ಫೆ. 29-ಮಾ.02: ಕುಂಜಾಡಿ ತರವಾಡು ದೈವಗಳ ಪುನರ್‌ಪ್ರತಿಷ್ಠೆ, ಕಲಶಾಭಿಷೇಕ, ಗ್ರಾಮದೈವ ಅಬ್ಬೆಜಲಾಯ, ತರವಾಡು ದೈವಗಳ ನೇಮೋತ್ಸವ

0

ಪುತ್ತೂರು: ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಕುಂಜಾಡಿ ತರವಾಡು ಮನೆಯಲ್ಲಿ ಧರ್ಮರಸು ಉಳ್ಳಾಕುಲು, ಧರ್ಮದೈವ ಮತ್ತು ಪರಿವಾರ ದೈವಗಳ ಪುನರ್‌ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ಮತ್ತು ಗ್ರಾಮ ದೈವ ಅಬ್ಬೆಜಲಾಯ ಹಾಗೂ ಕುಟುಂಬದ ಧರ್ಮದೈವ ಮತ್ತು ಪರಿವಾರ ದೈವಗಳ ನೇಮೋತ್ಸವವು ಫೆ. 29 ರಿಂದ ಮಾ. 2 ರವರೆಗೆ ನಡೆಯಲಿದೆ.


ಧರ್ಮದೈವ ಮತ್ತು ಪರಿವಾರ ದೈವಗಳ ಜೀರ್ಣೋದ್ಧಾರಗೊಂಡ ದೈವಸ್ಥಾನಗಳಲ್ಲಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದೊಂದಿಗೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಪುನರ್‌ಪ್ರತಿಷ್ಠಾ ಕಲಶಾಭಿಷೇಕ ಹಾಗೂ ನೇಮೋತ್ಸವವು ಜರಗಲಿದೆ.
ಫೆ. 29ರಂದು ಸಂಜೆ ತಂತ್ರಿಗಳ ಆಗಮನ, ದೇವತಾ ಪ್ರಾರ್ಥನೆ ನಡೆದು ಸುದರ್ಶನ ಹೋಮ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ ಇತ್ಯಾದಿ ಧಾರ್ಮಿಕ ವಿಧಿಗಳು ನೆರವೇರಲಿವೆ.


ಮಾ. 1 ರಂದು ಬೆಳಿಗ್ಗೆ ಗಣಪತಿ ಹೋಮ, ಕಲಶ ಪೂಜೆ ನಡೆದು ಬೆಳಿಗ್ಗೆ ಗಂ. 11-27ರಿಂದ 1-02 ರವರೆಗೆ ಒದಗುವ ವೃಷಭ ಲಗ್ನ ಶುಭ ಮುಹೂರ್ತದಲ್ಲಿ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಮಹಾಪೂಜೆ, ನಿತ್ಯ ನೈಮಿತ್ತ್ಯಾದಿಗಳ ನಿರ್ಣಯ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ಜರಗಲಿದೆ.
ಸಂಜೆ ಗ್ರಾಮ ದೈವ ಅಬ್ಬೆಜಲಾಯ ದೈವ, ಧರ್ಮದೈವ ಮತ್ತು ಪರಿವಾರ ದೈವಗಳ ಭಂಡಾರ ತೆಗೆದು ಎಣ್ಣೆ ಬೂಳ್ಯ ನಡೆಯಲಿದೆ. ನಂತರ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ವರ್ಣಾರ ಪಂಜುರ್ಲಿ, ಜಾವತೆ ಮತ್ತು ಕಲ್ಲುರ್ಟಿ ದೈವಗಳ ನೇಮ ನಡೆಯಲಿದೆ.


ಮಾ. 2 ರಂದು ಬೆಳಿಗ್ಗೆ ಗ್ರಾಮ ದೈವ ಅಬ್ಬೆಜಲಾಯ ದೈವದ ನೇಮ, ಧರ್ಮದೈವ ಪಿಲಿಚಾಮುಂಡಿ ದೈವದ ನೇಮೋತ್ಸವ ಜರಗಿ ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಕುಂಜಾಡಿ ತರವಾಡು ಕುಟುಂಬದ ಯಜಮಾನ ಕುಂಜಾಡಿ ವೆಂಕಪ್ಪ ರೈ, ತರವಾಡು ಸಲಹಾ ಸಮಿತಿಯ ಗೌರವಾಧ್ಯಕ್ಷರಾದ ಮಂಜುನಾಥ ರೈ ಕೆಳಗಿನ ಕುಂಜಾಡಿ, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಕೆಳಗಿನ ಕುಂಜಾಡಿ, ಅಧ್ಯಕ್ಷ ದೇವದಾಸ ರೈ ಕುಂಜಾಡಿ ಮತ್ತು ಪದಾಧಿಕಾರಿಗಳು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here