ಪಂಜಳದ ಷಣ್ಮುಖ ಗೆಳೆಯರ ಬಳಗದಿಂದ ಸಹಾಯ ಹಸ್ತ

0

ಪುತ್ತೂರು: ಪಂಜಳದ ಷಣ್ಮುಖ ಗೆಳೆಯರ ಬಳಗ ತಮ್ಮ ಸಹಾಯ ಯೋಜನೆಯಡಿ ಸಹೃದಯಿ ಧಾನಿಗಳಿಂದ ಸಂಗ್ರಹಿಸಿದ 10 ಸಾವಿರ ರೂಪಾಯಿಯನ್ನು ರಾಘವ ಪೂಜಾರಿ ಎಂಬವರಿಗೆ ನೀಡುವ ಮೂಲಕ ನೆರವಿನ ಹಸ್ತ ಚಾಚಿದೆ.

ಅಶಕ್ತರಿಗೆ ಸಹಾಯಮಾಡಬೇಕೆನ್ನುವ ಯೋಜನೆಯೊಂದಿಗೆ ಗೆಳೆಯರ ಬಳಗ ಸಂಘಟಿತವಾಗಿ ಕಾರ್ಯಾಚರಿಸುತ್ತಿದ್ದು, ತಮ್ಮ ಯೋಜನೆಯ ಪ್ರಥಮ ಕಾರ್ಯಕ್ರಮವಾಗಿ ಸಂಘದ ಸದಸ್ಯರೇ ಆಗಿರುವ ರಾಘವ ಪೂಜಾರಿ ಅವರಿಗೆ ನೆರವು ನೀಡುವ ಮೂಲಕ ಎಲ್ಲರ ಗಮನಸೆಳೆದಿದೆ. ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಸಹಕರಿಸಿದ ಎಲ್ಲಾ ಧಾನಿಗಳಿಗೂ ಆಭಾರಿಯಾಗಿರುವುದಾಗಿ ಗೆಳೆಯರ ಬಳಗ ತಿಳಿಸಿದೆ.

LEAVE A REPLY

Please enter your comment!
Please enter your name here