ಪಾಪೆಮಜಲು ಸರಕಾರಿ ಪ್ರೌಢಶಾಲೆಯಲ್ಲಿ ಸಾಧಕರಿಗೆ ಅಭಿನಂದನಾ ಸಮಾರಂಭ

0

ಪುತ್ತೂರು: ಪಾಪೆಮಜಲು ಸರ್ಕಾರಿ ಪ್ರೌಢಶಾಲೆಯಲ್ಲಿ ಮಾ.7ರಂದು ಡಾಕ್ಟರೇಟ್ ಪದವಿ ಪಡೆದ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಸವಣೂರಿನಲ್ಲಿ ಸಂಗೀತ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಪವಿತ್ರ ಉಡುಪ ಹಾಗೂ ಸರಕಾರಿ ಪ್ರೌಢಶಾಲೆ ಪಾಪೆಮಜಲಿನ ಹಿರಿಯ ವಿದ್ಯಾರ್ಥಿ ನಿಟ್ಟೆ ಸಂಶೋಧನಾ ಕೇಂದ್ರದಲ್ಲಿ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಅನುಪ್ ಕೃಷ್ಣ ರೈ ಕುತ್ಯಾಡಿ ಇವರಿಗೆ ಅಭಿನಂದನಾ ಸಮಾರಂಭ ನಡೆಯಿತು.

ರಾಜ್ಯ ಗೈಡ್ಸ್ ಪುರಸ್ಕಾರ ಪಡೆಯಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಾಪೆಮಜಲು ಇಲ್ಲಿನ ಗೈಡ್ಸ್ ಶಿಕ್ಷಕಿ ಮೇಬಲ್ ಡಿಸೋಜಾ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ರಾಜ್ಯ ಪುರಸ್ಕಾರ ಪಡೆದ 10ನೇ ತರಗತಿಯ ಭವ್ಯಶ್ರೀ ಮೋಕ್ಷ ಬಿ ಹಾಗೂ ನಯನ ಶ್ರೀ ಇವರನ್ನು ರಾಜ್ಯಮಟ್ಟದಿಂದ ನೀಡಲಾದ ಗೈಡ್ಸ್ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಉದಯವಾಣಿ ದಿನಪತ್ರಿಕೆಯ ಶೈಕ್ಷಣಿಕ ಮಾರ್ಗದರ್ಶಿಯ ರಸಪ್ರಶ್ನೆ ವಿಭಾಗದಲ್ಲಿ ಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿನಿ ಮೋಕ್ಷಾ ಭಿ ಭಾಗವಹಿಸಿದ್ದು, ಉದಯವಾಣಿಯಿಂದ ಕೊಡ ಮಾಡಿದ ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಸಂಸ್ಥೆಯ ಪರವಾಗಿ ದೈಹಿಕ ಶಿಕ್ಷಣ ಶಿಕ್ಷಕಿ ಪ್ರವೀಣಾ ರೈ ಬಿ ಸನ್ಮಾನಿತರನ್ನು ಪರಿಚಯಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರಕಾರಿ ಪ್ರೌಢಶಾಲೆ ಕೊಂಬೆಟ್ಟು ಇಲ್ಲಿಯ ಮುಖ್ಯ ಗುರುಗಳಾದ ವಸಂತ ಮೂಲ್ಯ ಪಿ ಮತ್ತು ಶಾಲಾ ಎಸ್‌ಡಿಎಂಸಿಯ ನಿಕಟಪೂರ್ವ ಕಾರ್ಯಾಧ್ಯಕ್ಷರಾದ ತಿಲಕ್ ರೈ ಕುತ್ಯಾಡಿ ಇವರು ಮಾತನಾಡಿ ಶುಭ ಹಾರೈಸಿದರು. ಸನ್ಮಾನ ಸ್ವೀಕರಿಸಿದ ಡಾ .ಪವಿತ್ರ ಉಡುಪ, ಡಾ .ಅನುಪ್ ಕೃಷ್ಣ ರೈ ಹಾಗೂ ಮೇಬಲ್ ಡಿ ಸೋಜ ತಮ್ಮ ಮನದಾಳದ ಮಾತುಗಳನ್ನಾಡಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಸ್‌ಡಿಎಂಸಿ ಕಾರ್ಯಾಧ್ಯಕ್ಷರಾದ ಇಕ್ಬಾಲ್ ಹುಸೇನ್ ರವರು ಶುಭ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಶಿಕ್ಷಣ ತಜ್ಞರಾದ ದಶರಥ ರೈ ಕುತ್ಯಾಡಿ ಎಸ್‌ಡಿಎಂಸಿ ಯ ಪೋಷಕ ಪ್ರತಿನಿಧಿಗಳಾದ ಸುಂದರಿ ಲೀಲಾವತಿ ರೇವತಿ ಭಾಗಿರಥಿ ಹಾಗೂ ಹೊನ್ನಪ್ಪ ನಾಯ್ಕ ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯ ಗುರುಗಳಾದ ಮೋನಪ್ಪ ಬಿ ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪೂರ್ಣಿಮಾ ಶೆಟ್ಟಿ, ಇಂದಿರಾ ಕೆ, ಶಾಲೆಟ್ ಜೇನ್ ರೆಬೆಲ್ಲೊ ಮತ್ತು ಹರಿಣಾಕ್ಷಿ ಕೆ ಸಹಕರಿಸಿದರು. ಸಂಸ್ಥೆಯ ಗಣಿತ ಶಿಕ್ಷಕ ಹರಿಪ್ರಸಾದ್ ವಂದಿಸಿ, ಸಮಾಜ ಶಿಕ್ಷಕೆ ಸವಿತಾ ಪಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here