ಕಡಬ: ನೆಹರು ಯುವಕ ಮಂಡಲ ಕುಂತೂರುಪದವು ಇದರ ವತಿಯಿಂದ ಕಡಬ, ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಹಾಗೂ ಸನ್ಮಾನ ಕಾರ್ಯಕ್ರಮ ಮಾ.16ರಂದು ಕುಂತೂರುಪದವು ನೆಹರು ಯುವಕ ಮಂಡಲದ ಕ್ರೀಡಾಂಗಣದಲ್ಲಿ ನಡೆಯಿತು.
ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ.,ರವರು ಉದ್ಘಾಟಿಸಿ ಮಾತನಾಡಿ, ಜಾತಿ, ಮತ, ಧರ್ಮ ಮರೆತು ಸಹಬಾಳ್ವೆಯಿಂದ ಈ ಪಂದ್ಯಾಟವನ್ನು ಆಯೋಜಿಸಿದ್ದೀರಿ. ಮುಂಬರುವ ದಿನಗಳಲ್ಲಿ ಕೂಡ ಈ ಒಗ್ಗಟ್ಟು ಹೀಗೆ ಇರಲಿ ಎಂದರು. ಅತಿಥಿಯಾಗಿದ್ದ ಪೆರಾಬೆ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ., ಪ್ರಥಮ ಬಹುಮಾನದ ಪ್ರಾಯೋಜಕರಾದ ಪುತ್ತೂರು ಬಿ.ಜಿ ಕನ್ಸ್ಟ್ರಕ್ಷನ್ಸ್‌ನ ಮಾಲೀಕ ಜುನೈದ್, ದ.ಕ.ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಓ.ಜೆ ಮೈಕಲ್, ಜಿ.ಪಂ.ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡರವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.
ನೆಹರು ಯುವಕ ಮಂಡಲದ ಅಧ್ಯಕ್ಷ ಜಿಜೋ ಅಬ್ರಹಾಂ ಅಧ್ಯಕ್ಷತೆ ವಹಿಸಿದ್ದರು. ಕುಂತೂರುಪದವು ಸೈಂಟ್ ಜಾರ್ಜ್ ಪ್ರೌಢಶಾಲೆ ಸಂಚಾಲಕ ರೋಯಿ ಅಬ್ರಹಾಂ, ಪೆರಾಬೆ ಗ್ರಾ.ಪಂ.ಸದಸ್ಯ ಕೃಷ್ಣ ಎರ್ಮಾಳ, ದ್ವಿತೀಯ ನಗದು ಬಹುಮಾನದ ಪ್ರಾಯೋಜಕರಾದ ಪದವು ಸೈಂಟ್ ಜಾರ್ಜ್ ಅರ್ಥ್ ಮೂವರ್ಸ್ ಮಾಲಕ ಲಾಜಿ ಅಬ್ರಹಾಂ, ನೆಹರು ಯುವಕ ಮಂಡಲದ ಗೌರವಾಧ್ಯಕ್ಷ ಸುರೇಶ್ ಕುಂಡಡ್ಕ, ಕೋಶಾಧಿಕಾರಿ ಬಿಜು ಎಮ್.ಎ., ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೆಹರು ಯುವಕಮಂಡಲದ ಜತೆ ಕಾರ್ಯದರ್ಶಿ ಸನತ್ ಕುಂಡಡ್ಕ ಸ್ವಾಗತಿಸಿದರು. ಕಾರ್ಯದರ್ಶಿ ಗುರುಕಿರಣ್ ಶೆಟ್ಟಿ ಬಾಲಾಜೆ ಕಾರ್ಯಕ್ರಮ ನಿರೂಪಿಸಿದರು.ಜಿಯಾನ್ ಪ್ರಾರ್ಥಿಸಿದರು.
ಸನ್ಮಾನ:
ರಾಷ್ಟ್ರಮಟ್ಟದ ಚದರಂಗ ಸ್ಪರ್ಧಾ ವಿಜೇತರಾದ ಆಶ್ರಯದತ್ತ ಎಂ.ಕೆ., ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜು ಪ್ರಾಂಶುಪಾಲರಾದ ಚಂದ್ರಶೇಖರ ಕೆ., ಪುತ್ತೂರು ಕ್ರೈಂ ಸ್ಕ್ವಾಡ್ ಅಧಿಕಾರಿ ಸ್ಕರಿಯ ಎಂ., ನಮ್ಮ ಟಿವಿ ಡ್ಯಾನ್ಸ್ ರಿಯಾಲಿಟಿ ಶೋ ವಿಜೇತರಾದ ಅದಿತಿ ಎಸ್ ಕುಂಡಡ್ಕ., ಪೆರಾಬೆ ಗ್ರಾ.ಪಂ.ಸದಸ್ಯ ಕೆ.ಎಸ್.ಬಾಬು ಗೌಡ ಕುಂಡಡ್ಕ ಹಾಗೂ ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ಕಲಾವಿದ ದೀಕ್ಷಿತ್ ಗೌಡ ಬೀರಂತಡ್ಕ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ಅಭಿಪ್ರಾಯ ವ್ಯಕ್ತಪಡಿಸಿದರು. ಹಾಸ್ಯ ಕಲಾವಿದ ದೀಕ್ಷಿತ್ ಗೌಡರವರು ಸಿನಿಮಾ ನಟರ, ರಾಜಕೀಯ ವ್ಯಕ್ತಿಗಳ ಧ್ವನಿ ಅನುಕರಣೆ ಮಾಡುವ ಮೂಲಕ ರಂಜಿಸಿದರು.
20 ತಂಡಗಳು ಭಾಗಿ:
ಪಂದ್ಯಾಟದಲ್ಲಿ ೨೦ ಬಲಿಷ್ಡ ತಂಡಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನ ರೂ.೧೨,೦೨೪ ಮತ್ತು ಟ್ರೋಫಿಯನ್ನು ಸಂಗಮ ಯುವಕ ಮಂಡಲ ಇಡಾಳ ಬಾಚಿಕೊಂಡರೆ, ದ್ವಿತೀಯ ಬಹುಮಾನ ರೂ ೯,೦೨೪ ಮತ್ತು ಟ್ರೋಫಿಯನ್ನು ದಯಾಸಾಗರ್ ಫ್ರೆಂಡ್ಸ್ ಆತೂರು ಬೈಲು ತಂಡ ಪಡೆದುಕೊಂಡಿತು, ತೃತೀಯ ಬಹುಮಾನ ೬,೦೨೪ ಮತ್ತು ಟ್ರೋಫಿಯನ್ನು ಕೆಎಫ್‌ಡಿಸಿ ತಂಡ ಮತ್ತು ಚತುರ್ಥ ಬಹುಮಾನ ರೂ ೪,೦೨೪ ಮತ್ತು ಟ್ರೋಫಿಯನ್ನು ನೆರಿಯಾ ತಂಡ ಪಡೆದುಕೊಂಡಿತು. ಉತ್ತಮ ಎತ್ತುಗೆಗಾರನಾಗಿ ವಿಜಯ್, ಉತ್ತಮ ಹೊಡೆತಗಾರನಾಗಿ ಜೋಸೆಫ್, ಉತ್ತಮ ರಕ್ಷಣಾತ್ಮಕ ಆಟಗಾರನಾಗಿ ಪ್ರಶಾಂತ್, ಉತ್ತಮ ಸರ್ವಾಂಗೀನ ಆಟಗಾರನಾಗಿ ಸಿಯಾದ್ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು. ತೃತೀಯ ಬಹುಮಾನದ ಪ್ರಾಯೋಜಕರಾದ ಪಿ.ಎಸ್.ಜೋಸೆಫ್, ಟ್ರೋಫಿ ಮತ್ತು ವೈಯಕ್ತಿಕ ಬಹುಮಾನಗಳ ಪ್ರಾಯೋಜಕರಾದ ಧೀರಜ್ ಟಿ ನಾಕ್, ಚತುರ್ಥ ಬಹುಮಾನದ ಪ್ರಾಯೋಜಕರಾದ ಸ್ಕರಿಯ ಎಂ.ಎ, ನೆಟ್ ಮತ್ತು ಬಾಲ್ ಪ್ರಾಯೋಜಕರಾದ ಮನೋಜ್ ವಟ್ಟಕರೋಟ್, ಭೋಜನ ವ್ಯವಸ್ಥೆಯ ಪ್ರಾಯೋಜಕರಾದ ಕುಂತೂರು ವಿಘ್ನೇಶ್ವರ ಟ್ರೇಡರ್ಸ್ ಮಾಲಕ ಹರಿಪ್ರಸಾದ್ ಹಾಗೂ ಹಲವಾರು ದಾನಿಗಳು ಧನ ಸಹಾಯ ಮಾಡುವ ಮೂಲಕ ಪಂದ್ಯಾಟಕ್ಕೆ ಸಹಕಾರ ನೀಡಿದರು.