ಸುಪ್ರಸಿದ್ಧ ಕಂಪೆನಿಗಳ ಗುಣಮಟ್ಟದ ಗ್ರಾಹಕಸ್ನೇಹಿ ಪಾದರಕ್ಷೆ ಮಳಿಗೆ, ಹವಾನಿಯಂತ್ರಿತ ನಯಾ ಚಪ್ಪಲ್ ಬಜಾರ್ ನವೀಕೃತಗೊಂಡು ಶುಭಾರಂಭ

0

ಪುತ್ತೂರು: ಕಳೆದ 28 ವರ್ಷಗಳಿಂದ ವಿವಿಧ ಸುಪ್ರಸಿದ್ಧ ಕಂಪೆನಿಗಳ ಗುಣಮಟ್ಟದ ಪಾದರಕ್ಷೆ ಉದ್ಯಮವನ್ನು ನಡೆಸಿಕೊಂಡು ಉತ್ತಮ ಗ್ರಾಹಕ ಸ್ನೇಹಿ ಎನಿಸಿಕೊಂಡಿರುವ ನಯಾ ಚಪ್ಪಲ್ ಬಜಾರ್ ಇದೀಗ ದರ್ಬೆ ಬುಶ್ರಾ ಕಾಂಪ್ಲೆಕ್ಸ್‌ನಲ್ಲಿ ನವೀಕೃತಗೊಂಡು ಹವಾನಿಯಂತ್ರಿತವುಳ್ಳ ಹೊಸತನದ ರೂಪವನ್ನು ಕಂಡುಕೊಂಡು ಮಾ.7 ರಂದು ಗ್ರಾಹಕರ ಸೇವೆಗೆ ಸಿದ್ಧವಾಗಿ ಲೋಕಾರ್ಪಣೆಗೊಂಡಿದೆ.

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ


ಪಾದರಕ್ಷೆ ಮಳಿಗೆಯು ಮತ್ತಷ್ಟು ಜನಮನ್ನಣೆ ಗಳಿಸುತ್ತಾ ಮುಂದುವರೆಯಲಿ-ಹರೇಕಳ ಹಾಜಬ್ಬ:
ನವೀಕೃತಗೊಂಡ ಮಳಿಗೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟನೆಗೊಳಿಸಿ ಮಾತನಾಡಿ, ನಾನೋರ್ವ ಸಾಮಾನ್ಯ ಮನುಷ್ಯ. ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ ಮುಂತಾದೆಡೆ ಕಿತ್ತಳೆ ಹಣ್ಣನ್ನು ಮಾರಿಕೊಂಡಿದ್ದ ನನ್ನ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರ 2013 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2020ರಲ್ಲಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ. ನನ್ನ ಸಾಧನೆಯ ಹಿಂದೆ ಮಾಧ್ಯಮಗಳ ಪ್ರಚಾರ ಕೂಡ ಬಹಳ ಮಹತ್ವದ್ದು. ನವೀಕೃತಗೊಂಡ ಪ್ರಾರಂಭಗೊಂಡ ಈ ಪಾದರಕ್ಷೆ ಮಳಿಗೆಯು ಮತ್ತಷ್ಟು ಜನಮನ್ನಣೆ ಗಳಿಸುತ್ತಾ ಮುಂದುವರೆಯಲಿ ಎಂದರು.


ರಫೀಕ್ ಸಹೋದರರ ಪಾದರಕ್ಷೆ ಮಳಿಗೆಯು ಪುತ್ತೂರಿನಲ್ಲಿ ಕ್ರಾಂತಿಯನ್ನು ಎಬ್ಬಿಸಿದೆ-ಮಠಂದೂರು:
ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ, ರಫೀಕ್ ಸಹೋದರರ ಪಾದರಕ್ಷೆ ಮಳಿಗೆಯು ಪುತ್ತೂರಿನಲ್ಲಿ ಕ್ರಾಂತಿಯನ್ನು ಎಬ್ಬಿಸಿದೆ. ಉತ್ತಮ ನಡವಳಿಕೆ, ವ್ಯಕ್ತಿತ್ವವುಳ್ಳವರು ನರನು ನಾರಾಯಣ, ಮನುಷ್ಯ ಮಾಧವನಾಗಬಲ್ಲ ಅಲ್ಲದೆ ಎತ್ತರದ ಶಿಖರಕ್ಕೆ ಏರಬಲ್ಲವನಾಗಿದ್ದಾನೆ. ಸಾಧನೆ ಮೂಲಕ ಹಾಜಬ್ಬರವರು ಸಮಾಜದಲ್ಲಿ ಹೇಗೆ ಗುರುತಿಸಿಕೊಂಡಿದ್ದಾರೋ ನಾವು ಕೂಡ ಅಂತಹ ಸಾಧನೆಯನ್ನು ಮಾಡುವವರಾಗಬೇಕು. ಈ ನಿಟ್ಟಿನಲ್ಲಿ ಕಳೆದ 40 ವರ್ಷಗಳ ಆತ್ಮೀಯತೆ ಹೊಂದಿರುವ ನನ್ನ ಸಹಪಾಠಿ ಎಂ.ಜಿ ರಝಾಕ್ ಸಹೋದರರ ಈ ಉದ್ದಿಮೆ ಯಶಸ್ವಿಯಾಗಲಿ ಎಂದರು.


ಯಾರಲ್ಲಿ ಹೇಗೆ ಮಾತನಾಡಬೇಕು ಎಂಬ ಕಲೆ ರಫೀಕ್‌ರವರಿಂದ ಕಲಿಯಬೇಕು-ಅಬ್ದುಲ್ ಅಝೀಜ್:
ಪ್ರಥಮ ಖರೀದುದಾರರಾಗಿ ಆಗಮಿಸಿದ ಬುಶ್ರಾ ಟವರ್ಸ್ ಮಾಲಕ ಅಬ್ದುಲ್ ಅಝೀಜ್‌ರವರು ಪ್ರಥಮ ಖರೀದಿ ಮಾಡುವ ಮೂಲಕ ಸಂಸ್ಥೆಗೆ ಚಾಲನೆ ನೀಡಿ ಮಾತನಾಡಿ, ನಾನು ಮತ್ತು ರಫೀಕ್ ಕಳೆದ 40 ವರ್ಷಗಳಿಂದ ಸ್ನೇಹಿತರು. ಈಗಲೂ ನಮ್ಮಿಬ್ಬರ ಸೌಹಾರ್ದತೆ ಮುಂದುವರೆದಿದೆ. ಯಾರಲ್ಲಿ ಹೇಗೆ ಮಾತನಾಡಬೇಕು ಎನ್ನುವ ಕಲೆ ರಫೀಕ್‌ರವರಿಂದ ಕಲಿಯಬೇಕು. ರಫೀಕ್‌ರವರ ದೂರದೃಷ್ಟಿತ್ವದ ಯೋಜನೆಯ ಈ ಶಾಖೆಗಳು ನೂರಾರು ಶಾಖೆಗಳಾಗಲಿ ಎಂದರು.


ರಫೀಕ್‌ರವರ ಪಾರದರ್ಶಕ ಸೇವೆ ಮೆಚ್ಚುವಂತಹುದು-ವಾಮನ್ ಪೈ:
ಅಧ್ಯಕ್ಷತೆ ವಹಿಸಿದ ಪುತ್ತೂರು ವರ್ತಕರ ಸಂಘದ ಅಧ್ಯಕ್ಷ ವಾಮನ್ ಪೈ ಮಾತನಾಡಿ, ನನ್ನ ಮತ್ತು ರಫೀಕ್‌ರವರ ಸ್ನೇಹ 23 ವರ್ಷದ್ದು. ರಫೀಕ್‌ರವರು ರಿಸ್ಕ್ ಎದುರಿಸಿಕೊಂಡು ಹಾಗೂ ಪ್ರಯತ್ನ ಹಾಕಿಕೊಂಡು ಉದ್ಯಮಕ್ಕೆ ಕೈ ಹಾಕಿ ಯಶಸ್ಸನ್ನು ಕಂಡುಕೊಂಡವರು. ಅವರ ಪಾರದರ್ಶಕ ಹಾಗೂ ಗುಣಮಟ್ಟದ ಸೇವೆಯು ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಅಲ್ಲದೆ ನ್ಯೂರೋ ಸರ್ಜನ್ ಡಾ.ಜಸ್ಪ್ರೀತ್ ಸಿಂಗ್‌ರವರು ತಿಂಗಳಿಗೆ ಒಂದು ಬಾರಿ ಪುತ್ತೂರಿನ ಜನೆತೆಗೆ ಸೇವೆ ನೀಡುವಂತಾಗಲಿ ಎಂದರು.


ರಫೀಕ್‌ರವರ ಉದ್ಯಮದಲ್ಲಿ ಹೊಸತನ ಇದ್ದೇ ಇದೆ-ಡಾ.ಅಶೋಕ್ ಪಡಿವಾಳ್:
ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್‌ನ ಡಾ.ಅಶೋಕ್ ಪಡಿವಾಳ್ ಮಾತನಾಡಿ, ರಫೀಕ್‌ರವರು ಉದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದವರು. ಅವರು ತನ್ನ ಉದ್ಯಮದಲ್ಲಿ ಯಾವುದಾದರೊಂದು ಹೊಸತನ ಇದ್ದೇ ಇದೆ. ಜೊತೆಗೆ ಅವರಲ್ಲಿನ ಟೀಮ್ ವರ್ಕ್ ಉತ್ತಮವಾಗಿ ಕೆಲಸ ಮಾಡುತ್ತದೆ ಎಂದರು.


ಪುತ್ತೂರು ಪರ್ಲ್ ಸಿಟಿಗೆ ಇದು ಪೂರಕವಾಗಿ ಪರಿಣಾಮಿಸುತ್ತದೆ-ಡಾ.ರಂಜಿತಾ ಶೆಟ್ಟಿ:
ಜಿಲ್ಲೆ 317ಡಿ ಇದರ ಲಿಯೋ ಅಧ್ಯಕ್ಷೆ ಹಾಗೂ 2023-24ರ ಲಿಯೋ/ಲಯನ್ ಕ್ಯಾಬಿನೆಟ್ ಸದಸ್ಯೆ ಡಾ.ರಂಜಿತಾ ಎಚ್.ಶೆಟ್ಟಿ ಮಾತನಾಡಿ, ನಾನು ಶಾಲೆಗೆ ಹೋಗುತ್ತಿದ್ದ ಸಂದರ್ಭ ನನ್ನ ತಾಯಿ ಪಾದರಕ್ಷೆ ಖರೀದಿಗೆ ಇದೇ ಅಂಗಡಿಗೆ ಕರೆದುಕೊಂಡು ಬರುತ್ತಿದ್ದರು. ಪುತ್ತೂರು ಪರ್ಲ್ ಸಿಟಿಗೆ ತೆರೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಇಂತಹ ಮಳಿಗೆಗಳು ಪೂರಕವಾಗಿ ಪರಿಣಮಿಸುತ್ತದೆ. ಹಿಂದೆಯೂ ಪುತ್ತೂರಿನ ಜನತೆಗೆ ಓಳ್ಳೆಯ ಸೇವೆಯನ್ನು ನೀಡಿದೆ, ಮುಂದಿನ ದಿನಗಳಲ್ಲೂ ಅದೇ ಸೇವೆ ಮುಂದುವರೆಯಲಿ ಎಂದರು.


ರಫೀಕ್‌ರವರ ಟೀಮ್‌ನಲ್ಲಿ ಉತ್ತಮ ನಾಯಕತ್ವವಿದ್ದು ಸಂಸ್ಥೆಯು ಉತ್ತರ ಶಿಖರಕ್ಕೇರಲಿ-ವಲೇರಿಯನ್ ಡಾಯಸ್:
ಎಪಿಎಂಸಿ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಲೇರಿಯನ್ ಡಾಯಸ್ ಮಾತನಾಡಿ, ಇಂದಿಲ್ಲಿ ಉದ್ಘಾಟನೆಗೊಂಡ ಈ ಪಾದರಕ್ಷೆಗಳ ಮಳಿಗೆಯು ಬೆಳೆಯುತ್ತಿರುವ ಪುತ್ತೂರಿಗೆ ಪೂರಕವಾಗಿದೆ. ರಫೀಕ್‌ರವರ ಟೀಮ್‌ನಲ್ಲಿ ಉತ್ತಮ ನಾಯಕತ್ವವಿದ್ದು ಸಂಸ್ಥೆಯು ಉತ್ತರ ಶಿಖರಕ್ಕೆ ಏರಲಿ ಎಂದರು.


ವ್ಯವಹಾರದ ಜೊತೆಗೆ ಗೆಳೆತನ ಇದು ರಫೀಕ್‌ರವರ ಒಳಗುಟ್ಟು-ಜೈರಾಜ್ ಭಂಡಾರಿ:
ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಜೈರಾಜ್ ಭಂಡಾರಿ ಮಾತನಾಡಿ, ವ್ಯವಹಾರದ ಜೊತೆಗೆ ಗೆಳೆತನ ಇದು ರಫೀಕ್‌ರವರ ಒಳಗುಟ್ಟು ಮತ್ತು ಇದು ಎಲ್ಲರಿಗೂ ಅನುಕರಣೀಯ. ರೋಟರಿ ಬಂಧುಗಳು ಕುಟುಂಬ ಸದಸ್ಯರಂತೆ ಪರಿಗಣಿಸುವುದು ಅವರ ಹೆಗ್ಗಳಿಕೆಯಾಗಿದೆ ಜೊತೆಗೆ ಯಾರಾದರೂ ಉತ್ತಮವಾಗಿ ಕೆಲಸ ಮಾಡಿದರೆ ಅವರನ್ನು ಗುರುತಿಸುವುದು ಕೂಡ ಹೆಗ್ಗಳಿಕೆಯಾಗಿದೆ ಎಂದರು.


ಮಾತನಾಡುವುದಲ್ಲ, ಕೆಲಸ ಮಾಡಿ ತೋರಿಸುವುದು ಓರ್ವ ವೈದ್ಯನ ಕೆಲಸವಾಗಿದೆ-ಡಾ.ಜಸ್ಪ್ರೀತ್ ಸಿಂಗ್:
ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯ ಡಾ.ಜಸ್ಪ್ರೀತ್ ಸಿಂಗ್ ದಿಲ್ ಮಾತನಾಡಿ, ಮಾತನಾಡುವುದಲ್ಲ ಬದಲಾಗಿ ಕೆಲಸ ಮಾಡಿ ತೋರಿಸುವುದು ಓರ್ವ ವೈದ್ಯನ ಕೆಲಸವಾಗಿದೆ. ಈ ಸಂಸ್ಥೆಯ ಪಾಲುದಾರ ಅಬೂಬಕ್ಕರ್ ಸಿದ್ಧೀಕ್‌ರವರ ಆಸೆಯಂತೆ ನಾನು ಪುತ್ತೂರಿಗೆ ಪ್ರಥಮ ಬಾರಿ ಬಂದಿರುತ್ತೇನೆ ಅಲ್ಲದೆ ಪ್ರಸ್ತುತ ಪುತ್ತೂರು ಬಹಳ ಅಭಿವೃದ್ಧಿ ಹೊಂದಿದೆ ಎಂದರು.


ಪುತ್ತೂರು ಸಂಯುಕ್ತ ಜಮಾಅತ್ ಸಮಿತಿ ಅಧ್ಯಕ್ಷ ಹಾಗೂ ಕಲ್ಲೇಗ ಜುಮಾ ಮಸ್ಜಿದ್ ಅಧ್ಯಕ್ಷ ಮೊಹಮದ್ ಹಾಜಿ ಕೆ.ಪಿ, ಪುತ್ತೂರು-ದರ್ಬೆ ಬಿ.ಒ.ಬಿ ಚೀಫ್ ಮ್ಯಾನೇಜರ್ ಸಾದಿಕ್ ಎಸ್.ಎಂ, ಪುತ್ತೂರು ಸಿಝ್ಲರ್, ಅಗ್ರಿಝೋನ್ ಸಂಸ್ಥೆಯು ಮುಖ್ಯಸ್ಥ ಪಿ.ಎನ್ ಪ್ರಸನ್ನ ಕುಮಾರ್ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮದ್ ಆಲಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ನ್ಯೂ ಮಂಗಳೂರು ಫರ್ನಿಚರ್ ಸಂಸ್ಥೆಯ ಮುಖ್ಯಸ್ಥ ಇಸ್ಮಾಯಿಲ್, ರೋಟರಿ ಕ್ಲಬ್ ಪುತ್ತೂರು ಇದರ ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರು, ಪುತ್ತೂರು ವರ್ತಕರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಸಹಿತ ಹಲವರು ಉಪಸ್ಥಿತರಿದ್ದರು.


ಪುಟಾಣಿ ಮಕ್ಕಳು ಪ್ರಾರ್ಥಿಸಿದರು. ನಯಾ ಚಪ್ಪಲ್ ಬಝಾರ್ ಮಾಲಕ ಎಂ.ಜಿ ರಫೀಕ್ ಸ್ವಾಗತಿಸಿ, ಹಿರಿಯ ಸಹೋದರ ಪುತ್ತೂರು ಮದರ್ ಇಂಡಿಯಾ ಮಾಲಕ ಎಂ.ಜಿ ರಝಾಕ್ ವಂದಿಸಿದರು. ನಿವೃತ್ತ ಹಿರಿಯ ಶಿಕ್ಷಕ ಹಾಗೂ ರೋಟರಿ ಕ್ಲಬ್ ಪುತ್ತೂರು ಸದಸ್ಯ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ಗ್ರಾಹಕರು ಪ್ರೋತ್ಸಾಹಿಸಿ, ಆಶೀರ್ವದಿಸಿ..
ಪುತ್ತೂರಿನ ಬಸ್‌ಸ್ಟ್ಯಾಂಡ್ ಬಳಿಯ ಕಟ್ಟಡದಲ್ಲಿ ಪ್ರಾರಂಭಗೊಂಡು ಇದೀಗ ದರ್ಬೆಯಲ್ಲಿ ಕಳೆದ 28 ವರ್ಷಗಳಿಂದ ಪಾದರಕ್ಷೆ ಉದ್ಯಮವನ್ನು ನಡೆಸಿಕೊಂಡು ಬಂದಿರುತ್ತೇವೆ. ನಮ್ಮ ಉದ್ಯಮವು ಯಶಸ್ವಿಯಾಗಬೇಕಾದರೆ ಅದಕ್ಕೆ ಕಾರಣರು ಪುತ್ತೂರು ಹಾಗೂ ಪುತ್ತೂರಿನ ಆಸುಪಾಸಿನ ಜನತೆ. ಅಂದಿನ ಪೀಳಿಗೆ ಬೇರೆ, ಇಂದಿನ ಪೀಳಿಗೆ ಬೇರೆ. ಕಾಲಕಾಲಕ್ಕೆ ಹೊಂದಿಕೊಂಡು ನಮ್ಮ ವ್ಯವಹಾರ ನಡೆಯುತ್ತಾ ಬಂದಿದೆ. ಇದೀಗ ಸಂಸ್ಥೆಯು ಪಾಲುದಾರ ಅಬೂಬಕ್ಕರ್ ಸಿದ್ಧೀಕ್‌ರವರೊಡಗೂಡಿ ಹೊಸತನಕ್ಕೆ ಕೈಹಾಕಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಂಡು ಆಶೀರ್ವದಿಸಬೇಕು.
-ಎಂ.ಜಿ ರಫೀಕ್, ಮಾಲಕರು, ನಯಾ ಚಪ್ಪಲ್ ಬಜಾರ್

ಸನ್ಮಾನ/ಅಭಿನಂದನೆ..
ಸಂಸ್ಥೆಯಲ್ಲಿ ಕಳೆದ 15 ವರುಷಗಳಿಂದ ಸೇವೆಗೈಯುತ್ತಾ ಬಂದಿರುವ ದಿನೇಶ್ ಪೂಜಾರಿ ಹಾಗೂ ಪ್ರಶಾಂತ್ ಪೂಜಾರಿ, ಸಂಸ್ಥೆಯ ನವೀಕೃತಕ್ಕೆ ಶ್ರಮಿಸಿದ ಕಾರ್ಪೆಂಟರ್ ನೈಮಾ, ಎಲೆಕ್ಟ್ರೀಶಿಯನ್ ಬಾತಿಶ್ ಸಂಪ್ಯ, ಸಂಸ್ಥೆಯ ಅಕೌಂಟ್ಸ್ ಸಲಹೆಗಾರ ಕೃಷ್ಣ ಎಂ, ಕಾರ್ಯಕ್ರಮ ನಿರೂಪಿಸಿದ ಹಿರಿಯ ಶಿಕ್ಷಕ ಸುರೇಶ್ ಶೆಟ್ಟಿ, ಆರ್ಕಿಟೆಕ್ಟ್ ವರುಣ್ ಪಿ.ಶೆಟ್ಟಿರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here