ಪುತ್ತೂರು:ಗ್ರಾಮ ಪಂಚಾಯತ್ ಬನ್ನೂರು, ಸೆಲ್ಕೋ ಫೌಂಡೇಶನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧೀ ಇಲಾಖೆ, ಬೀರಿಗ ಅಂಗನವಾಡಿ ಕೇಂದ್ರ, ಜನಶಿಕ್ಷಣ ಟ್ರಸ್ಟ್, ಮಾದರಿ ಗ್ರಾಮ ವಿಕಾಸ ಕೇಂದ್ರ, ಸ್ವ-ಸಹಾಯ ಸಂಘಗಳ ಒಕ್ಕೂಟ, ಬಾಲ ವಿಕಾಸ ಸಮಿತಿ, ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ದಾನಿಗಳ ಸಹಯೋಗದಲ್ಲಿ ಬೀರಿಗ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ದಿನಾಚರಣೆ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಹಾಗೂ ಮತದಾನ ಜಾಗೃತಿ ಅಭಿಯಾನವು ಮಾ.12ರಂದು ನೆರವೇರಿತು.
ಬನ್ನೂರು ಗ್ರಾ.ಪಂ ಉಪಾಧ್ಯಕ್ಷ ಶೀನಪ್ಪ ಕುಲಾಲ್ ಉದ್ಘಾಟಿಸಿ ಶುಭಹಾರೈಸಿದರು. ಸ್ಮಾರ್ಟ್‌ಕ್ಲಾಸ್‌ನ್ನು ನ್ಯಾಯವಾದಿ ಭಾಸ್ಕರ ಕೋಡಿಂಬಾಳ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪಡೆಯಲು ಸ್ಮಾರ್ಟ್‌ಕ್ಲಾಸ್ ಸಹಕಾರಿಯಾಗಲಿದೆ ಎಂದರು. ಜನ ಶಿಕ್ಷಣ ಸೇವಾ ಟ್ರಸ್ಟ್‌ನ ಶೀನ ಶೆಟ್ಟಿ ಮಾತನಾಡಿ, ಮಹಿಳಾ ದಿನಾಚರಣೆ ಹಾಗೂ ಮತದಾರರಿಗೆ ಜಾಗೃತಿ ಅಭಿಯಾನದ ಕುರಿತು ಮಾಹಿತಿ ನೀಡಿದರು. ಬಂಟ್ವಾಳ ಸೆಲ್ಕೋ ಸೇಲಾರ್ ಪುತ್ತೂರು ಶಾಖಾ ವ್ಯವಸ್ಥಾಪಕ ರವೀನಾ ಬಿ. ಸ್ಮಾರ್ಟ್‌ಕ್ಲಾಸ್‌ನ ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಗಳಾ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ರೋಟರಿ ಕ್ಲಬ್ ಪುತ್ತೂರು ಸಿಟಿಯ ಅಧ್ಯಕ್ಷ ಸುಂದರ ರೈ, ಸೆಲ್ಕೋ ಸೋಲಾರ್ ಪುತ್ತೂರು ಶಾಖಾ ವ್ಯವಸ್ಥಾಪಕ ಸುಧಾಕರ ಆಳ್ವ, ಬನ್ನೂರು ಗ್ರಾ.ಪಂ ಸದಸ್ಯೆ ಜಯ ಏಕ ಶುಭಹಾರೈಸಿದರು.
ಬನ್ನೂರು ಗ್ರಾ.ಪಂ ಸದಸ್ಯ ತಿಮ್ಮಪ್ಪ ಪೂಜಾರಿ, ಪಿಡಿಓ ಚಿತ್ರಾವತಿ, ಪ್ರವೀಣ್ ನಾಯಕ್ ಕೆಮ್ಮಾಯಿ, ಸೆಲ್ಕೋ ಸೋಲಾರ್‌ನ ರೋಶನ್, ಮಹಿಳಾ ಸಾಂತ್ವನ ಕೇಂದ್ರದ ನಿಶಾಪ್ರಿಯ, ಜನಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣಮೂಲ್ಯ, ಅಂಗನವಾಡಿ ಕಾರ್ಯಕರ್ತೆಯರಾದ ರೇಖಾ ಬೇರಿಕೆ, ರೇವತಿ ಕೊಡಿಮರ, ಸಂಜೀವಿನಿ ಒಕ್ಕೂಟ ಭವ್ಯ, ಧನಲಕ್ಷ್ಮೀ, ವಿದ್ಯಾ, ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳು, ಬಾಲವಿಕಾಸ ಸಮಿತಿಯವರು, ಸ್ವ-ಸಹಾಯ ಸಂಘದವರು ಉಪಸ್ಥಿತರಿದ್ದರು.
ಬಾಲವಿಕಾಸ ಸಮಿತಿ ಅಧ್ಯಕ್ಷೆ ಸ್ವಾತಿ ಗಣೇಶ್ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಅರುಣಾ ಡಿ. ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾ ಸಹಕರಿಸಿದರು.
ಮೊತ್ತದ ಸ್ಮಾರ್ಟ್ ಕ್ಲಾಸ್‌ನ ವೆಚ್ಚ ರೂ.1.10 ಲಕ್ಷದಲ್ಲಿ ಶೇ.50ರಷ್ಟು ಅಂದರೆ ರೂ.55,೦೦೦ ಸೆಲ್ಕೋ ಫೌಂಡೇಶನ್ ಭರಿಸುತ್ತಿದೆ. ಉಳಿಕ ಮೊತ್ತವನ್ನು ಅಂಗನವಾಡಿ ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳು, ಸ್ನೇಹ ಸಿಲ್ಕ್‌ನ ಮ್ಹಾಲಕ ಸತೀಶ್ ಪುತ್ತೂರು, ಪ್ರವೀಣ್ ನಾಯಕ್ ಕೆಮ್ಮಾಯಿ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ದೇಣಿಗೆ ನೀಡಿ ಸಹಕರಿಸಿರುತ್ತಾರೆ ಎಂದು ಅಂಗನವಾಡಿಯವರು ತಿಳಿಸಿದ್ದಾರೆ.