ಮಾ.24: ಕಾವು ತುಡರ್ ಯುವಕ ಮಂಡಲದ 13ನೇ ವಾರ್ಷಿಕೋತ್ಸವ-“ತುಡರ್ ಹಬ್ಬ” – ನೃತ್ಯಾರ್ಪಣ ಮತ್ತು ಸಾಂಸ್ಕೃತಿಕ ಕಲರವ – ಸಭಾ ಕಾರ್ಯಕ್ರಮ-ಸನ್ಮಾನ

0

ಕಾಪು ರಂಗತರಂಗ ಕಲಾವಿದರಿಂದ “ಬುಡೆದಿ” ತುಳು ನಾಟಕ
ಕಾವು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ 13ನೇ ವರ್ಷದ ವಾರ್ಷಿಕೋತ್ಸವ-ತುಡರ್ ಹಬ್ಬ ಕಾರ್ಯಕ್ರಮವು ಮಾ.24ರಂದು ಸಂಜೆ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ:
ಸಂಜೆ ಗಂಟೆ 7ರಿಂದ ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ವಾನ್ ದೀಪಕ್ ಕುಮಾರ್‌ರವರ ನಿರ್ದೇಶನದಲ್ಲಿ ತುಡರ್ ಕಲಾ ಸಂಘದ ವಿದ್ಯಾರ್ಥಿಗಳಿಂದ ನೃತ್ಯಾರ್ಪಣ ಕಾರ್ಯಕ್ರಮ ಮತ್ತು ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಲರವ ನಡೆಯಲಿದೆ.

ಸಭಾ ಕಾರ್ಯಕ್ರಮ-ಸನ್ಮಾನ:
ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಕಾವು ದಿವ್ಯನಾಥ ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಸನ್ಮಾನಿತರನ್ನು ಗೌರವಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪರ್ಲಡ್ಲ ಎಸ್‌ಡಿಪಿ ರೆಡಿಮಿಡೀಸ್ ಮತ್ತು ರಿಸರ್ಚ್ ಸೆಂಟರ್‌ನ ನಿರ್ದೇಶಕ ಡಾ. ಹರಿಕೃಷ್ಣ ಪಾಣಾಜೆ, ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ತೀರ್ಥಾನಂದ ದುಗ್ಗಳ, ಕಾವು ದೇವಸ್ಥಾನದ ಆಡಳಿತಾಧಿಕಾರಿ ಕೆ.ಟಿ ಗೋಪಾಲರವರು ಭಾಗವಹಿಸಲಿದ್ದಾರೆ. ವಾಸ್ತು ಸಲಹೆಗಾರರು ಹಾಗೂ ಜಲ ಸಂಶೋಧಕ ನಾರಾಯಣ ಮೂಲ್ಯ ನನ್ಯಪಟ್ಟಾಜೆಯವರಿಗೆ ಸನ್ಮಾನ ನಡೆಯಲಿದೆ.

ಕಾಪು ರಂಗತರಂಗ ಕಲಾವಿದರಿಂದ ತುಳು ನಾಟಕ:
ಸಭಾ ಕಾರ್ಯಕ್ರಮದ ಬಳಿಕ ಲೀಲಾಧರ ಶೆಟ್ಟಿ ಸಾರಥ್ಯದ ಶರತ್ ಉಚ್ಚಿಲ ನಿರ್ದೇಶನದಲ್ಲಿ ಬಲೆ ತೆಲಿಪಾಲೆ ಖ್ಯಾತಿಯ ಪ್ರಶಸ್ತಿ ವಿಜೇತ ಪ್ರಶಂಸಾ ಕಾಪು ತಂಡದ ಕುಸಲ್ದ ಬಿರ್ಸೆ ಸಂದೀಪ್ ಶೆಟ್ಟಿ ಮಾಣಿಬೆಟ್ಟು ಹಾಗೂ ತೆಲಿಕೆದ ಅರಸೆ ಪ್ರಸನ್ನ ಶೆಟ್ಟಿ ಬೈಲೂರು ಅಭಿನಯದಲ್ಲಿ ಕಾಪು ರಂಗತರಂಗ ಕಲಾವಿದರಿಂದ ಬುಡೆದಿ ತುಳು ತೆಲಿಕೆದ ಸಾಂಸಾರಿಕ ನಾಟಕ ನಡೆಯಲಿದೆ ಎಂದು ತುಡರ್ ಯುವಕ ಮಂಡಲದ ಅಧ್ಯಕ್ಷ ಜಗದೀಶ ನಾಯ್ಕ ಆಚಾರಿಮೂಲೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here