ಜರ್ಮನಿಯಲ್ಲಿ ನಡೆದ ಮೈನೊವ ಫ್ರಾಂಕ್‌ಫರ್ಟ್ ಹಾಫ್ ಮ್ಯಾರಾಥನ್ 2024 ಸ್ಫರ್ಧೆಯನ್ನು ಪೂರೈಸಿದ ಹರ್ಷಿತ್ ನಾಯಕ್

0

ಪುತ್ತೂರು: ಜರ್ಮನಿಯ ಫ್ರಾಂಕ್‌ಫರ್ಟ್ ನಲ್ಲಿ ನಡೆದ ಮೈನೊವ ಫ್ರಾಂಕ್‌ಫರ್ಟ್ ಹಾಫ್ ಮ್ಯಾರಾಥನ್ 2024 ಸ್ಫರ್ಧೆಯಲ್ಲಿ 21.9 ಕಿ.ಮೀ ದೂರವನ್ನು 2ಗಂಟೆ 24 ನಿಮಿಷದಲ್ಲಿ ಹರ್ಷಿತ್ ನಾಯಕ್ ಪೂರೈಸಿದ್ದಾರೆ.

ಇವರು ಪುತ್ತೂರು ಮುಕ್ರಂಪಾಡಿ ನಿವಾಸಿ ಜೋತ್ಸ್ನ ಸೀತಾರಾಮ ನಾಯಕ್ ರವರ ಪುತ್ರ. ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ, ನೆಹರೂನಗರ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ, ಬೆಂಗಳೂರಿನ BIT ಯಲ್ಲಿ ಇಂಜೀನಿಯರಿಂಗ್ ಪದವಿಯನ್ನು ಪೂರೈಸಿ ಉನ್ನತ ವ್ಯಾಸಂಗವನ್ನು ಜರ್ಮನಿಯಲ್ಲಿ ಮಾಡಿ, ಅಲ್ಲಿನ ಹೊಯ ಸರ್ಜಿಕಲ್ ಕಂಪನಿಯಲ್ಲಿ ಕ್ವಾಲಿಟಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿತ್ತಿದ್ದಾರೆ. ಇವರ ಪತ್ನಿ ವರ್ಷಿತಾ ಜರ್ಮನಿಯಲ್ಲಿರುವ ಯುಬಿಎಸ್ ಯುರೋಪ್ ಕಂಪೆನಿಯಲ್ಲಿ ಸರ್ವಿಸ್ ಮ್ಯಾನೇಜರ್ ಆಗಿದ್ದು ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ವಾಸಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here