ಹೇರ್ ಫ್ಯಾಶನ್ ಸೆಲೂನ್ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ಮುಖ್ಯರಸ್ತೆ ಮಹಾಲಸಾ ಆರ್ಕೇಡ್ ಇಲ್ಲಿ ಕಳೆದ 8 ವರುಷಗಳಿಂದ ಕಾರ್ಯಚರಿಸುತ್ತಿದ್ದ ಆನಂದ್ ಮಾಲೀಕತ್ವದ ಹೇರ್ ಫ್ಯಾಶನ್ ಸೆಲೂನ್ (ಮೆನ್ಸ್ ಬ್ಯೂಟಿ ಪಾರ್ಲರ್) ದರ್ಬೆ ಜಂಕ್ಷನ್ ಬಳಿಯ ಮಹಾಲಿಂಗೇಶ್ವರ ಟವರ್ ಇಲ್ಲಿಗೆ ಸ್ಥಳಾಂತರಗೊಂಡು ಮಾ.27 ರಂದು ಶುಭಾರಂಭಗೊಂಡಿತು.


ಅರ್ಚಕ ಯೊಗೇಶ್ ಭಟ್ ಬಳಗ ಪರ್ಲಡ್ಕ ಪೂಜಾ ಕೈಂಕರ್ಯ ನೆರವೇರಿಸಿ, ಸಂಸ್ಥೆಯ ಶ್ರೇಯೋಭಿವೃದ್ದಿಗೆ ಶುಭಹಾರೈಸಿದರು. ಪದ್ಮಶ್ರೀ ಸೋಲಾರ್ ಮಾಲೀಕ ಸೀತಾರಾಮ್ ರೈ ಕೆದಂಬಾಡಿಗುತ್ತು ದೀಪ ಪ್ರಜ್ವಲನೆ ನೆರವೇರಿಸಿ, ಉದ್ಘಾಟಿಸಿದರು. ಈ ವೇಳೆ ಡಾ. ರವೀಂದ್ರನಾಥ ಐತಾಳ್ ಕಲ್ಲಾರೆ, ಜಶ್ವಿನ್ ವೆಜಿಟೇಬಲ್ ಮಾಲೀಕ ವಿಶ್ವನಾಥ ಗೌಡ, ಮಹಾಲಿಂಗೇಶ್ವರ ಹೆಚ್ ಪಿ ಗ್ಯಾಸ್ ಉದ್ಯೋಗಿ ರಾಜೇಶ್, ಬಸವರಾಜ್ ಬೆಳಗಾಂ ಹಾಗೂ ಶಿವಣ್ಣ ನೆಲ್ಲಿಕಟ್ಟೆ ಹಾಜರಿದ್ದರು. ಹೆಡ್ಡ್ವಾಷ್, ಬ್ಲೀಚಿಂಗ್, ಫೇಶಿಯಲ್ ಈ ಮೊದಲಾದ ಸೇವೆ ಮಳಿಗೆಯಲ್ಲಿ ಲಭ್ಯವೆಂದು ಮಾಲೀಕರು ತಿಳಿಸಿ, ಸಹಕಾರ ಕೋರಿದರು. ಮಾಲೀಕರ ಸಹೋದರ ಅಪ್ಪಣ್ಣ ಸಹಕರಿಸಿದರು.

LEAVE A REPLY

Please enter your comment!
Please enter your name here