ಪಡ್ಡಾಯೂರು: ನಾಟಿವೈದ್ಯೆ ಅಪ್ಪಿ ಮೂವಪ್ಪು ನಿಧನ

0

ಪುತ್ತೂರು: ಪಡ್ನೂರು ಗ್ರಾಮದ ಪಡ್ಡಾಯೂರು ನಾಟಿವೈದ್ಯೆ ಅಪ್ಪಿ ಮೂವಪ್ಪು(90 ವ)ರವರು ಮಾ.28ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.

ಮೂವಪ್ಪು ಪ್ರಗತಿ ಪರಕೃಷಿಕರಾಗಿದ್ದ ದಿ.ತಿಮ್ಮಪ್ಪ ಗೌಡ ಅವರ ಪತ್ನಿಯಾಗಿದ್ದ ಅಪ್ಪಿ ಮೂವಪ್ಪು ಅವರು ಹೊಟ್ಟೆನೋವು, ದೃಷ್ಣಿದೋಷ ಸಹಿತ ಹಲವು ಕಾಯಿಲೆಗಳಿಗೆ ನಾಟಿವೈದ್ಯೆಯಾಗಿದ್ದರು. ಮೃತರು ಪುತ್ರ ಪಡ್ಡಾಯೂರು ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಆನಂದ ಮೂವಪ್ಪು ಮತ್ತು ನಾಲ್ವರು ಪುತ್ರಿಯರನ್ನು‌ ಅಗಲಿದ್ದಾರೆ.

LEAVE A REPLY

Please enter your comment!
Please enter your name here