ಬೊಳುವಾರಿನ ಜಾಣ ಫುಡ್ಸ್ ನೇತೃತ್ವ-ಹೆಸರಾಂತ ಬಿಗ್ ಮಿಶ್ರಾ ಪೇಡ ಶಾಖೆ ದರ್ಬೆಯಲ್ಲೂ ಪ್ರಾರಂಭ

0

*ಸಿಹಿ ಪ್ರಿಯರ ಆಕರ್ಷಿಸಿ ,ಮನ ಸೆಳೆಯೂವಲ್ಲೂ ಸೈ ಎನಿಸಿರುವಂಥಹ ಉತ್ಕೃಷ್ಟ ಸ್ವಾದಭರಿತ ಬಿಗ್ ಮಿಶ್ರಾ ಉತ್ಪನ್ನಗಳು
*ಮೊದಲು ಗ್ರಾಹಕ ಗೆದ್ದು , ಬಳಿಕ ತಾನೂ ಗೆಲ್ಲುವುದೇ ವ್ಯವಹಾರ – ಆನಂದ್ ಎಸ್.ಕೆ

ಪುತ್ತೂರು : ವ್ಯವಹಾರವೆಂದರೆ ಮೊದಲಾಗಿ ಗ್ರಾಹಕರನ್ನು ಗೆಲ್ಲಿಸಿ , ಆ ಬಳಿಕ ತಾನು ಗೆಲ್ಲುವುದಾಗಿದೆ. ವೈದ್ಯ ವೃತ್ತಿಯಲ್ಲಿ ನಿರತರಾಗಿರುವ ಡಾ.ಪ್ರಶಾಂತ್ ಜಾಣ ನೇತೃತ್ವದಲ್ಲಿ ಪುತ್ತೂರಿನಲ್ಲಿ ಒಂದೇ ವರುಷದೊಳಗಡೆ ಹೆಸರಾಂತ ಬಿಗ್ ಮಿಶ್ರಾ ಪೇಡಾ ಇದರ ಫ್ರಾಂಚೈಸಿ “ಜಾಣ ಫುಡ್ಸ್” ಮಳಿಗೆ ಬೊಳುವಾರಿನಲ್ಲಿ ವ್ಯವಹರಿಸುತ್ತಿದ್ದು ,ಇದೀಗ ಪ್ರಥಮ ಶಾಖೆಯೂ ದರ್ಬೆಯಲ್ಲಿ ಆರಂಭಗೊಂಡಿದೆ ,ಇದೇ ರೀತಿ ಶಾಖೆಗಳ ಸಂಖ್ಯೆ ಏರುಗತಿಯಲ್ಲಿ ಸಾಗಲಿ ಜೊತೆಗೆ ಜೀವನದಲ್ಲಿ ಅಭಿವೃದ್ಧಿ ಅನ್ನುವುದು ಸದಾ ಇರವಂಥದಾಗಿದೆ ಎಂದು ಮಾಸ್ಟರ್ ಪ್ಲಾನರಿ ಇದರ ಚೇಯರ್ಮ್ಯಾನ್ ಆನಂದ್ ಕುಮಾರ್ ಎಸ್.ಕೆ.ಹೇಳಿದರು.


ಮಾ. 29 ರಂದು ಜಾಣ ಫುಡ್ಸ್ ಇದರ ನೂತನ ಶಾಖೆಗೆ ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿ ಶುಭ ಕೋರಿದರು.ಶ್ರೀ ಮಹಾಲಿಂಗೇಶ್ವರ ದೇವಾಲಯ ಇದರ ಪ್ರಧಾನ ಅರ್ಚಕ ಎ.ವಸಂತ ಕೆದಿಲಾಯ ಧಾರ್ಮಿಕ ಕೈಂಕರ್ಯ ನೆರವೇರಿಸಿ ಆ ಬಳಿಕ ಮಾತನಾಡಿ ,ಮಾಲೀಕರು ಹಾಗೂ ಸಿಬ್ಬಂದಿ ವರ್ಗದ ಮಧ್ಯೆ ಪರಸ್ಪರ ಪ್ರೀತಿ ,ವಿಶ್ವಾಸ ಹಾಗೂ ಅನೋನ್ಯತೆ ಜೊತೆ ಒಗ್ಗಟ್ಟು ಇರಲಿ. ಶುಕ್ಲ ಪಕ್ಷದ ಚಂದ್ರ ದಿನೇ ,ದಿನೇ ವಿಶಾಲವಾದಂತೆ ಈ ಸಂಸ್ಥೆಯೂ ಅಭಿವೃದ್ಧಿ ಪಥವನ್ನು ತಲುಪಲಿ ಎಂದರು.


ಡಾ.ಪ್ರಶಾಂತ್ ಜಾಣರವರ ಮಾತೃಶ್ರೀ ಮಮತಾ ಕೊಂಬೆಟ್ಟು , ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಐತ್ತಪ್ಪ ನಾಯ್ಕ್ ಹಾಗೂ ಬಿಗ್ ಮಿಶ್ರಾ ಪೇಡಾ ಇದರ ಅಖಿಲ ಭಾರತ ಮಾರಾಟ ವಿಭಾಗದ ಮುಖ್ಯಸ್ಥ ಶ್ರೀಧರ್ ಪಾಟೀಲ್ ಮೊದಲಾದವರು ಶುಭಹಾರೈಸಿದರು.
ರೇಖಾ ಆನಂದ್ ಎಸ್.ಕೆ , ಇಂಜಿನಿಯರ್ ಆಕಾಶ್ , ಡಾ.ರಾಮಚಂದ್ರ ಹೊಸನಗರ ಮತ್ತು ಡಾ.ಆ್ಯಂಟು ರಾಮಚಂದ್ರ ದಂಪತಿ ಸಹಿತ ಹಲವರು ಅತಿಥಿಗಳು ಆಗಮಿಸಿ ,ಹಾರೈಸಿದರು. ಉದ್ಯಮಿ ಅನಿತಾ ಪ್ರಶಾಂತ್ ಜಾಣ , ಪುತ್ರಿ ಡಾ.ಖುಷಿ ಪ್ರಶಾಂತ್ ಜಾಣ ಸ್ವಾಗತಿಸಿ ,ವಂದಿಸಿದರು.

LEAVE A REPLY

Please enter your comment!
Please enter your name here