ಮಹಾಲಿಂಗೇಶ್ವರ ದೇವಳದ ಮಹಾಪೂಜೆ ಬಳಿಕ ತೆರಳಿದ ಕಾರ್ಯಕರ್ತರು
ಪುತ್ತೂರು: ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಶ್ರೀ ಬಾಲರಾಮನ ದರುಶನ ಪಡೆಯಲು ಪುತ್ತೂರು ಬಿಜೆಪಿಯಿಂದ 85 ಮಂದಿ ಕಾರ್ಯಕರ್ತರು ಮಾ.6ರಂದು ಅಯೋಧ್ಯೆಗೆ ತೆರಳಿದ್ದಾರೆ. ಕಾರ್ಯಕರ್ತರು ಮಧ್ಯಾಹ್ನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಪೂಜೆ ಬಳಿಕ ಶ್ರೀ ದೇವರ ಪ್ರಸಾದ ಭೋಜನ ಸ್ವೀಕರಿಸಿ ಅಯೋಧ್ಯೆ ಪ್ರಯಾಣ ಬೆಳೆಸಿದರು.
ಮೂರು ಜಿಲ್ಲೆಯಿಂದ 1400 ಮಂದಿ ತೆರಳಲಿದ್ದು ದಕ್ಷಿಣ ಕನ್ನಡ ಜಿಲ್ಲೆಯಿಂದ 450 ಮಂದಿ ಮಂದಿ ತೆರಳಲಿದ್ದು ಪುತ್ತೂರಿನಿಂದ 85 ಮಂದಿ ತೆರಳಲಿದ್ದಾರೆ. ಪುತ್ತೂರಿನಿಂದ ಮಂಗಳೂರಿಗೆ ಬಸ್‌ನಲ್ಲಿ ತೆರಳಿ ಅಲ್ಲಿಂದ ಅಯೋಧ್ಯೆಗೆ ರೈಲು ಮೂಲಕ ಪ್ರಯಾಣ ಮಾಡಲಿದ್ದಾರೆ. ಅವರನ್ನು ಪುತ್ತೂರಿನಲ್ಲಿ ಬೀಳ್ಕೊಡಲಾಯಿತು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಾಜಿ ಶಾಸಕ ಸಂಜೀವ ಮಠಂದೂರು, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ ಜೀವಂಧರ್ ಜೈನ್, ಬಿಜೆಪಿ ಪ್ರಮುಖರಾದ ಚಂದ್ರಶೇಖರ್ ರಾವ್ ಬಪ್ಪಳಿಗೆ ಸಹಿತ ಹಲವಾರು ಮಂದಿ ಅಯೋಧ್ಯೆಗೆ ತೆರಳುವ ಕಾರ್ಯಕರ್ತರನ್ನು ಬೀಳ್ಕೊಟ್ಟರು.
ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ನಿತೀಶ್ ಕುಮಾರ್ ಶಾಂತಿವನ, ಪುರುಷೋತ್ತಮ ಮುಂಗ್ಲಿಮನೆ, ಬಿಜೆಪಿಯ ಪ್ರಮುಖರಾದ ಹರೀಶ್ ಬಿಜತ್ರೆ, ಹರಿಪ್ರಸಾದ್ ಯಾದವ್, ಗೌರಿ ಬನ್ನೂರು, ಉಮೇಶ್ ನಾಯಕ್ ಸಹಿತ 85 ಮಂದಿ ಅಯೋಧ್ಯೆಗೆ ತೆರಳಲಿದ್ದಾರೆ.