ಆಲ್‌ಇಂಡಿಯಾ ಬ್ಯೂಟಿ ಅಸೋಸಿಯೇಶನ್ ಅವಾರ್ಡ್‌ಗೆ ದಿವ್ಯ ಕೆ. ಶೆಟ್ಟಿ, ಐಶ್ವರ್ಯ ಚಂದ್ರಶೇಖರ್, ನಿಶ್ಚಳ ಆಳ್ವ, ಮಾಧವಿ ರೈ ಆಯ್ಕೆ

0

ಬೆಳ್ತಂಗಡಿ: ಆಲ್‌ಇಂಡಿಯಾ ಬ್ಯೂಟಿ ಅಸೋಸಿಯೇಶನ್ ವತಿಯಿಂದ ಕೊಡಲಾಗುವ ವಿವಿಧ ಅವಾರ್ಡ್‌ಗಳಿಗೆ ಪುತ್ತೂರಿನ ನಾಲ್ಕು ಬ್ಯೂಟಿ ಪಾರ್ಲರ್‌ನ ಮಾಲಕರು ಆಯ್ಕೆಯಾಗಿದ್ದಾರೆ. ಸೆನೋರಿಟಾ ಬ್ಯೂಟಿಪಾರ್ಲರ್‌ನ ದಿವ್ಯ ಕೆ. ಶೆಟ್ಟಿ ಅವರು ಎಂಟರ್‌ಪ್ಯೂನರ್ ಅವಾರ್ಡ್‌ಗೆ ಆಯ್ಕೆಯಾಗಿದ್ದು ಐಶ್ವರ್ಯ ಬ್ಯೂಟಿಪಾರ್ಲರ್‌ನ ಐಶ್ವರ್ಯ ಚಂದ್ರಶೇಖರ್ ಗುರುವೇ ನಮಃ ಅವಾರ್ಡ್ ಭಾಜನರಾಗಿದ್ದಾರೆ.

ತಾರುಣ್ಯ ಬ್ಯೂಟಿಪಾರ್ಲರ್‌ನ ನಿಶ್ಚಲ ಆಳ್ವ ಗುರುವೇ ನಮಃ ಪ್ರಶಸ್ತಿಗೆ ಆಯ್ಕೆಯಾಗಿದ್ದು ಶ್ರೀಮಾ ಬ್ಯೂಟಿಪಾರ್ಲರ್‌ನ ಮಾಧವಿ ಮನೋಹರ ರೈ ಲೆಜೆಂಡ್ರಿ ಅವಾರ್ಡ್‌ಗೆ ಆಯ್ಕೆಯಾಗಿದ್ದಾರೆ. ಫೆ.26ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

LEAVE A REPLY

Please enter your comment!
Please enter your name here