ಪುತ್ತೂರು : ಬನ್ನೂರು ಕುಂಟ್ಯಾಣ ಶ್ರೀ ಸದಾಶಿವ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಮಾ.22 ಮತ್ತು 23 ರಂದು ಬ್ರಹ್ಮಶ್ರೀ ನಾಗೇಶ್ ತಂತ್ರಿಯವರ ನೇತೃತ್ವದಲ್ಲಿ ವೈಭವದಿಂದ ನಡೆಯಿತು.
ಮಾ.23 ರಂದು ಬೆಳಿಗ್ಗೆ ಮಹಾಗಣಪತಿ ಹೋಮ ನಡೆಯಿತು. ಶ್ರೀ ದೇವರ ಬಲಿ ಹೊರಟು ಸರ್ವ ವಾದ್ಯದ ಬಳಿಕ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಮದ್ಯಾಹ್ನ ಶ್ರೀ ದೇವರಿಗೆ ಕಲಾಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ , ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಹಲಂಗ, ಪ್ರಧಾನ ಅರ್ಚಕ ಶಿವಪ್ರಸಾದ್ ಭಟ್, ಸದಸ್ಯರಾದ ಈಶ್ವರ ಗೌಡ ಗೋಳ್ತಿಲ, ಅಣ್ಣು ಅಡೆಂಚಿಲಡ್ಕ, ಮೌನೀಶ್ ಆನೆಮಜಲು, ಹೇಮಲತಾ ಹೆಗ್ಡೆ, ಛಾಯಾ ಪೈ, ಉಮೇಶ್ ಶೆಟ್ಟಿ ಆನೆಮಜಲು, ಪ್ರೇಮಾನಂದ ದೇವಸ್ಯ, ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷ ಜಯಾನಂದ ಜೈನರಗುರಿ, ಗೌರವ ಸಲಹೆಗಾರರಾದ ರಾಜಶೇಖರ ಜೈನ್ ನೀರ್ಪಾಜೆ, ಜಯಕುಮಾರ್ ಜೈನ್ ನೀರ್ಪಾಜೆ, ರಾಘವೇಂದ್ರ ಎ, ಅಧ್ಯಕ್ಷ ಶಶಿಧರ್ ಕುಂಟ್ಯಾಣ, ಉಪಾಧ್ಯಕ್ಷರಾದ ಮನೋಹರ ರೈ ಮಾರ್ನಡ್ಕ, ಪಾಂಡುರಂಗ ಗೌಡ ಪಟ್ಟೆ, ಪ್ರಧಾನ ಕಾರ್ಯದರ್ಶಿ ವಸಂತ ಗೌಡ ದೇವಸ್ಯ, ಕಾರ್ಯದರ್ಶಿ ದಿಲೀಪ್ ಕಜೆ, ಖಜಾಂಚಿ ಪ್ರೇಮಚಂದ್ರ ದೇವಸ್ಯ, ವ್ಯವಸ್ಥಾಪನಾ ಸಮಿತಿ ಮಾಜಿ ಅದ್ಯಕ್ಷ ಧರ್ಣಪ್ಪ ಕುಲಾಲ್, ಚಂದ್ರಾಕ್ಷ ಪಟ್ಟೆ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.