ಕಾವು: ಬೈಕ್, ಮಿನಿ ಟೆಂಪೋ ಡಿಕ್ಕಿ-ಸವಾರನಿಗೆ ತೀವ್ರ ಗಾಯ

0

ಪುತ್ತೂರು: ಬೈಕ್ ಮತ್ತು ಮಿನಿ ಟಿಂಪೋ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಫೆ.26ರಂದು ಮಾಡ್ನೂರು ಗ್ರಾಮದ ಕಾವು ಬುಶ್ರಾ ಶಾಲೆಯ ಬಳಿ ನಡೆದಿದೆ.
ಗುಡ್ಡಪ್ಪ ಗೌಡ ಅವರು ಚಲಾಯಿಸುತ್ತಿದ್ದ ಬೈಕ್ ಮತ್ತು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟೆಂಪೋ ನಡುವೆ ಕಾವು ಬುಶ್ರಾ ಶಾಲೆಯ ಬಳಿ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಗುಡ್ಡಪ್ಪ ಗೌಡ ಅವರು ತೀವ್ರ ಗಾಯಗೊಂಡಿದ್ದು ಪುತ್ತೂರು ಆಸ್ಪತ್ರೆಗೆ ಕರೆ ತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹ ಸವಾರೆ ಅವರ ಪುತ್ರಿ ಮಮತಾ ಅವರು ಸಣ್ಣ ಪುಟ್ಟ ಗಾಯದಿಂದ ಪಾರಾಗಿದ್ದಾರೆ. ಅಪಘಾತ ನಡೆದ ಸಂದರ್ಭ ಚಾಲಕ ಟೆಂಪೋ ನಿಲ್ಲಿಸದೇ ಪರಾರಿಯಾಗಿದ್ದಾನೆ. ಸ್ಥಳದಲ್ಲಿದ್ದ ಸಾರ್ವಜನಿಕರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕರಿಸಿದರು. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here