ಪುತ್ತೂರು: ಸರ್ವೆ ಗ್ರಾಮದ ಭಕ್ತಕೋಡಿ ವರಲಕ್ಷ್ಮೀ ಕಾಂಪ್ಲೆಕ್ಸ್‌ನಲ್ಲಿ`ಶ್ರುತೀಸ್’ ಬ್ಯೂಟಿ ಪಾರ್ಲರ್ ಮಾ.25ರಂದು ಶುಭಾರಂಭಗೊಂಡಿತು.
ಪುತ್ತೂರು ಹಂಸಿಕ ಬ್ಯೂಟಿ ಪಾರ್ಲರ್ ಸಂಸ್ಥೆಯ ಮಾಲಕರಾದ ವಿದ್ಯಾ ಅವರು ದೀಪ ಬೆಳಗಿ ಉದ್ಘಾಟಿಸಿ ಶುಭ ಹಾರೈಸಿದರು. ಕಲ್ಲಮ ಶ್ರೀ ಗುರು ರಾಘವೇಂದ್ರ ಮಠದ ವ್ಯವಸ್ಥಾಪಕರಾದ ಅನುರಾಧ ಭಟ್ ಕಲ್ಲಮ, ಬಂಟ್ವಾಳ ಬಿಲ್ಲವ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ ಗಾಣದಪಡ್ಪು, ಉದ್ಯಮಿ ಪ್ರಸನ್ನ ಜಿ ಕೆ, ಮುಂಡೂರು ಗ್ರಾ.ಪಂ ಮಾಜಿ ಅಧ್ಯಕ್ಷ ವಸಂತ ಎಸ್.ಡಿ, ರತ್ನಾವತಿ ಎಸ್ ಡಿ, ಆದಿತ್ಯ ಅಂಚನ್ ಮಂಗಳೂರು, ಚೈತ್ರಿಕ ಆದಿತ್ಯ ಅಂಚನ್, ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಸರ್ವೆದೋಳಗುತ್ತು, ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀನಿವಾಸ್ ಎಚ್.ಬಿ, ಜಯಶ್ರೀ ಶ್ರೀನಿವಾಸ್, ಗೌರಿ ಮಹಿಳಾ ಮಂಡಲದ ಅಧ್ಯಕ್ಷೆ ಮೋಹಿನಿ ಭಕ್ತಕೋಡಿ, ವಸಂತಿ ಭಕ್ತಕೋಡಿ, ಪುಷ್ಪ ರಮೇಶ್ ಸುವರ್ಣ, ಪುತ್ತೂರು ತಾಲೂಕು ಯುವಜನ ಒಕ್ಕೂಟದ ಗೌರವಾಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು, ಸರ್ವೆ ಷಣ್ಮುಖ ಯುವಕ ಮಂಡಲದ ಕಾರ್ಯದರ್ಶಿ ಮನೋಜ್ ಸುವರ್ಣ ಸೊರಕೆ ಉಪಸ್ಥಿತರಿದ್ದರು.
ಅತಿಥಿಗಳನ್ನು ಸ್ವಾಗತಿಸಿದ ಶ್ರುತೀಸ್ ಬ್ಯೂಟಿ ಪಾರ್ಲರ್‌ನ ಮಾಲಕಿ ಶ್ರುತಿ ಮಾತನಾಡಿ ನಮ್ಮಲ್ಲಿ ಬ್ರೈಡಲ್ ಮೇಕಪ್, ಫೇಸಿಯಲ್, ಥ್ರೆಡ್ಡಿಂಗ್ ಮತ್ತು ವ್ಯಾಕ್ಸಿಂಗ್, ಮನಿಕ್ಯೂರ್ ಮತ್ತು ಪೆಡಿಕ್ಯೂರ್, ಹೇರ್‌ಸ್ಟೈಲ್ಸ್, ಹೇರ್ ಕಟ್, ಹೇರ್ ಕಲರ್, ಕರ್ಲಿಂಗ್ ಮತ್ತು ಪರ್ಮಿಂಗ್ ಸೌಲಭ್ಯಗಳಿದೆ ಎಂದು ಹೇಳಿ ಗ್ರಾಹಕರ ಸಹಕಾರ ಬಯಸಿದರು.