ಕೌಕ್ರಾಡಿ ಸುದೆಗಂಡಿ: ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ-ಸವಾರರಿಗೆ ಗಾಯ

0

ನೆಲ್ಯಾಡಿ: ಬೈಕ್ ಹಾಗೂ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಎರಡೂ ವಾಹನಗಳು ಜಖಂಗೊಂಡು ಮೂವರು ಗಾಯಗೊಂಡ ಘಟನೆ ಮಾ.5ರಂದು ಕೌಕ್ರಾಡಿ ಗ್ರಾಮದ ಸುದೆಗಂಡಿ ಎಂಬಲ್ಲಿ ನಡೆದಿದೆ.

ಕೊಕ್ಕಡ ನಿವಾಸಿ ಮಹಮ್ಮದ್ ನೌಫಾಲ್ ಹಾಗೂ ಅವರ ತಂದೆ ಎಂ.ಇಬ್ರಾಹಿಂ ಎಂಬವರು ಕೊಕ್ಕಡದಿಂದ ಅರಸಿನಮಕ್ಕಿ ಕಡೆಗೆ ಬೈಕ್(ಕೆಎ 21, ಕೆ 9222)ನಲ್ಲಿ ಹೋಗುತ್ತಿದ್ದ ವೇಳೆ ಅರಸಿನಮಕ್ಕಿಯಿಂದ ಕೊಕ್ಕಡ ಕಡೆಗೆ ಮೋಹನ್ ಶೆಟ್ಟಿ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಸ್ಕೂಟರ್ (ಕೆಎ21, ಎಸ್ 4804) ನಡುವೆ ಕೌಕ್ರಾಡಿ ಗ್ರಾಮದ ಸುದೆಗಂಡಿ ಎಂಬಲ್ಲಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿದ್ದು ಮೂವರಿಗೂ ಗಾಯವಾಗಿದೆ. ಘಟನೆ ಕುರಿತಂತೆ ಮಹಮ್ಮದ್ ನೌಫಾಲ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here