ಉಪ್ಪಿನಂಗಡಿಯ ಅರ್ಚಕರಿಂದ ಅಯೋಧ್ಯೆಯಲ್ಲಿ ಮಂಡಲ ಪೂಜೆ

0

ಉಪ್ಪಿನಂಗಡಿ: ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಶ್ರೀ ಪೇಜಾವರ ಮಠಾಧೀಶರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಮಂಡಲೋತ್ಸವ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕ ವೇದಮೂರ್ತಿ ಹರೀಶ್ ಉಪಾಧ್ಯಾಯರವರು ಶ್ರೀ ರಾಮ ತಾರಕ ಯಜ್ಞದ ಕಲಶ ಮಂಡಲ ಪೂಜೆಯನ್ನು ನೆರವೇರಿಸಿದರು.

ಅಯೋಧ್ಯಾ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿಂದ ವಿಶೇಷ ಆಹ್ವಾನಿತರಾಗಿ ಆಯೋಧ್ಯೆಗೆ ಭೇಟಿ ನೀಡಿದ್ದ ಹರೀಶ್ ಉಪಾಧ್ಯಾಯ ಮತ್ತವರ ಶಿಷ್ಯ ವಿನೀತ್ ಶಗ್ರಿತ್ತಾಯ ರವರು ಮಂಡಲ ಪೂಜೆಯನ್ನು ನೆರವೇರಿಸಿದ್ದಲ್ಲದೆ, ಕ್ಷೇತ್ರದಲ್ಲಿ ನಡೆಯುತ್ತಿರುವ ಪಲ್ಲಕಿ ಪೂಜೆಯ ವೇಳೆ ಚಾಮರ ಸೇವೆಗೈದರು.

LEAVE A REPLY

Please enter your comment!
Please enter your name here