ಆಲಂಕಾರು: ಸೀಮಾ ದೇವಸ್ಥಾನ ಶ್ರೀಕ್ಷೇತ್ರ ಶರವೂರು ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಮಾ.14 ರಿಂದ ಮಾ.24ರ ತನಕ ಜಾತ್ರೋತ್ಸವ ನಡೆಯಲಿದೆ.ಮಾ.14ರಂದು ಬೆಳಿಗ್ಗೆ ಸ್ವಸ್ತಿ ಪುಣ್ಯಾಹ ವಾಚನ, ನವಕ ಪ್ರದಾನ, ಗಣಹೋಮ, ಕಲಶಾಭಿಷೇಕ, ಗೊನೆಮುಹೂರ್ತ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಧ್ವಜಾರೋಹಣ, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಮಾ.15 ರಂದು ಮಧ್ಯಾಹ್ನ ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ, ರಾತ್ರಿ ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ ನಡೆಯಲಿದೆ.
ಮಾ.16 ರಂದು ಮಧ್ಯಾಹ್ನ ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ, ಸಾಯಂಕಾಲ ದೈವಗಳ ಭಂಡಾರ ತೆಗೆದು ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ ಅನ್ನಸಂತರ್ಪಣೆಯಾಗಿ ರಾತ್ರಿ ಅರಸು ಉಳ್ಳಾಯ, ಮಹಿಷಂತಾಯ ಮತ್ತು ರಕ್ತೇಶ್ವರೀ ದೈವಗಳ ನರ್ತನೋತ್ಸವ, ಮಾ 17 ರಂದು ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ ಸಂಜೆ ದೈವಗಳ ಭಂಡಾರ ತೆಗೆದು ಉಗ್ರಾಣ ಮುಹೂರ್ತ, ಬಲಿಹೊರಟು ಉತ್ಸವ, ವಸಂತ ಕಟ್ಟೆಪೂಜೆ, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ರುಧಿರ ಚಾಮುಂಡಿ, ಧೂಮಾವತಿ, ಬಂಟ ಮತ್ತು ಕೊಡಮಣಿತ್ತಾಯ ದೈವಗಳ ನರ್ತನೋತ್ಸವ, ಮಾ.18ರಂದು ಬೆಳಿಗ್ಗೆ ಬಲಿ ಹೊರಟು ಉತ್ಸವ, ಮಧ್ಯಾಹ್ನ ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ, ಸಂಜೆ ಬಲಿಹೊರಟು ಉತ್ಸವ, ವಸಂತ ಕಟ್ಟೆಪೂಜೆ, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ ನಡೆಯಲಿದೆ. ಮಾ.19 ರಂದು ಬಲಿಹೊರಟು ಉತ್ಸವ ಮಧ್ಯಾಹ್ನ ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ, ಸಾಯಂಕಾಲ ಬಲಿ ಹೊರಟು ಉತ್ಸವ, ಆಲಂಕಾರು ಪೇಟೆ ಸವಾರಿ, ಆಲಂಕಾರು ಸಾರ್ವಜನಿಕ ಕಟ್ಟೆಪೂಜೆ, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ, ಮಾ.20 ರಂದು ಬಲಿಹೊರಟು ಉತ್ಸವ, ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ, ಬಲಿಹೊರಟು ಉತ್ಸವ, ವಸಂತಕಟ್ಟೆ ಪೂಜೆ, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ, ಮಾ.21 ರಂದು ಬೆಳಿಗ್ಗೆ ಬಲಿಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ಸವಾರಿ ಕಟ್ಟೆ ಪೂಜೆ, ಕೆರೆ ಉತ್ಸವ, ಉತ್ಸವ, ವಸಂತ ಕಟ್ಟೆಪೂಜೆ, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ, ಮಾ.22 ರಂದು ಬೆಳಿಗ್ಗೆ ಬಲಿ ಹೊರಟು ಉತ್ಸವ, ಆಶ್ಲೇಷ ಬಲಿ ಮಧ್ಯಾಹ್ನ ಮಹಾಪೂಜೆ, ನಿತ್ಯಬಲಿ ಪ್ರಸಾದ ವಿತರಣೆ ರಾತ್ರಿ ಮಹಾರಥೋತ್ಸವ ಉತ್ಸವ, ವಸಂತಕಟ್ಟೆ ಪೂಜೆ, ಮಹಾಪೂಜೆ, ಶ್ರೀಭೂತಬಲಿ, ಕವಾಟ ಬಂಧನ, ಮಾ.23 ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಪ್ರಸನ್ನ ಪೂಜೆ, ಶಯನ ಪ್ರಸಾದ ವಿತರಣೆ, ಯಾತ್ರಾಹೋಮ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅವಭೃತ ಮೆರವಣಿಗೆ, ಕಟ್ಟೆಪೂಜೆ, ಸನತಮೊಗರು ಕುಮಾರಧಾರೆಯಲ್ಲಿ ಅವಭೃತ, ಧ್ವಜಾವರೋಹಣ ನಡೆಯಲಿದೆ. ಮಾ.24 ರಂದು ಬೆಳಿಗ್ಗೆ ಭದ್ರಕಾಳಿ ಅಮ್ಮನವರ ಗುಡಿಯಲ್ಲಿ ಪೂಜೆ, ಶಿರಾಡಿ ಮತ್ತು ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ. ಜಾತ್ರೋತ್ಸವ ಸಂದರ್ಭದಲ್ಲಿ ಸೀಮೆಯ ಭಕ್ತಾದಿಗಳಿಂದ ಹಸಿರುವಾಣಿ ಸಮರ್ಪಣೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ:
ಜಾತ್ರೋತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾ.19 ರಂದು ಆಲಂಕಾರು ಪೇಟೆ ಸವಾರಿ ಸಂದರ್ಭದಲ್ಲಿ, ಕೋಟಿ ಚೆನ್ನಯ ಮಿತ್ರವೃಂದ ಆಲಂಕಾರು ಇವರ ಪ್ರಾಯೋಜಕತ್ವದಲ್ಲಿ ತಾಂಬೂಲ ಕಲಾವಿದೆರ್ ಪೂಂಜಾಲಕಟ್ಟೆ ಕುಡ್ಲ ಇವರಿಂದ ಪರಿಮಳ ಕಾಲನಿ ತುಳು ಹಾಸ್ಯಮಯ ನಾಟಕ.ಶ್ರೀದೇವಿಯ ಆಲಂಕಾರು ಪೇಟೆ ಸವಾರಿ ಸಂದರ್ಭದಲ್ಲಿ ಗಜಗಾತ್ರದ ಆಕರ್ಷಕ ಗೊಂಬೆಗಳ ಪ್ರದರ್ಶನ, ಮಾ.22 ರಂದು ರಾತ್ರಿ 8:೦೦ ರಿಂದ ವಿಶ್ವ ದಾಖಲೆ ಮಾಡಿದ ಯೋಗಪಟು ಸಾನ್ವಿ ದೊಡ್ಡಮನೆ ಪಂಜ ಸುಳ್ಯ ಇವರಿಂದ ಯೋಗ ಪ್ರದರ್ಶನ, ನಂತರ ಯಕ್ಷ ಮಿತ್ರರು ಶರವೂರು – ಆಲಂಕಾರು ಮತ್ತು ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ವಿಶ್ವನಾಥ ಶರವೂರು ವಿರಚಿತ ರಂಗಪೂಜೆ ಎಂಬ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.ಭಕ್ತಾಧಿಗಳು ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತಾಧಿಕಾರಿ ಗೋಪಾಲ ಕೆ ಹಾಗು ಆರ್ಚಕರು,ಸಿಬ್ಬಂದಿ ವರ್ಗ ಮತ್ತು ಸೀಮೆಯ ಹತ್ತು ಸಮಸ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ