ನಾಳೆ(ಫೆ.18): ಮಣ್ಣು ಪರೀಕ್ಷಾ ಲ್ಯಾಬ್ ಆರ್ಗಾನಿಕೆಮ್, ಡಿಬಿಸಿ ನ್ವಾಲೆಡ್ಜ್ ಹಬ್ ಶುಭಾರಂಭ

0

ಪುತ್ತೂರು:ಮಣ್ಣು ಪರೀಕ್ಷಾ ಲ್ಯಾಬ್, ರಸಗೊಬ್ಬರಗಳ ಮಾರಾಟ ಮಳಿಗೆ ‘ಆರ್ಗಾನಿಕೆಮ್’ ಹಾಗೂ DBC ಕನ್ಟ್ರಕ್ಷನ್‌ ಮತ್ತು ಇಂಟೀರಿಯರ್ಸ್‌ ನ ಇನ್ನೊಂದು ಭಾಗವಾದ ಡಿಬಿಸಿ ‘ನ್ವಾಲೆಡ್ಜ್ ಹಬ್’ ಫೆ.18ರಂದು ಪರ್ಲಡ್ಕ ಬೈಪಾಸ್ ಜಂಕ್ಷನ್‌ ಹತ್ತಿರ ಶುಭಾರಂಭಗೊಳ್ಳಲಿದೆ.


ಸರಕಾರದಿಂದ ಪ್ರಮಾಣಿತಗೊಂಡಿರುವ ಮಣ್ಣು ಪರೀಕ್ಷಾ ಪ್ರಯೋಗಾಲಯದ ಮೂಲಕ ಮಣ್ಣು ಪರೀಕ್ಷಿಸಿ ಹೊಸ ತಂತ್ರಜ್ಞಾನದೊಂದಿಗೆ ಕೃಷಿಯಲ್ಲಿ ಕ್ರಾಂತಿಯನ್ನು ಮಾಡಲು ಸಹಕಾರಿಯಾಗಲಿದೆ. ಸಾವಯವ ರಸಗೊಬ್ಬರ, ನೀರಿನಲ್ಲಿ ಕರಗುವ ರಾಸಾಯನಿಕ ರಸಗೊಬ್ಬರ, ಸೂಕ್ಷ್ಮ ಪೋಷಕಾಂಶಗಳು, ಕಿಣ್ವಗಳು, ಜೈವಿಕ ಬ್ಯಾಕ್ಟೀರಿಯಾಗಳ ಬಗ್ಗೆ ಮಾರಾಟ, ಅವುಗಳ ಬಳಕೆಯ ಬಗ್ಗೆ ಮಾಹಿತಿ ನೀಡಲಾಗುವುದು. ಡಿಬಿಸಿ ನ್ವಾಲೆಡ್ಜ್ ಹಬ್ ಎಸಿ ತರಬೇತಿ ಹಾಲ್ ನಲ್ಲಿ ಇತರ ತರಬೇತಿ,ಮೀಟಿಂಗ್‌ ಗಳಿಗೂ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here