ನೆಕ್ಕಿಲಾಡಿ ಹಿಂದೂ ರುದ್ರಭೂಮಿಯ ಅಭಿವೃದ್ಧಿಗೆ ಧರ್ಮಸ್ಥಳದಿಂದ ರೂ.2.5ಲಕ್ಷ ಅನುದಾನ

0

ಪುತ್ತುರು:34 ನೆಕ್ಕಿಲಾಡಿ ಗ್ರಾ.ಪಂನ ವತಿಯಿಂದ ನಿರ್ಮಾಣವಾಗುತ್ತಿರುವ ಹಿಂದುರುದ್ರ ಭೂಮಿಯ ಅಭಿವೃದ್ಧಿ ಕಾರ್ಯಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.2.50ಲಕ್ಷ ಅನುದಾನ ನೀಡಿರುತ್ತಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನೆ ಅಧಿಕಾರಿ ಶಶಿಧರ್‌ರವರು ಅನುದಾನ ಚೆಕ್‌ನ್ನು ನೆಕ್ಕಿಲಾಡಿ ಗ್ರಾ.ಪಂ ಅಧ್ಯಕ್ಷೆ ಸುಜಾತ ಆರ್ ರೈಯವರಿಗೆ ಹಸ್ತಾಂತರಿಸಿದರು. ಗ್ರಾ.ಪಂ ಸದಸ್ಯರು, ಯೋಜನೆಯ ಮೇಲ್ವಿಚಾರಕ ಶಿವಪ್ಪ ಎಂ.ಕೆ., 34ನೇ ನೆಕ್ಕಿಲಾಡಿ ಒಕ್ಕೂಟದ ಅಧ್ಯಕ್ಷರು ದರ್ನಪ್ಪ ಗೌಡ ಹಾಗೂ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here