ಎಂಟು ವರ್ಷದಿಂದ ನೆನೆಗುದಿಗೆ ಬಿದ್ದ ಮಂಗಳೂರು-ಬೆಂಗಳೂರು ರಾ.ಹೆದ್ದಾರಿ ಕಾಮಗಾರಿ-ಸದನದಲ್ಲಿ ಹೆದ್ದಾರಿ ದುರವಸ್ಥೆ ಬಿಚ್ಚಿಟ್ಟ ಪುತ್ತೂರು ಶಾಸಕ ಅಶೋಕ್ ರೈ

0

ಪುತ್ತೂರು: ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದ ಎಂಟು ತಿಂಗಳಿಂದ ನೆನೆಗುದಿಗೆ ಬಿದ್ದಿದೆ, ವಾಹನ ಸಂಚಾರಕ್ಕೆ ಅಯೋಗ್ಯವಾಗಿದ್ದು ಸಾರ್ವಜನಿಕರು ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ. ಯಾಕೆ ಹೆದ್ದಾರಿ ಕಾಮಗಾರಿ ವೇಗವನ್ನು ಪಡೆಯುತ್ತಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿಧಾನಸಬಾ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆದಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೇಂದ್ರ ಸರಕಾರದ ವ್ಯಾಪ್ತಿಗೆ ಒಳಪಡುತ್ತದೆ. ಹೆದ್ದಾರಿಗಳ ಅವ್ಯವಸ್ಥೆಯ ಬಗ್ಗೆ ಶಾಸಕರು ಸರಕಾರದ ಗಮನಸೆಳೆದಾಗ ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊನಮ್ಮಾಯಿಯವರು ಅನೇಕ ಹೆದ್ದಾರಿ ಕಾಮಗಾರಿ ಭೂ ಒತ್ತುವರಿಯಾಗದ ಕಾರಣಕ್ಕೆ ತೀವ್ರತೆಯನ್ನು ಪಡೆದುಕೊಂಡಿಲ್ಲ. ಭೂ ಒತ್ತುವರಿ ಮಾಡಿ ಪರಿಹಾರ ಕೊಡಬೇಕಾಗಿರುವುದು ರಾಜ್ಯ ಸರಕಾರದ ಕೆಲಸವಾಗಿದೆ ಎಂದು ಹೇಳಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಶಾಸಕ ಅಶೋಕ್ ರೈ ಮಂಗಳೂರು-ಬೆಂಗಳೂರು ಹೆದ್ದಾರಿ ಕಾಮಗಾರಿಗೆ ಭೂ ಒತ್ತುವರಿಯಾಗಿ 5 ವರ್ಷ ಕಳೆದಿದೆ ಆದರೆ ಕಾಮಗಾರಿ ಮಾತ್ರ ನಿಧಾನಗತಿಯಲ್ಲಿ ಸಾಗುತ್ತಿದೆ. ಹೆದ್ದಾರಿಯಲ್ಲಿ ತೆರಳುವ ವಾಹನ ಚಾಲಕರು ಇನ್ನೆಷ್ಟು ದಿನ ಈ ನರಕಯಾತನೆಯನ್ನು ಅನುಭವಿಸಬೇಕು ಎಂದು ಸರಕಾರವನ್ನು ಪ್ರಶ್ನಿಸಿ ತಕ್ಷಣವೇ ಈ ವಿಚಾರವನ್ನು ಕೇಂದ್ರ ಸರಕಾರದ ಗಮನಕ್ಕೆ ತಂದು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಆಗ್ರಹಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದರು.

LEAVE A REPLY

Please enter your comment!
Please enter your name here