ಸೌಜನ್ಯ ನ್ಯಾಯಕ್ಕಾಗಿ ದೆಹಲಿಯಲ್ಲೂ ಪ್ರತಿಭಟನೆ: ಮಹೇಶ್ ಶೆಟ್ಟಿ ತಿಮರೋಡಿ
ಉಪ್ಪಿನಂಗಡಿ: ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಸೌಜನ್ಯ ಬರೇ ಹೆಣ್ಣಲ್ಲ. ಅವಳೀಗ ದೇವಿ ಸ್ವರೂಪಿಣಿಯಾಗಿದ್ದಾಳೆ. ಅವಳ ಹಾಗೂ ದೈವ ದೇವರುಗಳ ಶಕ್ತಿ ನಮಗಿದ್ದು, ಅವಳನ್ನು ಅತ್ಯಾಚಾರವೆಸಗಿ ಕೊಲೆಗೈದ ಆರೋಪಿಗಳ ಅಂತ್ಯದ ಶಕ್ತಿಗಳು ನಾವಾಗಲಿದ್ದೇವೆ. ನಮ್ಮ ಗೆಲುವು ನಿಶ್ಚಿತವಾಗಿದ್ದು, ಸೌಜನ್ಯಳ ಸಾವಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ದೆಹಲಿಯಲ್ಲಿಯೂ ಪ್ರತಿಭಟನೆ ಮಾಡುತ್ತೇವೆ ಎಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.
ಪ್ರಜಾಪ್ರಭುತ್ವ ವೇದಿಕೆ ಮತ್ತು ಸೌಜನ್ಯ ಹೋರಾಟ ಸಮಿತಿ ಉಪ್ಪಿನಂಗಡಿ ಇದರ ಸಂಯುಕ್ತಾಶ್ರಯದಲ್ಲಿ ಫೆ.18ರಂದು ಉಪ್ಪಿನಂಗಡಿಯ ಎಚ್.ಎಂ. ಹಾಲ್‌ನ ವಠಾರದಲ್ಲಿ ನಡೆದ ಬೃಹತ್ ಜನಾಂದೋಲನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹೋರಾಟಗಾರ ಗಿರೀಶ್ ಮಟ್ಟಣ್ಣವರ್, ತುಳು ಜಾನಪದ ವಾಗ್ಮಿ ತಮ್ಮಣ್ಣ ಶೆಟ್ಟಿ, ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ, ಸೌಜನ್ಯಳ ತಾಯಿ ಕುಸುಮಾವತಿ, ಹೋರಾಟಗಾರ ವಿಷ್ಣುಮೂರ್ತಿ ಭಟ್‌ರವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಉಪ್ಪಿನಂಗಡಿ ಸೌಜನ್ಯ ಹೋರಾಟ ಸಮಿತಿಯ ಅಧ್ಯಕ್ಷ ಚಿದಾನಂದ ಪಂಚೇರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನೀತಿ ತಂಡದ ಜಯಂತ್ ಟಿ., ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ಅನಿಲ್ ಅಂತರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹೋರಾಟ ಸಮಿತಿಯ ಸಂಚಾಲಕ ಕಿರಣ್ ಗೌಂಡತ್ತಿಗೆ, ಪ್ರಮುಖರಾದ ಸಂದೀಪ್ ಕುಪ್ಪೆಟ್ಟಿ, ನಿಶ್ಚಿತ್ ಮಳಲಿ, ಶೈಲಜಾ, ನವೀನ್ ಬಂಡಾಡಿ, ಪ್ರವೀಣ್ ನೆಡ್ಚಿಲ್, ಮೋಹನ್ ಶೆಟ್ಟಿ ಕಜೆಕ್ಕಾರು, ಸುಜಿತ್ ಬೊಳ್ಳಾವು, ರಕ್ಷಿತ್ ಕಜೆಕ್ಕಾರು, ಹರಿಪ್ರಸಾದ್ ಶೆಟ್ಟಿ, ರಾಮಚಂದ್ರ ಮಣಿಯಾಣಿ, ನವೀನ್ ಕುಮಾರ್ ಕಲ್ಯಾಟೆ, ರಾಜೇಶ್ ಕೊಡಂಗೆ, ಲಕ್ಷ್ಮಣ ಗೌಡ ನೆಡ್ಚಿಲ್ ಮತ್ತಿತರರು ಉಪಸ್ಥಿತರಿದ್ದರು. ಆನಂದ ರಾಮಕುಂಜ ಸ್ವಾಗತಿಸಿದರು. ಜತೀಂದ್ರ ಶೆಟ್ಟಿ ಅಲಿಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚಿನ್ ಗೌಂಡತ್ತಿಗೆ ವಂದಿಸಿದರು. ಸಂದೇಶ್ ಪುಳಿತ್ತಡಿ ಕಾರ್ಯಕ್ರಮ ನಿರೂಪಿಸಿದರು.