ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ ಆಸ್ಪತ್ರೆಗೆ ಒತ್ತಾಯಿಸಿ ಅಭಿಯಾನ

0

ಕಾಣಿಯೂರು: ರಾಜ್ಯ ಶ್ರೀಮಂತ ದೇವಸ್ಥಾನ ಇರುವ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕ್ಷೇತ್ರಗಳಲ್ಲೊಂದಾದ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ 24*7 ಆಸ್ಪತ್ರೆ ಆರಂಭಿಸುವಂತೆ ಒತ್ತಾಯಿಸಿ ಇದೀಗ ಅಭಿಯಾನ ಆರಂಭಿಸಲಾಗಿದೆ.

ಸುಬ್ರಹ್ಮಣ್ಯದಲ್ಲಿ ಏನಾದರೂ ಅವಘಡ, ಅಪಘಾತ, ಅನಾರೋಗ್ಯ ಸಂಭವಿಸಿದ್ದಲ್ಲಿ ತಕ್ಷಣಕ್ಕೆ ತುರ್ತು ಚಿಕಿತ್ಸೆ ನೀಡಲು ಸುಬ್ರಹ್ಮಣ್ಯದಲ್ಲಿ ಯಾವುದೇ ವ್ಯವಸ್ಥೆಗಳು ಇಲ್ಲದೇ ತುರ್ತು ಚಿಕಿತ್ಸೆ ಸಿಗದೆ ದೂರದೂರಿಗೆ ತೆರಳಬೇಕು. ಈ ವೇಳೆ ಚಿಕಿತ್ಸೆ ಸಿಗದೆ ಸಾವನ್ನಪ್ಪುವ ಘಟನೆಗಳು ನಡೆಯುತ್ತಿದ್ದು, ಈಗಾಗಲೇ ಹಲವು ಘಟನೆ ಸಂಭವಿಸಿದೆ. ಸುಬ್ರಹ್ಮಣ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು ಇದನ್ನು ಮೇಲ್ದರ್ಜೆಗೇರಿಸಿ ಸುಸಜ್ಜಿತವಾದ 247 ಎಲ್ಲಾ ಸೇವೆಗಳು ಹಾಗೂ ತುರ್ತು ಸೇವೆಗಳು ಸಿಗುವಂತಹ ವ್ಯವಸ್ಥೆ ಕಲ್ಪಸಿಬೇಕು ಎಂದು ಹಲವು ವರ್ಷಗಳಿಂದ ಒತ್ತಾಯಿಸುತ್ತಾ ಬರಲಾಗಿದೆ. ಆದರೆ ಈವರೆಗೆ ಇದಕ್ಕೆ ಸ್ಪಂಧನೆ ಸಿಗದೇ ಇರುವ ಹಿನ್ನೆಲೆಯಲ್ಲಿ ಇದೀಗ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ ಆಸ್ಪತ್ರೆ ಬೇಕು ಎಂದು ಅಭಿಯಾನ ಆರಂಬಿಸಲಾಗಿದೆ.


ಸಾಮಾಜಿಕ ಜಾಲತಾಣವಾದ ಎಕ್ಸ್ (ಟ್ವಿಟರ್) ಫೇಸ್ ಬುಕ್ ಮತ್ತೀತರ ತಾಣಗಳಲ್ಲಿ #we_want_hospital ಎಂಬ ಹ್ಯಾಸ್ ಟ್ಯಾಗ್ನೊಂದಿಗೆ ಪಿಎಂ, ಸಿಎಂ, ಡಿಸಿಎಂ, ಜನಪ್ರತಿನಿಧಿಗಳನ್ನು ಉಲ್ಲೇಖಿಸಿ ಟ್ವಿಟ್ ಮಾಡಿ ಸುಸಜ್ಜಿತ ಆಸ್ಪತ್ರೆಗೆ ಒತ್ತಾಯಿಸಿ ಅಭಿಯಾನ ನಡೆಸಲಾಗುತ್ತಿದೆ. ಇಲ್ಲಿ ಯಾತ್ರಾರ್ಥಿಗಳು ತಾವು ಅನುಭವಿಸಿದ ನೋವುಗಳನ್ನು ಹಂಚಿಕೊಂಡು ಪ್ರತಿಕ್ರಿಯೆ ಹಾಕುತ್ತಿದ್ದಾರೆ.

LEAVE A REPLY

Please enter your comment!
Please enter your name here