ಪುತ್ತೂರು: ಇತ್ತೀಚಗೆ ದ.ಕನ್ನಡ ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆಯ್ಕೆಯಾದ ನಂತರ ಮತ್ತು ಬಿಜೆಪಿಗೆ ಅರುಣ್ ಕುಮಾರ್ ಪುತ್ತಿಲ ಸೇರ್ಪಡೆಯ ವಿಚಾರವಾಗಿ ಪುತ್ತೂರಿನ ಹಿರಿಯ ಕಿರಿಯ ಕಾರ್ಯಕರ್ತರಲ್ಲಿ ಚರ್ಚಿಸಲು ದ.ಕನ್ನಡ ಜಿಲ್ಲಾಧ್ಯಕ್ಷರು ಪಾರ್ಟಿ ಕಛೇರಿಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಕಛೇರಿಗೆ ಬೀಗ ಹಾಕಿದ್ದರು ಮತ್ತು ಸಭೆಯಲ್ಲಿ ವಾಗ್ವಾದಗಳು ಜಿಲ್ಲಾಧ್ಯಕ್ಷರ ಎದುರಿಗೆ ಆಗಿವೆ ಎಂದು ವರದಿಯಾಗಿರುವುದು ಸತ್ಯಕ್ಕೆ ದೂರವಾದ ವಿಷಯ. ಪಕ್ಷದ ಆಂತರಿಕ ಸಭೆ ಆದ ಕಾರಣ ಪತ್ರಿಕೆ, ಮಾಧ್ಯಮದವರಿಗೆ ಅಹ್ವಾನ ಇರಲಿಲ್ಲ ಮತ್ತು ಒಟ್ಟು ಪುತ್ತೂರಿನ ರಾಜಕೀಯ ಸಾಧಕ ಮತ್ತು ಬಾಧಕಗಳ ಬಗ್ಗೆ ಆರೋಗ್ಯಪೂರ್ಣ ಚರ್ಚೆಯಾಗಿ ಕೊನೆಗೆ ಜಿಲ್ಲಾ ಅಧ್ಯಕ್ಷರಾದ ಸತೀಶ್ ಕುಂಪಲರವರು ಸೂಕ್ತವಾದ ಸಲಹೆ ಸೂಚನೆಯನ್ನು ನೀಡಿ ಸಭೆ ಸುಖಾಂತ್ಯವಾಗಿದೆ ಮತ್ತು ಎಲ್ಲರೂ ಒಗ್ಗಟ್ಟಾಗಿ ಪಾರ್ಟಿಯ ಅಭ್ಯರ್ಥಿಯನ್ನು ಗೆಲ್ಲಿಸಲು ಕೆಲಸ ಮಾಡುತ್ತೇವೆ ಎಂದು ನಿರ್ಧರಿಸಲಾಯಿತು ಎಂದು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವ ತಿಳಿಸಿದ್ದಾರೆ.
Home ಇತ್ತೀಚಿನ ಸುದ್ದಿಗಳು ಬಿಜೆಪಿ ಜಿಲ್ಲಾಧ್ಯಕ್ಷರ ಎದುರಿಗೆ ಯಾವುದೇ ವಾಗ್ವಾದ ನಡೆದಿಲ್ಲ – ಸಾಜ ರಾಧಾಕೃಷ್ಣ ಆಳ್ವ ಸ್ಪಷ್ಟನೆ