ಸವಣೂರು ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣ ಅಭಿವೃದ್ಧಿಗೆ ಚಾಲನೆ – ಉದ್ಯೋಗ ಖಾತ್ರಿ ಯೋಜನೆಯಡಿ 10 ಲಕ್ಷ ರೂ, ವೆಚ್ಚದ ಕಾಮಗಾರಿ

0

200 ಮೀಟರ್ ಟ್ರಾಕ್ ನಿರ್ಮಾಣ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವರದಾನ

ಪುತ್ತೂರು: ಸವಣೂರು ಗ್ರಾಮ ಪಂಚಾಯತ್ ವತಿಯಿಂದ ಜಿ.ಪಂ ಹಾಗೂ ತಾ. ಪಂ ಇದರ ಸಹಕಾರದಲ್ಲಿ ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣ ಅಭಿವೃದ್ಧಿಗೆ ಚಾಲನೆಯನ್ನು ನೀಡಲಾಯಿತು. ಉದ್ಯೋಗ ಖಾತ್ರಿ ಯೋಜನೆಯಡಿ ಈ ಕಾಮಗಾರಿ ನಿರ್ಮಾಣವಾಗಲಿದ್ದು, ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಕೆಲಸ ನಡೆಯಲಿದ್ದು, ಇದರಲ್ಲಿ ಸುಸಜ್ಜಿತವಾದ 200 ಮೀಟರ್ ಟ್ರಾಕ್ ನಿರ್ಮಾಣವಾಗಲಿದ್ದು, ಕ್ರೀಡಾಂಗಣದ ಸುತ್ತು ನೀರುಹರಿವಿಕೆಗೆ ಡ್ರೈನೇಜ್ ಕೂಡ ಈ ಕಾರ್‍ಯದಲ್ಲಿ ಬರಲಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಸವಣೂರು ಗ್ರಾ.ಪಂ, ಅಧ್ಯಕ್ಷೆ ಸುಂದರಿ ಬಿ.ಎಸ್ ವಹಿಸಿದ್ದರು. ಸವಣೂರು ಪದವಿ ಪೂರ್ವ ಕಾಲೇಜಿನ ಕಾರ್‍ಯಧ್ಯಕ್ಷ ಗಿರಿಶಂಕರ್ ಸುಲಾಯರವರು ಕಾಮಗಾರಿಗೆ ಚಾಲನೆಗೈದರು. ಕಡಬ ತಾ.ಪಂ, ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಕ್ರೀಡಾಂಗಣ ಅಭಿವೃದ್ಧಿಗೆ ಸಾಮಾಗ್ರಿ ಸರಬರಾಜುದಾರ ನವೀನ್ ರೈ, ಸವಣೂರು ಗ್ರಾ.ಪಂ, ಪಿಡಿಓ ಸಂದೇಶ್, ದೈಹಿಕ ಶಿಕ್ಷಣ ಶಿಕ್ಷಕರಾದ ಫಿಲೋಮಿನಾ ಕಾಲೇಜಿನ ಎಲಿಯಸ್ ಪಿಂಟೋ, ಬೆಥನಿ ಕಾಲೇಜಿನ ಮುತಾಯಿ, ನೂಜಿಬಾಲ್ತಿಲದ ಪುನೀತ್, ಎಂಎನ್‌ಆರ್‌ಇಜಿ ಇಂಜಿನಿಯರ್ ಮನೋಜ್, ಸವಣೂರು ಸ.ಪ.ಕಾಲೇಜಿನ ಪ್ರೌಢಶಾಲಾ ವಿಭಾಗದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಧಾಕೃಷ್ಣರವರುಗಳು ಉಪಸ್ಥಿತರಿದ್ದರು. ಸವಣೂರು ಗ್ರಾ.ಪಂ, ಸದಸ್ಯ ಬಾಬು ಎನ್, ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ಉಪಸ್ಥಿತರಿದ್ದರು.

ಸವಣೂರು ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಣೂರು ಸ.ಪ.ಕಾಲೇಜಿನ ಪ್ರೌಢಶಾಲಾ ಮುಖ್ಯಗುರು ರಘು ಸ್ವಾಗತಿಸಿ, ಸ.ಪ.ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ರಾಜೀವ ಶೆಟ್ಟಿ ವಂದಿಸಿದರು. ಸವಣೂರು ಗ್ರಾ.ಪಂ ಸಿಬ್ಬಂಧಿಗಳಾದ ದಯಾನಂದ ಮಾಲೆತ್ತಾರು, ಪ್ರಮೋದ್ ಕುಮಾರ್ ರೈ ನೂಜಾಜೆ, ಸ.ಪ.ಕಾಲೇಜ್‌ನ ಉಪನ್ಯಾಸಕರುಗಳು, ಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here