ಆರೇಲ್ತಡಿ ಸ. ಕಿ ಪ್ರಾ.ಶಾಲೆಯ ‘ರಂಗಮಂದಿರ’ ಉದ್ಘಾಟನೆ, ವಾರ್ಷಿಕೋತ್ಸವ, ಸನ್ಮಾನ ಕಾರ್ಯಕ್ರಮ ‘ಸಂಭ್ರಮ’

0

ಸವಣೂರು: ಸ. ಕಿ. ಪ್ರಾ. ಶಾಲೆ ಆರೇಲ್ತಡಿ ಇಲ್ಲಿ ಶಾಲಾ ನೂತನ ’ರಂಗಮಂದಿರ’ ಉದ್ಘಾಟನೆ ಮತ್ತು ವಾರ್ಷಿಕೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಿತು. ನೂತನ ಭಾರತ್ ಮಾತಾ ರಂಗಮಂದಿರವನ್ನು ಸಂಸದ ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಪೋಷಕರು ಸರಕಾರಿ ಶಾಲೆಗಳನ್ನು ಉಳಿಸುವ ಜೊತೆಗೆ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಬೇಕೆಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಈ ಭಾಗದ ಜನರು ಇದೊಂದು ಪುಟ್ಟ ಹಳ್ಳಿಯಾದರೂ ಉತ್ತಮವಾಗಿ ಕಾರ್ಯಕ್ರಮ ನಿರ್ವಹಿಸುವಲ್ಲಿ ಸಫಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಶಾಲೆಗೆ ಬೇಕಾದ ಕಟ್ಟಡದ ಕೊರತೆಯನ್ನು ನೀಗಿಸುವುದು ನನ್ನ ಜವಾಬ್ದಾರಿ ಮತ್ತು ಈ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುತ್ತೇನೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.


ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಣೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಸುಂದರಿ ಬಿ. ಕೆ. ಇವರು ವಹಿಸಿ ಶಾಲೆಯ ಎಸ್‌ಡಿಎಂಸಿ, ಅಧ್ಯಾಪಕ ವೃಂದ ಮತ್ತು ಹಿರಿಯ ವಿದ್ಯಾರ್ಥಿ ವೃಂದ ಸೇರಿ ಈ ಕಾರ್ಯಕ್ರಮವನ್ನು ಸುವರ್ಣ ಮಹೋತ್ಸವದ ರೀತಿಯಲ್ಲೇ ಆಯೋಜಿಸಿ ಸವಣೂರು ಕ್ಲಸ್ಟರ್‌ನಲ್ಲೇ ಅತ್ಯುತ್ತಮ ಶಾಲೆಯಾಗಿ ಮೂಡಿ ಬರುವಂತೆ ಪ್ರಯತ್ನಿಸಿರುತ್ತಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಲವು ಹಿರಿಯರು, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಸವಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಶ್ರೀ, ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ರಾಜೀವಿ ವಿ. ಶೆಟ್ಟಿ ಕೆಡೆಂಜಿ, ಸದಸ್ಯರಾದ ತೀರ್ಥರಾಮ ಕೆಡೆಂಜಿ, ಚಂದ್ರಾವತಿ ಸುಣ್ಣಾಜೆ, ಸವಣೂರು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಇಂದಿರಾ ಬಿ.ಕೆ., ಸವಣೂರು ಸಮೂಹ ಸಂಪನ್ಮೂಲ ವ್ಯಕ್ತಿ ಕುಶಾಲಪ್ಪ ಗೌಡ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಆಡಳಿತಾಽಕಾರಿ ಅಶ್ವಿನ್ ಎಲ್ ಶೆಟ್ಟಿ, ಆರೆಲ್ತಡಿ ಶಾಲಾ ಎಸ್ಡಿಎಂಸಿ ಅಧ್ಯಕ್ಷೆ ಸೀತಮ್ಮ ಕುದ್ಮನಮಜಲು, ಹಿರಿಯರಾದ ಗಂಗಾಧರ ರೈ ಪಿ. ಡಿ, ರೋಟರಿ ಕ್ಲಬ್ ಪುತ್ತೂರು ಸಿಟಿಯ ಕೃಷ್ಣಕಮಾರ್ ರೈ ದೇವಸ್ಯ, ಆರೆಲ್ತಡಿ ಶಾಲಾ ಎಸ್‌ಡಿಎಂಸಿ ಪೂರ್ವಾಧ್ಯಕ್ಷರಾದ ಶ್ರೀದೇವಿ ಭಟ್ ಕಾನಾವು, ಹಿರಿಯ ಕ್ರೀಡಾಪಟು ವಸಂತಿ ಶಿವರಾಮ ಮೆದು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಸವಣೂರು, ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿಯ ಮಾಜಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ಕುದ್ಮನಮಜಲು, ಇತಿಹಾದ್ ಫ್ರೆಂಡ್ಸ್ ಕ್ಲಬ್‌ನ ಸಫ್ವಾನ್ ಆರೇಲ್ತಡಿ ಮೊದಲಾದವರು ಉಪಸ್ಥಿತರಿದ್ದರು.

ಅಂಗನವಾಡಿ ಪುಟಾಣಿಗಳು, ಶಾಲಾ ವಿದ್ಯಾರ್ಥಿಗಳು, ಪೋಷಕರು ಹಾಗೂ ಊರಿನವರಿಂದ ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ಜರುಗಿತು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳು ಮತ್ತು ಊರವರಿಗೆ ಬಹುಮಾನ ವಿತರಿಸಲಾಯಿತು. ಶಾರದಾ ಕಲಾ ಆರ್ಟ್ಸ್ ಮಂಜೇಶ್ವರ ನಾಟಕ ಕಲಾವಿದರಿಂದ ತುಳು ಹಾಸ್ಯಮಯ ನಾಟಕ ’ಕಥೆ ಎಡ್ಡೆ ಉಂಡು’ ಪ್ರದರ್ಶನಗೊಂಡಿತು. ಶಾಲಾ ಮುಖ್ಯಗುರು ಜಗನ್ನಾಥ ಎಸ್ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಸಹಶಿಕ್ಷಕ ಶ್ರೀಕಾಂತ ಕಂಬಳಕೋಡಿ ವರದಿ ವಾಚಿಸಿ ವಂದಿಸಿದರು. ಗೌರವ ಶಿಕ್ಷಕಿ ರಮ್ಯಾ ರೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here