ಎಂಜಿಆರ್ ಕಾರ್ಪೋರೇಷನ್ ನ ಸ್ಮಾರ್ಟ್ ಇಂಡಿಯಾ 0.1 ಉಳಿತಾಯ ಯೋಜನೆಯ ಪ್ರಥಮ ಡ್ರಾ

0

ವಿಟ್ಲ: ಎಂಜಿಆರ್ ಕಾರ್ಪೋರೇಷನ್ ಪ್ರಸ್ತುತಪಡಿಸುತ್ತಿರುವ ಸ್ಮಾರ್ಟ್ ಇಂಡಿಯಾ 0.1 ಉಳಿತಾಯ ಯೋಜನೆಯ ಪ್ರಥಮ ಡ್ರಾ ಫೆ.9ರಂದು ಸಂಜೆ 7 ಗಂಟೆಗೆ ವಿಟ್ಲದ ಪುತ್ತೂರು ರಸ್ತೆಯಲ್ಲಿರುವ ಸ್ಮಾರ್ಟ್ ಸಿಟಿ ಕಟ್ಟಡದ ಮುಂಭಾಗದಲ್ಲಿ ಜರುಗಿತು.

20 ಮಂದಿ ಸರ್ಪ್ರೈಸ್ ಗಿಫ್ಟಾಗಿ 20 ಚಿನ್ನದ ಉಂಗುರಗಳನ್ನು ಪಡೆದರು. ಸ್ಮಾರ್ಟ್ ಇಂಡಿಯಾ 0.1 ನ ಪ್ರಥಮ ಬಂಪರ್ ಬಹುಮಾನಗಳಾದ 5 ಆಕ್ಟಿವಾ ಹೋಂಡಾಗಳು ರಾಜ್ಯದ ಹಲವು ಕಡೆಗಳ ಐವರು ಅದೃಷ್ಟಶಾಲಿಗಳ ಪಾಲಾಯಿತು. ಬಂಪರ್ ಬಹುಮಾನ ಆಕ್ಟಿವಾ ಹೋಂಡಾ ಪಡೆದ ಸದಸ್ಯರೆಂದರೆ ಕೊಡಗು ಜಿಲ್ಲೆಯ ಕುಶಾಲನಗರದ ವಿಜಯಕುಮಾರ್, ವಿಟ್ಲದ ವಿನಾಯಕ ಹೋಟೇಲಿನ ಮಾಲೀಕರಾದ ನಾರಾಯಣ ನಾಯಕ್, ಕಂಬಳಬೆಟ್ಟುವಿನ ಮಹಮ್ಮದ್ ಅರ್ಫಾಸ್ , ಒಕ್ಕೆತ್ತೂರಿನ ರಹಿಮಾನ್ , ಕಾಸರಗೋಡು ಜಿಲ್ಲೆಯ ಬಾಯಾರ್ ನ ಎ.ಕೆ ಸಿದ್ದೀಕ್ ಪಡೆದುಕೊಂಡರು.

ಸಮಾರಂಭದ ಅಧ್ಯಕ್ಷತೆಯನ್ನು ಎಂಜಿಆರ್ ಕಾರ್ಪೋರೇಷನ್ ನ ಪಾಲುದಾರರಲ್ಲಿ ಓರ್ವರಾದ ಮಹಮ್ಮದ್ ರಫೀಕ್ ಎಂ. ಯು ವಹಿಸಿ ಡ್ರಾ ನಡೆಸಿಕೊಟ್ಟರು. ಜಿಲ್ಲಾ ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾದ ಎಂ.ಎಸ್ ಮಹಮ್ಮದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ರಮಾನಾಥ ವಿಟ್ಲ, ಶಾಕೀರ್ ಅಳಿಕೆಮಜಲ್, ಪತ್ರಕರ್ತರಾದ ಅಬ್ದುಲ್ ಖಾದರ್ ಕುಕ್ಕಜೆ, ಎಂಜಿಆರ್ ಕಾರ್ಪೊರೇಷನ್ ನ ಪಾಲುದಾರರಾದ ಅಬ್ಲುಲ್ ಮಜೀದ್, ಮಹಮ್ಮದ್ ಗೌಸ್ ಮತ್ತು ಎಂಜಿಆರ್ ಕಾರ್ಪೋರೇಷನ್ ನ ಇಸ್ಮಾಯಿಲ್ ಕಿಟ್ ಕ್ಯಾಟ್, ಸಿದ್ದೀಕ್ ಕಲ್ಕಂದೂರು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here