ತೆಂಕಿಲ ವಿವೇಕಾನಂದ ಆ.ಮಾ ಶಾಲೆಯಲ್ಲಿ “ರಂಗನಟನಾ” ನಾಟಕ ತರಗತಿಯ ಸಮಾರೋಪ ಸಮಾರಂಭ

0

ಪುತ್ತೂರು:ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಹಪಠ್ಯ ಚಟುವಟಿಕೆಗಳಲ್ಲಿ ಒಂದಾದ “ರಂಗನಟನಾ” ನಾಟಕ ತರಬೇತಿಯ ಸಮಾರೋಪ ಸಮಾರಂಭ ಮಾ.22ರಂದು ನಡೆಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರ ನಟ ಯದು ವಿಟ್ಲ ಭಾಗವಹಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷಡಾ. ಶಿವಪ್ರಕಾಶ್ ಎಂ ದೀಪ ಪ್ರಜ್ವಲಿಸಿ ವಿದ್ಯಾರ್ಥಿಗಳಿಗೆ ಯಶಸ್ಸನ್ನು ಕೋರಿದರು.

ಶಾಲಾ ಮುಖ್ಯ ಗುರುಗಳ ಮಾರ್ಗದರ್ಶನದಲ್ಲಿ ಶಾಲಾ ಕಲಾ ಶಿಕ್ಷಕ ಕಾರ್ತಿಕ್ ಕುಮಾರ್ ವಿಟ್ಲ ಇವರ ತರಬೇತಿಯಡಿಯಲ್ಲಿ “ರಂಗ ನಟನಾ” ನಾಟಕ ತರಗತಿಯ ವಿದ್ಯಾರ್ಥಿಗಳಿಂದ, “ವೀರ ಸಾವರ್ಕರ್”, “ಹನುಮನ ಉಸಿರಲ್ಲಿ ರಾಮ” ಹಾಗೂ “ಹರಿದ್ವರ್ಣ”ಗಳೆಂಬ ಮೂರು ಕಿರು ನಾಟಕಗಳು ಪ್ರದರ್ಶನಗೊಂಡವು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಗುರುಗಳು, ಪ್ರಾಥಮಿಕ ವಿಭಾಗ ಮುಖ್ಯ ಶಿಕ್ಷಕಿ ಸಂಧ್ಯಾ,  ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಮಮತಾ, ಶಾಲಾ ಶಿಕ್ಷಕರು, ಮಕ್ಕಳು ಹಾಗೂ ಪೋಷಕ ಬಂಧುಗಳು ಉಪಸ್ಥಿತರಿದ್ದರು.ಶಾಲಾ ಸಹಶಿಕ್ಷಕಿ ಸೌಮ್ಯಕುಮಾರಿ ಸ್ವಾಗತಿಸಿ, ಜ್ಯೋತಿ ಲಕ್ಷ್ಮಿ ವಂದಿಸಿದರು. ಕವಿತಾ ಸತೀಶ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here