ನಾಣಿಲ ಶಾಲೆಯಲ್ಲಿ ಕಾಣಿಯೂರು, ಸವಣೂರು, ನರಿಮೊಗರು ಕ್ಲಸ್ಟರ್ ಮಟ್ಟದ ಸಮಾಲೋಚನಾ ಸಭೆ

0

ಕಾಣಿಯೂರು: ಕಾಣಿಯೂರು, ಸವಣೂರು, ನರಿಮೊಗರು ಕ್ಲಸ್ಟರ್ ಮಟ್ಟದ ವಿಜ್ಞಾನ ಸಮಾಜ ಗಣಿತ ವಿಷಯ ಆಧಾರಿತ ಸಮಾಲೋಚನ ಸಭೆಯು ನಾಣಿಲ ಸರಕಾರಿ ಶಾಲೆಯಲ್ಲಿ ಫೆ 24ರಂದು ನಡೆಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಸಂತ ದಲಾರಿ ವಹಿಸಿ ಮಾತನಾಡಿ, ಶಾಲಾ ಅಭಿವೃದ್ಧಿ ಮತ್ತು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನಮ್ಮ ಶಾಲಾ ಅಭಿವೃದ್ಧಿ ಸಮಿತಿಯು ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸುತ್ತೇವೆ ಎಂದರು.

ಕಾಣಿಯೂರು ಕ್ಲಸ್ಟರಿನ ಸಿ ಆರ್ ಪಿ ಯಶೋದ ಎ , ಪುತ್ತೂರು ತಾಲೂಕಿನ ಟಿ. ಜಿ.ಟಿ ಸಂಘದ ಅಧ್ಯಕ್ಷ ವಿಜಯ , ಕಡಬ ತಾಲೂಕಿನ ಪ್ರೌಢಶಾಲಾ ಶಿಕ್ಷಕರ ಸಂಘದ ಕೋಶಾಧಿಕಾರಿ ಶ್ರೀಲತಾ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ರವೀಂದ್ರ ಶಾಸ್ತ್ರಿ, ನಯನ ಕುಮಾರಿ ಶಿಕ್ಷಕರಿಗೆ ಉಪಯುಕ್ತ ಮಾಹಿತಿ ನೀಡಿದರು. ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಕುಸುಮಾವತಿ ಕಳ, ಸದಸ್ಯರುಗಳಾದ ಪುರಂದರ ಅಂಬುಲ, ದಿನೇಶ ಕುಕುನಡ್ಕ, ಬಾಲಕೃಷ್ಣ ಕಂಡಿಗ, ಆನಂದ ಉದ್ದಲಡ್ಡ, ಸರೋಜಿನಿ ಅರುವ, ಶಕುಂತಲಾ ಕುಂಬ್ಲಾಡಿ, ಪುಷ್ಪಲತಾ ಬೀರೂಳಿಗೆ ಉಪಸ್ಥಿತರಿದ್ದರು. ಸವಣೂರು ಕ್ಲಸ್ಟರಿನ ಸಿ ಆರ್ ಪಿ ಕುಶಾಲಪ್ಪ ಸ್ವಾಗತಿಸಿದರು. ಶಾಲಾ ಮುಖ್ಯಗುರು ಪದ್ಮಯ್ಯ ಗೌಡ ವಂದಿಸಿದರು.

LEAVE A REPLY

Please enter your comment!
Please enter your name here