25 ವಲಯಗಳಲ್ಲಿ 25ತಂಡಗಳ ಮೂಲಕ ಪ್ರತಿ ಮನೆಗಳಿಗೂ ಆಮಂತ್ರಣ ವಿತರಣೆ
ಪುತ್ತೂರು: ಆರ್ಯಾಪು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎ.21ರಿಂದ ನಡೆಯಲಿರುವ ಬ್ರಹ್ಮಕಲಶೋತ್ಸವದ ಆಮಂತ್ರಣವನ್ನು ಗ್ರಾಮದ ಎಲ್ಲಾ ಮನೆಗಳಿಗೆ ತಲುಪಿಸಿ, ಅವರನ್ನು ಬ್ರಹ್ಮಕಲಶೋತ್ಸವದಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಮಾ.31ರಂದು ಆಮಂತ್ರಣ ವಿತರಣೆಯ ಮನೆ ಮನೆ ಸಂಪರ್ಕಿಸುವ ಮಹಾ ಅಭಿಯಾನ ನಡೆಯಿತು.
ಕಾರ್ಪಾಡಿಯ ಅನಂತಕೃಷ್ಣ ಕಾರಂತರವರ ಮನೆಗೆ ತೆರಳಿ ಆಮಂತ್ರಣ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಆಮಂತ್ರಣ ವಿತರಣೆಗೆ ಚಾಲನೆ ನೀಡಿದರು. ಬಳಿಕ ಮನೆಗೆ ಸ್ಟಿಕ್ಕರ್ ಅಂಟಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಮಹಾಬಲ ರೈ ವಳತ್ತಡ್ಕ, ಕಾರ್ಯದರ್ಶಿ ಗಿರೀಶ್ ಕಿನ್ನಿಜಾಲು, ಸಂಚಾಲಕ ಸುಧಾಕರ ರಾವ್ ಆರ್ಯಾಪು, ಜೀರ್ಣೋದ್ಧಾರ ಸಮಿತಿ ಕಾರ್ಯಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಉಪಾಧ್ಯಕ್ಷ ಜಯಂತ ಶೆಟ್ಟಿ ಕಂಬತ್ತಡ್ಡ, ಸದಸ್ಯ ದೇವಯ್ಯ ಗೌಡ ಮೊದಲಾವರು ಉಪಸ್ಥಿತರಿದ್ದರು.
25 ಕಡೆಗಳಲ್ಲಿ 25 ತಂಡಗಳಲ್ಲಿ ವಿತರಣೆ:
ಆರ್ಯಾಪು ಹಾಗೂ ಸುತ್ತ ಮುತ್ತಲ ಗ್ರಾಮಗಳಲ್ಲಿ ಆಮಂತ್ರಣ ಪತ್ರಿಕೆಯನ್ನು ಗ್ರಾಮದಲ್ಲಿ ಪ್ರತಿ ಮನೆಗಳಿಗೆ ತಲುಪಿಸಲು ಪ್ರಮುಖ 25 ವಲಯಗಳಾಗಿ ವಿಂಗಡಿಸಿ ಅವುಗಳಿಗೆ 25 ತಂಡಗಳನ್ನು ರಚಿಸಿಕೊಂಡು ಆಮಂತ್ರಣ ಪತ್ರಿಕೆ ವಿತರಿಸಲಾಯಿತು. ತಲಾ ಒಂದು ತಂಡಗಳು ಕನಿಷ್ಠ 100 ಮನೆಗಳಂತೆ ಮಹಾ ಅಭಿಯಾನದ ಮೂಲಕ ಮನೆ ಮನೆಗಳನ್ನು ಸಂಪರ್ಕಿಸಲಾಯಿತು. ಆಮಂತ್ರಣ ನೀಡಿದ ಪ್ರತಿ ಮನೆಗಳೊಗೆ ಸ್ಟಿಕ್ಕರ್ ಅಂಟಿಸಿ ಬ್ರಹ್ಮಕಲಶೋತ್ಸವಕ್ಕೆ ಆಮಂತ್ರಿಸಲಾಯಿತು. ವಿವಿಧ ವಲಯಗಳ ಪ್ರಮುಖರು ಹಾಗೂ ಭಕ್ತಾದಿಗಳು ಮಹಾ ಅಭಿಯಾನದಲ್ಲಿ ಸಹಕರಿಸಿದರು.