ಮನೆಗೆ ಬಂದ ಅಪರಿಚಿತ ಮಹಿಳೆಯನ್ನು ಬಸ್ಸು ನಿಲ್ದಾಣಕ್ಕೆ ಬಿಟ್ಟ ವಿಚಾರ: ತಂಡದಿಂದ ಹಲ್ಲೆ ಆರೋಪ-ನಾಲ್ವರ ಬಂಧನ

0

ಕಡಬ : ಮನೆಗೆ ಬಂದ ಅಪರಿಚಿತ ಮಹಿಳೆಯನ್ನು ಅನ್ಯಮತೀಯ ಯುವಕನೊಬ್ಬ ಸಮೀಪದ ಬಸ್ ನಿಲ್ದಾಣಕ್ಕೆ ಬಿಟ್ಟ ವಿಚಾರದಲ್ಲಿ ತಂಡವೊಂದು ಯುವಕನಿಗೆ ಹಲ್ಲೆ ನಡೆಸಿದ ಘಟನೆ ಸಂಬಂಧ ನಾಲ್ವರನ್ನು ಪೋಲಿಸರು ವಶಕ್ಕೆ ಪಡೆದುಕೊಂಡ ಘಟನೆ ಮರ್ದಾಳ ಎಂಬಲ್ಲಿ ನಡೆದಿದೆ.

ಘಟನೆಯ ವಿವರ: ಮರ್ದಾಳ ಶಿವಾಜಿನಗರ ನಿವಾಸಿ ದಿ.ಇಲ್ಯಾಸ್ ಎಂಬವರ ಪುತ್ರ ಫಯಾಜ್ ಗುರುವಾರ ಸಂಜೆ ತನ್ನ ತಾಯಿ ಮತ್ತು ಸಹೋದರರೊಂದಿಗೆ ಮನೆಯಲ್ಲಿದ್ದ ಸಂದರ್ಭ, ಸುಮಾರು 7 ಗಂಟೆಯ ವೇಳೆಗೆ ಮನೆಯ ಹತ್ತಿರಕ್ಕೆ ಮಗುವನ್ನು ಎತ್ತಿಕೊಂಡು ಬಂದ ಅಪರಿಚಿತ ಮಹಿಳೆಯೊಬ್ಬಳು ರಿಯಾಝ್‌ ನ ಮನೆ ಯಾವುದುೞ ಎಂದು ಕೇಳಿದ್ದಾರೆ.  ಈ ವೇಳೆ, ಇದು ರಿಯಾಝ್‌ ನ ಮನೆ ಅಲ್ಲ. ನೀವು ಇಲ್ಲಿಂದ ತೆರಳಿ ಎಂದು ಮನೆಯವರು ಹೇಳಿದಾಗ, ಅಪರಿಚಿತ ಮಹಿಳೆಯು ಮನೆ ಮುಂಭಾಗದಲ್ಲಿ ಅಳುತ್ತಾ ನಿಂತಿದ್ದರು ಎನ್ನಲಾಗಿದೆ. ಆ ಸಂದರ್ಭದಲ್ಲಿ ಫಯಾಝ್ ನ ತಾಯಿ ಅಪರಿಚಿತ ಮಹಿಳೆಯನ್ನು ಸಮಾಧಾನಪಡಿಸಿ, ಮನೆಯ ಪಕ್ಕದ ಹುಡುಗ ಇಬ್ರಾಹಿಂ ಎಂಬವರು ಮಹಿಳೆಯನ್ನು ಮರ್ದಾಳ ಬಸ್ಸು ನಿಲ್ದಾಣದ ಹತ್ತಿರ ಬಿಟ್ಟು ಬರಲು ಹೇಳಿದ ಹಿನ್ನೆಲೆಯಲ್ಲಿ ಇಬ್ರಾಹಿಂ ಆಕೆಯನ್ನು ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಹೋಗಿದ್ದರು. ಅದೇ ಸಮಯಕ್ಕೆ ಸ್ಥಳೀಯರಾದ ಜಿನಿತ್ ಕುಮಾರ್, ಉಮೇಶ್, ವಿನುತ್, ನಾಗೇಶ್ ಹಾಗೂ ಶ್ರೀಕರ ಸೇರಿದಂತೆ ಇತರ 10 ರಿಂದ 15 ಜನರು ಬಂದು ಫಯಾಝ್ ರನ್ನು ಕರೆದು, ಸ್ಕೂಟರ್ ನಲ್ಲಿ ಹೋದ ಮಹಿಳೆಯ ಬಗ್ಗೆ ವಿಚಾರಿಸಿದರು. ಈ ವೇಳೆ ಆತ ನೀಡಿದ ಉತ್ತರದಿಂದ ಅಸಮಾಧಾನಗೊಂಡ ತಂಡ ಇಬ್ರಾಹಿಂ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವೇಳೆ ಸ್ಥಳದಲ್ಲಿದ್ದ ಫಯಾಝ್ ರ ತಾಯಿ ಸಫಿಯಾ ತಡೆಯಲು ಬಂದಿದ್ದು, ಅವರಿಗೂ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಫಯಾಝ್ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here