ಪುತ್ತೂರು: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವವು ಮಾ.6ರಂದು ಪ್ರಾರಂಭಗೊಂಡಿದ್ದು ಮಾ.9 ರಂದು ಬೆಳಿಗ್ಗೆ ಉತ್ಸವ ಬಲಿ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ಇದರ ಕಲಾವಿದರಿಂದ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ಇವರ ನಿರ್ದೇಶನದಲ್ಲಿ ನೃತ್ಯಾರ್ಪಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ದೀಪ ಪ್ವಜ್ವಲನೆಯ ಮೂಲಕ ದೇವಳದ ಪವಿತ್ರ ಪಾಣಿ ಗೋಪಾಲಕೃಷ್ಣ ಕುಂಜತ್ತಾಯ ಮೆಣಸಿನಕಾನ, ವಿದ್ವಾನ್ ದೀಪಕ್ ಕುಮಾರ್‌ರವರ ತಾಯಿ ಶಶಿಪ್ರಭಾರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ವಿದ್ವಾನ್ ದೀಪಕ್ ಕುಮಾರ್ ಬಿ ಮತ್ತು ವಿದುಷಿ ಪ್ರೀತಿಕಲಾ ಮತ್ತು ವಿದ್ಯಾನ್ ಗಿರೀಶ್ ಕುಮಾರ್ ಬಿ ಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವಿದ್ವಾನ್ ದೀಪಕ್ ಕುಮಾರ್ ಹಾಗೂ ವಿದ್ವಾನ್ ಗಿರೀಶ್‌ರವರ ತಾಯಿಯನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಹಳೆ ವಿದ್ಯಾರ್ಥಿಗಳ ಪೋಷಕರಾದ ರುದ್ರಯ್ಯ ಮಾಸ್ಟರ್ ಈಶ್ವರಮಂಗಲ, ನಾಗಪ್ಪ ಗೌಡ ಈಶ್ವರಮಂಗಲ, ಹೊಸಂಗಡಿ ಶ್ರೀಕೃಷ್ಣ ಭಟ್, ಸರೋಜಿನಿ ನಾಗಪ್ಪಯ್ಯ, ಶೋಭಾಲಕ್ಷ್ಮಿ, ಪ್ರೇಮಾ ಮಾಣಿಲತ್ತಾಯ, ಯಶೋಧ ಗಣಪತಿ ಭಟ್, ನಾಗಪ್ಪಯ್ಯ ಮಾಸ್ಟರ್ ಹಾಗೂ ಹಳೆಯ ವಿದ್ಯಾರ್ಥಿಗಳಾದ ಗುರುಪ್ರಸಾದ್ ಐ.ಆರ್, ಚೇತನ ಶಶಿಕಾಂತ, ಸುಶ್ಮ ಮುರಳಿ, ತೇಜಸ್ವಿನಿ ಕಿರಣ್, ಆಶಾ ರವಿ, ಜೀಣೋದ್ಧಾರ ಸಮಿತಿ ಅಧ್ಯಕ್ಷ ಮಂಜುನಾಥ ರೈ ಸಾಂತ್ಯ, ಕಾರ್ಯದರ್ಶಿ ಮೋಹನ್‌ದಾಸ್ ಶೆಟ್ಟಿ ನೂಜಿಬೈಲು, ರಾಮ ಮೇನಾಲ ಉಪಸ್ಥಿತರಿದ್ದರು.
ರಾತ್ರಿ ಉತ್ಸವ ಬಲಿ, ಅನ್ನಸಂತರ್ಪಣೆ ನಡೆಯಿತು. ಬಳಿಕ ಶ್ರೀ ಶಿವಪಂಚಾಕ್ಷರಿ ಯಕ್ಷ ಪ್ರತಿಷ್ಠಾನಂ ಈಶ್ವರಮಂಗಲ ಇದರ ಬಾಲಕಲಾವಿದರಿಂದ ಯಕ್ಷಗಾನ ಬಯಲಾಟ ಮಹಿಷ ವಧೆ, ಶಾಂಭವಿ ವಿಲಾಸ ನಡೆಯಿತು.