ಕೆಯ್ಯೂರು : ಶ್ರೀ ಹೊಸಮ್ಮ ದೈವಸ್ಥಾನ ಪಲ್ಲತ್ತಡ್ಕದಲ್ಲಿ ಶ್ರೀ ಹೊಸಮ್ಮ ದೈವದ ನೇಮೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ಮಾ.29ರಂದು ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳು ಪ್ರಾರ್ಥನೆ ಸಮರ್ಪಿಸಿ, ದೈವದ ಪಾತ್ರಿಗಳಾದ ಮೋನಪ್ಪ ಪೂಜಾರಿ ಪಲ್ಲತ್ತಡ್ಕ ಗೊನೆ ಮುಹೂರ್ತ ನೆರವೇರಿಸಿದರು.
ನಂತರ ಶ್ರೀ ಕ್ಷೇತ್ರದಲ್ಲಿ 29 ಮಾರ್ಚ್ 2015 ರಂದು ನಡೆದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ನೆನಪಿಗಾಗಿ ಶ್ರೀ ಮಹಾಗಣಪತಿ ಹೋಮ ಶ್ರೀ ದೇವಿಗೆ ಪಂಚವಿಂಶತಿ ಕಲಶ ಪೂಜೆ ಮತ್ತು ಚಂಡಿಕಾ ಯಾಗವು ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತ್ರತ್ವದಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಮಾಡಾವು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ಸದಾಶಿವ ಭಟ್ ಎ.ಕೆಯ್ಯೂರು, ಕುಟುಂಬಸ್ಥರಾದ ರಾಜೀವಿ, ಕೋರಗಪ್ಪ ಪೂಜಾರಿ, ಜಿನ್ನಪ್ಪ ಪೂಜಾರಿ, ಶೀನಪ್ಪ ಪೂಜಾರಿ, ದಿವಾಕರ ಪೂಜಾರಿ, ಬಾಲಕೃಷ್ಣ ಪೂಜಾರಿ, ಪ್ರೀತಂ ಪಲ್ಲತ್ತಡ್ಕ, ದಿನೇಶ ಕೇಪು, ಸಂದೀಪ್ ಪಲ್ಲತ್ತಡ್ಕ, ರಿತೀಕ್ ಪಲ್ಲತ್ತಡ್ಕ, ತಿಲಕ್ ರಾಜ್ ಪಲ್ಲತ್ತಡ್ಕ, ಭವಿತ್ ಪಲ್ಲತ್ತಡ್ಕ, ಉಮಾವತಿ ಪಲ್ಲತ್ತಡ್ಕ, ಸುಮಿತ್ರಾ ಪಲ್ಲತ್ತಡ್ಕ, ಅನ್ವಿತಾ ಪಲ್ಲತ್ತಡ್ಕ, ಯಶಸ್ಸು ಪಲ್ಲತ್ತಡ್ಕ, ಪ್ರದ್ಯುಮ್ನ , ಡೀಕಯ್ಯ, ಗೋವಿಂದ ಕಾಪುತ್ತಡ್ಕ, ಯತೀಶ್ ಪಲ್ಲತ್ತಡ್ಕ ನೇಮು ಪರವ ಮಾಡಾವು, ಊರ ಗ್ರಾಮಸ್ಥರು ಉಪಸ್ಥಿತರಿದ್ದರು.