ಸರ್ವೆ ಮೋನಪ್ಪ ನಾಯ್ಕ ಸೊರಕೆ ಹೃದಯಾಘಾತದಿಂದ ನಿಧನ

0

ಪುತ್ತೂರು: ಸರ್ವೆ ಗ್ರಾಮದ ಮೋನಪ್ಪ ನಾಯ್ಕ ಸೊರಕೆ (79ವ)ರವರು ಮಾ.24ರಂದು ಸೊರಕೆ ಸ್ವಗೃಹದಲ್ಲಿ ನಿಧನರಾದರು.
ಪ್ರಗತಿಪರ ಕೃಷಿಕರಾಗಿರುವ ಮೋನಪ್ಪ ನಾಯ್ಕ ಅವರು ಬೆಳಿಗ್ಗೆ ತೋಟದಲ್ಲಿ ವೀಳ್ಯದೆಲೆ ಕೊಯಿದು ಬಳಿಕ ಮನೆಗೆ ಬಂದು ಮಧ್ಯಾಹ್ನ ಊಟದ ಬಳಿಕ ಅವರಿಗೆ ಎದೆ ನೋವು ಕಾಣಿಸಿಕೊಂಡು ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ ರೇವತಿ, ಪುತ್ತೂರಿನಲ್ಲಿರುವ ಬಾಲಚಂದ್ರ ಸೊರಕೆ ಸಹಿತ ನಾಲ್ವರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಮನೆಗೆ ಸುರೇಶ್ ಸೊರಕೆ, ಗ್ರಾ.ಪಂ ಮಾಜಿ ಸದಸ್ಯ ರಾಮಚಂದ್ರ ಸೊರಕೆ ಆಗಮಿಸಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here