ತಾಲೂಕು ಕಚೇರಿ, ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಸರಿಪಡಿಸಲು ಅಧಿವಕ್ತಾ ಪರಿಷತ್ ಪುತ್ತೂರು ಘಟಕದಿಂದ ಮನವಿ

0

ಪುತ್ತೂರು: ತಾಲೂಕು ಕಚೇರಿ ಮತ್ತು ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳನ್ನು ಸರಿಪಡಿಸುವಂತೆ ಕೋರಿ ಅಧಿವಕ್ತಾ ಪರಿಷತ್ ಪುತ್ತೂರು ಘಟಕದ ವತಿಯಿಂದ ಉಪ ತಹಶಿಲ್ದಾರವರಿಗೆ ಮನವಿಯನ್ನು ನೀಡಲಾಯಿತು.


ತಾಲೂಕು ಕಚೇರಿಯ ಅಭಿಲೇಖಾಲಯದಲ್ಲಿ ನಕಲು ಪ್ರತಿಗಳನ್ನು ಪಡೆಯುವಲ್ಲಿ ಅವ್ಯವಸ್ಥೆ ಬಗ್ಗೆ, ರೆವೆನ್ಯೂ ಅದಲತ್ತುಗಳ ಸ್ಥಾಪನೆ ಮಾಡುವ ಕುರಿತಾಗಿ, ನಕ್ಷೆಗಳು ಮತ್ತು ಪ್ಲಾಟಿಂಗಿಗೆ ಸಂಬಂಧಿಸಿದ ಸಮಸ್ಯೆಗಳು, ಕಡತಗಳ ಮಂದಗತ ವಿಲೇವಾರಿಯ ಸಮಸ್ಯೆ ,ಪ್ರತಿ ಗ್ರಾಮಕ್ಕೂ ಒಬ್ಬ ಗ್ರಾಮಕರಣಿಕರನ್ನು ನೇಮಿಸುವ ಕುರಿತಾಗಿ ಮತ್ತು ಸಿವಿಲ್ ನ್ಯಾಯಾಲಯದಲ್ಲಿ ಡಿಕ್ರಿಯ ಪ್ರಕಾರ ಪಹಣಿ ದಾಖಲಿಸುವ ಕುರಿತಂತೆ ಉಂಟಾಗುತ್ತಿರುವ ಸಮಸ್ಯೆ ಮತ್ತು ಈ ಎಲ್ಲ ಸಮಸ್ಯೆಗಳನ್ನು ಸರಿಪಡಿಸುವಂತೆ ಮನವಿಯಲ್ಲಿ ಉಲ್ಲೇಖಿಸಿದ್ದು ಈ ಸಂದರ್ಭದಲ್ಲಿ ಅಧಿವಕ್ತಾ ಪರಿಷತ್ತಿನ ಸದಸ್ಯರು ಸರಕಾರಿ ಇಲಾಖೆಯ ವಿವಿಧ ವಿಭಾಗಗಳಲ್ಲಿನ ಭ್ರಷ್ಟಾಚಾರವನ್ನು ತೊಡೆದು ಹಾಕುವಂತೆ ಆಗ್ರಹಿಸಿ ಮನವಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಅಧಿವಕ್ತಾ ಪರಿಷತ್ತಿನ ಪುತ್ತೂರು ಘಟಕದ ಅಧ್ಯಕ್ಷರಾದ ಜಯಪ್ರಕಾಶ್ ಎನ್, ಕಾರ್ಯದರ್ಶಿ ಶಾಮ್ ಪ್ರಸಾದ್ ಕೈಲಾರ್, ಅಧಿವಕ್ತಾ ಪರಿಷತ್ತಿನ ಸುಧೀರ್ ಕುಮಾರ್ ತೋಳ್ಪಡಿ, ಕಕ್ವೆ ಕಷ್ಟಪ್ಪ ಗೌಡ, ಚಿನ್ಮಯ ರೈ ಎನ್, ವೆಂಕಟೇಶ್, ಸಂತೋಷ್ ಕುಮಾರ್ ಎಂ ವಿರೂಪಾಕ್ಷ , ಕೃಷ್ಣಪ್ರಸಾದ್ ನಡ್ಸಾರ್, ಅಕ್ಷಿತ್ ಎಂ ಚಂದ್ರಹಾಸ ಈಶ್ವರಮಂಗಲ, ಸಂತೋಷ್ ಕೆ.ಆರ್, ವಿಮಲೇಶ್ ಶೃಂಗಾರಕೋಡಿ ಶಾಮ್ ಎಸ್ , ಅಶೋಕ್ ಸಿ.ಎಚ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here