24/7 ನೀರಿನ ಯೋಜನೆಯಿಂದ ನೀರಿಲ್ಲದೆ ಪರದಾಡುತ್ತಿರುವ ಸಾರ್ವಜನಿಕರು- ಜನರ ಸಮಸ್ಯೆಗಳಿಗೆ ಪರಿಹಾರ ಕೊಡುವವರು ಯಾರು-ನ್ಯಾಯವಾದಿ ನೂರುದ್ದೀನ್ ಸಾಲ್ಮರ

0

ಅಧಿಕಾರಿಗಳು ಕೇವಲ ಚುನಾವಣೆ ಕಾರ್ಯವನ್ನು ಮಾತ್ರ ತುರ್ತಾಗಿ ಪರಿಗಣಿಸದೆ ನೀರಿನ ಸಮಸ್ಯೆ ಪರಿಹಾರಕ್ಕೆ ತುರ್ತು ಕ್ರಮ ಕೈಗೊಳ್ಳಿ, ನ್ಯಾಯವಾದಿ ನೂರುದ್ದೀನ್ ಸಾಲ್ಮರ

ಪುತ್ತೂರು: ಪುತ್ತೂರಿನಲ್ಲಿ 24/7 ನೀರು ಕೊಡುವ ಯೋಜನೆಯ ಕೆಲಸ ಕಾರ್ಯಗಳಿಂದಾಗಿ ದಿನದ ಒಂದು ಗಂಟೆಯೂ ನೀರು ಬರದೆ, ಸಾರ್ವಜನಿಕರು ಪರದಾಡುವಂತಾಗಿದೆ. ಈ ಯೋಜನೆಯ ಕಾರ್ಯ ಅನುಷ್ಠಾನಕ್ಕಾಗಿ ಊರ್ಜಿತದಲ್ಲಿರುವ ಪೈಪುಗಳಿಗೆ ಸಂಪರ್ಕ ಕೊಡುವ ನಿಟ್ಟಿನಲ್ಲಿ ರಸ್ತೆಯನ್ನು ಅಗೆದು ಪೈಪುಗಳಿಗೆ ಹಾನಿಯಾಗುತ್ತಿರುವುದರಿಂದ, ಸಾರ್ವಜನಿಕರು ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ಮಾತ್ರವಲ್ಲ ಕುಡಿಯುವ ನೀರಿಗಾಗಿ ಈ ಯೋಜನೆ ಅನುಷ್ಠಾನ ಗೊಳಿಸುವವರ ಕೃಪೆಗೆ ಕಾಯುವಂತಾಗಿದೆ. ಈ ಹಿಂದೆ ಸಮಯಕ್ಕೆ ಸರಿಯಾಗಿ ಬರುತ್ತಿದ್ದ ನೀರು, ದಿನವಿಡೀ ಕಾಯ್ದರು ಬರುತ್ತಿಲ್ಲ. ವಾರದಲ್ಲಿ ಎರಡು ಮೂರು ದಿನ ಬಂದರೆ ಉಳಿದ ದಿನಗಳಲ್ಲಿ ನೀರಿಲ್ಲ. ಸಂಬಂಧಪಟ್ಟವರಲ್ಲಿ ವಿಚಾರಿಸಿದಾಗ ಸಮರ್ಪಕವಾದ ಉತ್ತರವಿಲ್ಲ. ಪೈಪು ಜೋಡಣೆ ಕಾರಣದಿಂದ ಆಕಸ್ಮಿಕವಾಗಿ ನೀರು ಬಿಟ್ಟರು,ಪೈಪುಗಳು ಒಡೆದ ಕಾರಣ ನೀರುಗಳು ಮನೆಯ ಟ್ಯಾಂಕಿಯನ್ನು ತುಂಬುತ್ತಿಲ್ಲ.ಬೇಸಿಗೆ ತೀವ್ರ ಜಲಕ್ಷ್ಮಮದಿಂದ ಸಾರ್ವಜನಿಕರು ಜರ್ಜರಿತವಾಗಿದ್ದರೂ ಇವರ ಕೂಗನ್ನು ಕೇಳುವವರಿಲ್ಲ. ಹೀಗಾದರೆ ‘ಚುನಾವಣೆ’ ಕಾಲದಲ್ಲಿ ಸಾರ್ವಜನಿಕರು ‘ಗುಳೆ’ ಹೋಗಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಅಧಿಕಾರಿಗಳು ಕೇವಲ ‘ಚುನಾವಣೆಯನ್ನು’ಮಾತ್ರ ತುರ್ತಾಗಿ ಪರಿಗಣಿಸದೆ, ಜನರ ಮೂಲಭೂತ ಸೌಕರ್ಯ ವಾದ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು.ಅದೇ ರೀತಿ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ನ ಜನಪ್ರತಿನಿಧಿಗಳು, ಅಧಿಕಾರಿಗಳು ತುರ್ತು ಸ್ಪಂದನೆ ಮಾಡಬೇಕು. ಅದೇ ರೀತಿ, ದ.ಕ ಜಿಲ್ಲಾಡಳಿತವು ತುರ್ತು ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ನ್ಯಾಯವಾದಿ ನೂರುದ್ದೀನ್ ಸಾಲ್ಮರ ಆಗ್ರಹಿಸಿದ್ದಾರೆ

LEAVE A REPLY

Please enter your comment!
Please enter your name here