ಪುತ್ತೂರು: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ವ್ಯವಸ್ಥಿತ ಹಾಗೂ ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗವು ಬಿಗಿ ಭದ್ರತೆಗಾಗಿ ಪ್ಯಾರ ಮಿಲಿಟರಿ ಹಾಗೂ ಪೊಲೀಸರ ತಂಡ ಮಾ.23ರಂದು ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿ ನಿರ್ಭೀತಿಯಿಂದ ಮತದಾನ ಮಾಡುವಂತೆ ಸಂದೇಶ ಸಾರಿದರು.
ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿಯಲ್ಲಿ ತೊಡಗಿದ್ದರೆ. ಪ್ರಜಾತಂತ್ರದ ಹಬ್ಬವಾಗಿರುವ ಚುನಾವಣೆಯನ್ನು ಸುಗಮ, ಶಾಂತಿಯುತವಾಗಿ ನಡೆಸಲು ಚುನಾವಣಾ ಆಯೋಗವು ಸಹ ಸಿದ್ದತೆ ಮಾಡಿಕೊಂಡಿದೆ. ಚುನಾವಣೆಯಲ್ಲಿ ಭದ್ರತೆಗಾಗಿ ಪ್ಯಾರಾ ಮಿಲಿಟರಿ ತುಕಡಿಗಳು, ಪೊಲೀಸ್ ಇಲಾಖೆಗಳು ಅಣೆಯಾಗಿವೆ. ನೂರಾರು ಭದ್ರತಾ ಸಿಬ್ಬಂದಿ ಸಶಸ್ತ್ರಗಳೊಂದಿಗೆ ದರ್ಬೆ ವೃತ್ತದ ಬಳಿಯಿಂದ ಪ್ರಾರಂಭಗೊಂಡು ಮುಖ್ಯ ರಸ್ತೆಯ ಮೂಲಕ ಬೊಳುವಾರು ತನಕ ಮುಖ್ಯರಸ್ತೆಯಲ್ಲಿ ಪಥ ಸಂಚಲನ ನಡೆಸಿದರು.
ಡಿವೈಎಸ್ಪಿ ಅರುಣ್ ನಾಗೇ ಗೌಡ ನೇತೃತ್ವದಲ್ಲಿದಲ್ಲಿ ನಡೆದ ಪಥ ಸಂಚಲನದಲ್ಲಿ ಪುತ್ತೂರು ನಗರ ಠಾಣೆ, ಸಂಚಾರಿ ಠಾಣೆ, ಮಹಿಳಾ ಠಾಣೆ ಹಾಗೂ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಅಧಿಕಾರಿ ಹಾಗೂ ಸಿಬಂದಿಗಳು ಭಾಗವಹಿಸಿದ್ದರು.