿ ಸದಸ್ಯ ಚಂದ್ರಹಾಸ ರೈ ಬೋಳೋಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಆರತಿ, ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭವ್ಯ, ಗ್ರಾಮ ಆಡಳಿತಾಧಿಕಾರಿ ಸುಜಾತ ಅಲ್ಲದೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಶಾಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ಜಯಂತ ಮೇರ್ಲ, ಮೃದುಳ, ಗಣೇಶ್, ಶಶಿಪ್ರಭಾ ರೈ, ವಿದ್ಯಾಪ್ರಸಾದ್ ಸಹಕರಿಸಿದ್ದರು.

LEAVE A REPLY

Please enter your comment!
Please enter your name here