ಅರಿಯಡ್ಕ:ಸಾರ್ವಜನಿಕ ಒತ್ತೆಕೋಲ ಸಮಿತಿ ಕೃಷ್ಣಪುರ ದರ್ಬೆತ್ತಡ್ಕ ಇದರ ವತಿಯಿಂದ ಮಾ.6 ರಂದು ಶ್ರೀ ವಿಷ್ಣು ಮೂರ್ತಿ ದೈವದ ಒತ್ತೆ ಕೋಲ ವಿಜ್ರಂಭಣೆಯಿಂದ ನಡೆಯಿತು.
ಬೆಳಿಗ್ಗೆ ಗಣಪತಿ ಹೋಮ ನಡೆದ ನಂತರ ಪೊನ್ನೆತ್ತಳ್ಕ ದೈವಸ್ಥಾನದಿಂದ ಭಂಡಾರ ತೆಗೆದು ಶ್ರೀ ಕ್ಷೇತ್ರ ದರ್ಬೆತ್ತಡ್ಕ ತಂದನಂತರ ಮೇಲೇರಿಗೆ ಅಗ್ನಿ ಸ್ಪರ್ಶ ಮಾಡಲಾಯಿತು.ಕ್ಷೇತ್ರದಲ್ಲಿ ಅಯ್ಯಪ್ಪ ಭಜನಾ ಮಂದಿರ ಮತ್ತು ಮಹಮ್ಮಾಯಿ ಮರಾಠಿ ಸಮಾಜ ಸೇವಾ ಸಂಘ ಮುಡಾಲ ಮೂಲೆ ಇವರಿಂದ ಭಜನಾ ಸೇವೆ, ಅಭಿನಯ ಕಲಾವಿದರು ಪುತ್ತೂರು ಇವರಿಂದ ತುಳು ನಾಟಕ ಮಣ್ಣ್ (ಕಾರ್ನಿಕದ) ನಡೆಯಿತು.ಕಾರ್ಯಕ್ರಮದಲ್ಲಿ ಸಾವಿರಾರು ಜನರಿಗೆ ಅನ್ನದಾನ ನಡೆಯಿತು.ರಾತ್ರಿ ಕುಳಿಚ್ಚಾಟ , ನಂತರ ವಿಷ್ಣು ಮೂರ್ತಿ ದೈವದ ಅಗ್ನಿ ಸೇವೆ , ಮಾರಿಕಳ,ಗುಳಿಗ ಕೋಲ ,ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಬಾಲಕೃಷ್ಣ ರೈ ಗೋವಿಂದ ಮೂಲೆ, ಮತ್ತು ರಾಮಚಂದ್ರ ಮಣಿಯಾಣಿ ಕುರಿಂಜ ಪೊನ್ನೆತ್ತಳ್ಕ, ಸಮಿತಿ ಅಧ್ಯಕ್ಷ ರವೀಂದ್ರ ಮಣಿಯಾಣಿ ದರ್ಬೆತ್ತಡ್ಕ, ಉಪಾಧ್ಯಕ್ಷರಾದ ರಮೇಶ್ ಸುವರ್ಣ ದರ್ಬೆತ್ತಡ್ಕ, ಮತ್ತು ಬಾಬು ಎ ದರ್ಬೆತ್ತಡ್ಕ,ಕಾರ್ಯದರ್ಶಿ ಸದಾನಂದ ಮಣಿಯಾಣಿ ಕೆ, ಜೊತೆ ಕಾರ್ಯದರ್ಶಿ ಪುಷ್ಪರಾಜ ಕುಡ್ಚಿಲ, ಕೋಶಾಧಿಕಾರಿ ಸಂತೋಷ್ ಪಾಂಡ್ಯಡ್ಕ, ಸಮಿತಿ ಪದಾಧಿಕಾರಿಗಳು, ಸಲಹೆಗಾರರು, ಸರ್ವ ಸದಸ್ಯರು ಹಾಗೂ ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.