ನಾಳೆ (ಫೆ.22): ಓಲೆಮುಂಡೋವು ಉರೂಸ್ ಉದ್ಘಾಟನೆ-ಪೇರೋಡ್ ಮಹಮ್ಮದ್ ಅಝ್ಹರಿಯವರಿಂದ ಪ್ರಭಾಷಣ

0

ಪುತ್ತೂರು: ಇತಿಹಾಸ ಪ್ರಸಿದ್ದ ಓಲೆಮುಂಡೋವು ದರ್ಗಾ ಶರೀಫ್‌ನಲ್ಲಿ ಮೂರು ವರ್ಷಕ್ಕೊಮ್ಮೆ ಆಚರಿಸುಕೊಂಡು ಬರುತ್ತಿರುವ ಉರೂಸ್ ಸಮಾರಂಭ ಫೆ.22ರಿಂದ ಮಾ.3ರ ವರೆಗೆ ನಡೆಯಲಿದೆ.

ಉದ್ಘಾಟನಾ ದಿನವಾದ ಫೆ.22ರಂದು ಮಜ್ಲಿಸುನ್ನೂರ್ ಕರ್ನಾಟಕ ಇದರ ಚೀಫ್ ಅಮೀರ್ ಆಗಿರುವ ಅಸ್ಸಯ್ಯದ್ ಸಯ್ಯದಲವಿ ತಂಙಳ್ ಓಲೆಮುಮಡೋವು ಅವರು ಉದ್ಘಾಟನೆ ಹಾಗೂ ದುವಾ ನೆರವೇರಿಸಲಿದ್ದು ಓಲೆಮುಂಡೋವು ಉರೂಸ್ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಎರಬೈಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಥಳೀಯ ಖತೀಬ್ ಹಸನ್ ಬಾಖವಿ ಪ್ರಸ್ತಾವನೆಗೈಯಲಿದ್ದು ಖ್ಯಾತ ಪ್ರಭಾಷಣಗಾರ ಪೇರೋಡ್ ಮಹಮ್ಮದ್ ಅಝ್ಹರಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here