ಉಪ್ಪಿನಂಗಡಿ: ಹೃದಯಾಘಾತಕ್ಕೆ ಕಾಲೇಜು ವಿದ್ಯಾರ್ಥಿನಿ ಸಾವು

0

ಉಪ್ಪಿನಂಗಡಿ: ಕಾಲೇಜು ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಮಲಗಿದ್ದಲ್ಲೇ ಮೃತ ಪಟ್ಟ ಘಟನೆ 34 ನೆಕ್ಕಿಲಾಡಿ ಗ್ರಾಮದ ಕರ್ವೇಲು ಬಳಿ ನಡೆದಿದೆ.
ಇಲ್ಲಿ ಕೆ.ಎ. ಸ್ಟೋರ್ ಮಾಲಕ ದಾವೂದು ಎಂಬವರ ಪುತ್ರಿ ಹಫೀಝ (17) ಮೃತ ಬಾಲಕಿ. ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾದ ಈಕೆ ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದು, ಫೆ.15ರಂದು ಬೆಳಗ್ಗೆ ಎದ್ದೇಳುವಾಗ ಮೃತಪಟ್ಟಿದ್ದಳು. ಮಲಗಿದಲ್ಲೇ ಹೃದಯಾಘಾತಕ್ಕೀಡಾಗಿ ಈಕೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಮೃತಳು ತಂದೆ, ತಾಯಿ ಹಾಗೂ ಮೂವರು ಸಹೋದರರನ್ನು ಅಗಲಿದ್ದಾಳೆ.

LEAVE A REPLY

Please enter your comment!
Please enter your name here