ಸುದ್ದಿ ಅರಿವು ಕೃಷಿ ಕೇಂದ್ರದಿಂದ ಉದ್ಯಮಶೀಲತೆ, ಅಭಿವೃದ್ಧಿ ವಿಶೇಷ ಮಾಹಿತಿ ಕಾರ್ಯಾಗಾರ

0

ಪುತ್ತೂರು: ಪುತ್ತೂರು: ಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಸ್ವಂತ ಉದ್ಯಮ ಮಾಡುವವರಿಗೆ ಉದ್ಯಮಶೀಲತೆ, ಅಭಿವೃದ್ಧಿ ವಿಶೇಷ ಮಾಹಿತಿ ಕಾರ್ಯಾಗಾರ ಮಾ.6ರಂದು ಬೆಳಿಗ್ಗೆ ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಕಾಂಪ್ಲೆಕ್ಸ್‌ನಲ್ಲಿರುವ ಅರಿವು ಕೃಷಿ ಕೇಂದ್ರದಲ್ಲಿ ನಡೆಯಿತು. ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿ ಯೋಜನೆ ದ.ಕ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಕಾರ್ಯಕ್ರಮ ನಡೆಸಿಕೊಟ್ಟರು. ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ಪ್ರತಿಯೊಬ್ಬರ ದಾಖಲಾತಿ ಜೋಡಣೆ ಮತ್ತು ಉದ್ಯಮ ಪ್ರಾರಂಭಿಸಲು ಬೇಕಾದ ಅಂತಿಮ ಯೋಜನೆ ತಯಾರಿ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು. ಉಮೇಶ್ ರೈ ಕೈಕಾರ ಸೋಲಾರ್ ಉತ್ಪನ್ನ ಹಾಗೂ ಸೋಲಾರ್ ಗ್ರಿಡ್ ಮಾಹಿತಿ ನೀಡಿದರು. ಸುದ್ದಿ ಮಳೆಕೊಯ್ಲು ವಿಭಾಗದ ಹೊನ್ನಪ್ಪ ಗೌಡ ಮಳೆಕೊಯ್ಲು ಮಾಹಿತಿ ನೀಡಿದರು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕಿನ ಸರೋಜಿನಿ ಈಶ್ವರಮಂಗಲ, ಸುಲೈಮಾನ್ ಸುಳ್ಯ, ಸುಜಾತ ಕಾಣಿಯೂರು, ಅರವಿಂದ್ ಕಾಣಿಯೂರು, ಸತೀಶಚಂದ್ರ ಎ.ಎಸ್. ನಗರ, ಸುರೇಶ್ ಗೌಡ ಬೆಟ್ಟಂಪಾಡಿ, ಮಹಮ್ಮದ್ ಫೈಝಲ್ ಕಡಬ, ದೇವಿಪ್ರಸಾದ್ ಬಿ. ಬೆಟ್ಟಂಪಾಡಿ, ಸ್ವೀಡಾಲ್ ಪ್ರಿನ್ಸಿಯ ನೆಹರೂನಗರ, ರವಿರಾಜ್ ಬಿ.ಜೆ ಸುಳ್ಯ, ಎಂ ವಿಠ್ಠಲ್ ಭಟ್ ಕಾರ್ಜಾಲು, ಕೆ. ಪುರುಷೋತ್ತಮ, ಗಣೇಶ್ ಪಡ್ದಾಯೂರು, ಜಯರಾಜ್ ಶೆಟ್ಟರ್ ಹುಬ್ಳಿ ಟ್ರೇಡರ್ಸ್ ಪುತ್ತೂರು, ಜಗದೀಶ್ ಸುಳ್ಯ, ಜಲಜಾಕ್ಷಿ ಕುಂತೂರು, ಬಿ.ಕೆ ಪ್ರಕಾಶ್ ಕುಂತೂರು ಭಾಗವಹಿಸಿದ್ದರು. ಸುಳ್ಯ ಅರಿವು ಕೃಷಿ ಕೇಂದ್ರದ ರಮ್ಯಾ ಸ್ವಾಗತಿಸಿದರು. ಪುತ್ತೂರು ಅರಿವು ಕೃಷಿ ಕೇಂದ್ರದ ಸಿಬಂದಿಗಳಾದ ಚೈತ್ರಾ ಡಿ., ಹರಿಣಾಕ್ಷಿ, ಸಹಕರಿಸಿದರು.

LEAVE A REPLY

Please enter your comment!
Please enter your name here