ನೆಹರು ನಗರ ಟೋಟಲ್ ಎನರ್ಜಿಸ್ ಗ್ಯಾಸ್ ಸ್ಟೇಸನ್‌ನಲ್ಲಿ ಸ್ಕೀಮ್ ಕೂಪನ್‌ಗಳ ಲಕ್ಕಿ ಡ್ರಾ

0

ಪುತ್ತೂರು: ನೆಹರು ನಗರ ಟೋಟಲ್ ಎನರ್ಜಿಸ್ ಗ್ಯಾಸ್ ಸ್ಟೇಸನ್‌ನಲ್ಲಿ ಗ್ರಾಹಕರಿಗೆ ನೀಡಲಾದ ಲಕ್ಕೀ ಕೂಪನ್‌ಗಳ ಡ್ರಾ. ನಡೆಯಿತು. ಗ್ರಾಹಕರಿಗೆ ಗ್ಯಾಸ್ ಜತೆಗೆ ನೀಡಲಾದ ಕೂಪನ್‌ನಲ್ಲಿ 10,000 ರೂ.ನ ವೋಚರ್, 2 ಸ್ಕೂಟರ್ ಹಾಗೂ ಬಂಪರ್ ಬಹುಮಾನವಾಗಿ ಅಟೋರಿಕ್ಷಾ ಪಡೆಯುವ ಅವಕಾಶವನ್ನು ನೀಡಲಾಗಿತ್ತು. ಟೋಟಲ್ ಎನರ್ಜೀಸ್‌ನ 13 ಸ್ಟೇಷನ್‌ನಲ್ಲಿ ಗ್ರಾಹಕರಿಗೆ ರೂ.10,000 ದ ವೋಚರ್‌ನ ಲಕ್ಕೀ ಕೂಪನ್ ನೀಡಲಾಗಿತ್ತು.


ಟೋಟಲ್ ಎನರ್ಜೀಸ್ ಗ್ರಾಸ್‌ನ 13 ಸ್ಟೇಷನ್‌ಗಳಾದ ಕುಂದಾಪುರ, ಉಡುಪಿ, ಕುಮಟಾ, ಮಂಗಳೂರು, ಸುರತ್ಕಲ್, ಮಣಿಪಾಲ, ಕಾರ್ಕಳ, ಬ್ರಹ್ಮಾವರ, ಹುಬ್ಬಳ್ಳಿ, ಉಪ್ಪಿನಂಗಡಿ, ದರ್ಬೆ ಹಾಗೂ ನೆಹರು ನಗರ ಸ್ಟೇಷನ್‌ನಲ್ಲಿ ನೀಡಲಾದ ಲಕ್ಕೀ ಕೂಪನ್‌ಗಳ ಡ್ರಾ.ವನ್ನು ಪ್ರತ್ಯೇಕವಾಗಿ ಗ್ರಾಹಕರ ಸಮ್ಮುಖದಲ್ಲಿ ನಡೆಸಲಾಯಿತು. ಉಪ್ಪಿನಂಗಡಿ ಸ್ಟೇಷನ್‌ನಲ್ಲಿ ನೀಡಲಾದ ಲಕ್ಕೀ ಕೂಪನ್‌ನಲ್ಲಿ ಕೃಷ್ಣ ರೂ.10,000 ವೋಚರ್‌ನ ವಿಜೇತರಾದರು. ದರ್ಬೆ ಸ್ಟೇಷನ್‌ನಲ್ಲಿ ನೀಡಲಾದ ಲಕ್ಕೀ ಕೂಪನ್‌ನಲ್ಲಿ ಮಹಮ್ಮದ್ ಮತ್ತು ಅಕ್ಷಯ್ ತಲಾ ರೂ.50000 ವೋಚರ್ ವಿಜೇತರಾದರು. ನೆಹರು ನಗರ ಸ್ಟೇಷನ್‌ನಲ್ಲಿ ನೀಡಲಾದ ಲಕ್ಕೀ ಕೂಪನ್‌ನಲ್ಲಿ ಸುರೇಶ್ ಮತ್ತು ಹಮೀದ್ ಎನ್.ರವರು ತಲಾ ರೂ.5000 ವೋಚರ್‌ನ ವಿಜೇತರಾದರು. 2 ಸ್ಕೂಟರ್ ಡ್ರಾ.ದಲ್ಲಿ ನವೀನ್ ಮತ್ತು ಹ್ಯಾರೀಸ್ ಸ್ಕೂಟರ್ ವಿಜೇತರಾದರು. ಗ್ರಾಹಕರು ಡ್ರಾ. ನಡೆಸಿದರು. ಬಂಪರ್ ಡ್ರಾ ಆಟೋ ವಿಜೇತರಾಗಿ ರಮೇಶ್ ವಿಜೇತರಾದರು. ಟೋಟಲ್ ಎನರ್ಜಿಸ್‌ನ ಸೇಲ್ಸ್ ಮ್ಯಾನೇಜರ್ ಸಂತೋಷ್ ಬಿ.ಎಮ್. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಬೇಬಿ ಸಮೃದ್ಧಿ ಬಂಪರ್ ಡ್ರಾ. ನಡೆಸಿದರು.
ಪುತ್ತೂರು ಪೆಟ್ರೋ ಪ್ರೊಡಕ್ಟ್ನ ಉದಯ ಭಟ್, ಕೃಷ್ಣ ಭಟ್, ಟೋಟಲ್ ಎನರ್ಜಿಸ್‌ನ ಸೇಲ್ಸ್ ಆಫೀಸರ್ ಮಹಾಂತಯ್ಯ, ವಿಪ್ಲವ ರಾವ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here