ಕಾಣಿಯೂರು: ಬೊಬ್ಬೆಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷಯ ಕಾಲೇಜು ಪುತ್ತೂರು ಇದರ ನೇತೃತ್ವದಲ್ಲಿ ಮಾ.5ರಿಂದ ಮಾ.11ರವರೆಗೆ ನಡೆದ ರಾಷ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಂದರ್ಭದಲ್ಲಿ ಬೊಬ್ಬೆಕೇರಿ ಶಾಲೆಯ ಕೊಠಡಿಗಳಿಗೆ ಪೈಂಟ್ ನ ವ್ಯವಸ್ಥೆಯನ್ನು ಮಾಡಿರುವ ಪುತ್ತೂರು ಸಂಪ್ಯ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು ಅವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ಶಿಬಿರದ ನೇತೃತ್ವವನ್ನು ವಹಿಸಿರುವ ಅಕ್ಷಯ ಕಾಲೇಜಿನ ಉಪನ್ಯಾಸಕರು, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಕಿಶೋರ್ ಕುಮಾರ್ ರೈ ಮತ್ತು ಉಪನ್ಯಾಸಕಿ , ಸಹ ಯೋಜನಾಧಿಕಾರಿ ಮೇಘಶ್ರೀ ಅವರನ್ನು ಗೌರವಿಸಲಾಯಿತು. ಮಂಗಳೂರು 6ನೇ ಜೆ.ಎಂ.ಎಫ್.ಸಿ ನ್ಯಾಯಾಲಯದ ಸಹಾಯಕ ಸರಕಾರಿ ವಕೀಲರಾದ ಜನಾರ್ದನ ಬಿ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬೊಬ್ಬೆಕೇರಿ ಸ. ಹಿ. ಪ್ರಾ. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ತೀರ್ಥಕುಮಾರ್ ಪೈಕ, ಶಾಲಾ ಶಿಕ್ಷಕ ಜನಾರ್ದನ ಹೇಮಳ, ಬೊಬ್ಬೆಕೇರಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಕೋಶಾಧಿಕಾರಿ ಸುಕುಮಾರ್ ಕಲ್ಪಡ, ಜತೆ ಕಾರ್ಯದರ್ಶಿ ಅಶ್ವಿನ್ ಕರಿಮಜಲು, ನಿವೃತ್ತ ಸೈನಿಕರು, ಬೊಬ್ಬೆಕೇರಿ ಶಾಲಾ ಚಿಣ್ಣರ ಮಂಟಪದ ಅಧ್ಯಕ್ಷ ಮಹೇಶ್ ಪೈಕ,
ಪುತ್ತೂರು ಅಕ್ಷಯ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಪಕ್ಕಳ, ಪುತ್ತೂರು ಅಕ್ಷಯ ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಪುಣ್ಚತ್ತಾರು ಕಾರ್ತೀಕೆಯ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಸೌಮ್ಯ ಪೈಕ, ನಾವೂರು ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ರೇವತಿ ಬೀರ್ನೆಲು, ಶಿಕ್ಷಕಿಯರಾದ ಶೃತಿ, ದಿವ್ಯಾ ಉಪಸ್ಥಿತರಿದ್ದರು.