ಕೌಡಿಚ್ಚಾರು: ಬೈಕ್, ಪಿಕಪ್ ಡಿಕ್ಕಿ-ಬೈಕ್ ಸವಾರ ಮೃತ್ಯು

0

ಪುತ್ತೂರು: ಬೈಕ್ ಮತ್ತು ಪಿಕಪ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಕೌಡಿಚ್ಚಾರು ಮದಕ ಎಂಬಲ್ಲಿ ಫೆ.15ರಂದು ನಡೆದಿದೆ.


ಬೈಕ್ ಸವಾರ ಅರಿಯಡ್ಕ ಗ್ರಾಮದ ಸುಂದರ ಪೂಜಾರಿ (60ವ) ಎಂಬವರು ಮೃತಪಟ್ಟವರಾಗಿದ್ದು, ಅವರು ಬೈಕ್‌ನಲ್ಲಿ ಕೌಡಿಚ್ಚಾರು ಮದಕ ಕಡೆ ಹೋಗುತ್ತಿದ್ದ ವೇಳೆ ಪಿಕಪ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಸುಂದರ ಪೂಜಾರಿ ಅವರು ತೀವ್ರ ಗಾಯಗೊಂಡಿದ್ದು, ಅವರನ್ನು ಪಿಕಪ್‌ನಲ್ಲಿದ್ದವರು ಸೇರಿಕೊಂಡು ಆಟೋ ರಿಕ್ಷಾದಲ್ಲಿ ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಸುಂದರ ಪೂಜಾರಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆ ಶವಗಾರ ಕೊಠಡಿಯಲ್ಲಿ ಇರಿಸಲಾಗಿದೆ. ಮೃತರು ಪತ್ನಿ ಸೀತಾ, ಪುತ್ರರಾದ ರವಿರಾಜ್, ಪ್ರವೀಣ್, ಪುತ್ರಿ ಸೌಮ್ಯ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here