ಅಮ್ಚಿನಡ್ಕ ತಟ್ಟುಕಡದಲ್ಲಿ ಚಾ ಹೀರಿದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ

0

ಪುತ್ತೂರು: ಪುತ್ತೂರು-ಸುಳ್ಯ ಗಡಿಭಾಗದ ಅಮ್ಚಿನಡ್ಕ ತಟ್ಟುಕಡದಲ್ಲಿರುವ ಮುಕಾಂಬಿಕಾ ತಟ್ಟುಕಡ ಮತ್ತೊಮ್ಮೆ ಪ್ರಚಾರಕ್ಕೆ ಬಂದಿದೆ. ಈ ಹಿಂದೆ ಪುತ್ತೂರಿನಿಂದ ಸುಳ್ಯ ಮಾರ್ಗವಾಗಿ ಮಡಿಕೇರಿ-ಮೈಸೂರಿಗೆ ತೆರಳುತ್ತಿದ್ದ ಅದೆಷ್ಟೋ ಗಣ್ಯವ್ಯಕ್ತಿಗಳು ಈ ತಟ್ಟುಕಡದಲ್ಲಿ ಟೀ ಹೀರಿ ಹೋದ ಬಗ್ಗೆ ಹಲವು ಸುದ್ದಿಗಳು ಪ್ರಕಟಗೊಂಡಿದ್ದವು.

ಇದೀಗ ಇಲ್ಲಿಗೆ ಭೇಟಿಕೊಟ್ಟ ಗಣ್ಯರ ಸಾಲಿಗೆ ದ.ಕ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಸೇರಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುಳ್ಯ ಕಾರ್ಯಕರ್ತರನ್ನು ಮತ್ತು ಪಕ್ಷದ ನಾಯಕರನ್ನು ಭೇಟಿಯಾಗಲು ತೆರಳುವ ವೇಳೆ ಸಂಗಡಿಗರ ಜೊತೆ ಮುಕಾಂಬಿಕಾ ತಟ್ಟುಕಡಕ್ಕೆ ಭೇಟಿ ನೀಡಿದ ಚೌಟ ಮತ್ತು ಸಂಗಡಿಗರು ಚಾ ಹೀರಿ ಮೆಚ್ಚುಗೆ ವ್ಯಕ್ತಪಡಿಸಿ ಪ್ರಯಾಣ ಮುಂದುವರಿಸಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಉಪಸ್ಥಿತರಿದ್ದ ಸ್ಥಳೀಯ ಬಿಜೆಪಿ ನಾಯಕ‌, ಪುತ್ತೂರು ಜೇನು ವ್ಯವಸಾಯ ಸಂಘದ ಮಾಜಿ ಅಧ್ಯಕ್ಷ ಭಾಸ್ಕರ್‌ ರೈ ಚೌಟ ಅವರನ್ನು ಸ್ವಾಗತಿಸಿದರು. ಸಾಮಾನ್ಯರಂತೆ ತಟ್ಟುಕಡಗೆ ಬಂದು ಚಾ ಹೀರಿ ಮೆಚ್ಚುಗೆ ವ್ಯಕ್ತಪಡಿಸಿದ ಬ್ರಿಜೇಶ್ ಚೌಟ ಅವರ ಸರಳತೆ ಬಗ್ಗೆ ಕೇರಳ ಮೂಲದ ತಟ್ಟುಕಡ ಮಾಲೀಕ ಪ್ರತಾಪ್‌ ನಾಯರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here