ಪುತ್ತೂರು:ಪುತ್ತೂರಿನ ಸಂಟ್ಯಾರು ಎಂಬಲ್ಲಿ ಇನ್ನೋವಾ ಮತ್ತು ಫೋರ್ಡ್ ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಮಾ.14ರಂದು ನಡೆದಿದೆ.
ಕುಂಬ್ರದಿಂದ ಪುತ್ತೂರಿಗೆ ಸಂಟ್ಯಾರು ಮಾರ್ಗವಾಗಿ ಸಾಗುತ್ತಿದ್ದ ಇನ್ನೋವಾ(ಕೆ. ಎ021 ಎಮ್ ಎ0113) ಹಾಗೂ ಪುತ್ತೂರಿನಿಂದ ಕುಂಬ್ರ ಕಡೆಗೆ ಸಾಗುತ್ತಿದ್ದ ಫೋರ್ಡ್(ಕೆ ಎ19 ಪಿ 5992) ಕಾರು ನಡುವೆ ಡಿಕ್ಕಿ ಸಂಭವಿಸಿದೆ.ಫೋರ್ಡ್ ಕಾರಿನ ಟಯರ್ ಸಿಡಿದ ಪರಿಣಾಮ ಈ ಅಪಘಾತ ಸಂಭವಿಸದೆ.ಫೋರ್ಡ್ ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಸ್ತೆ ಮದ್ಯದಲ್ಲಿ ಅಪಘಾತ ಸಂಭವಿಸಿದ ಕಾರಣ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗಿದ್ದು, ಟ್ರಾಫಿಕ್ ಜಾಮ್ ಸಂಭವಿಸಿದೆ.ಸ್ಥಳಕ್ಕೆ ಗ್ರಾಮಂತರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.