ಉಬಾರ್ ಕಂಬಳೋತ್ಸವಕ್ಕೆ ಅದ್ದೂರಿಯ ತೆರೆ-ಸಾವಿರಾರು ಮಂದಿಯ ಭಾಗೀದಾರಿಕೆಯಲ್ಲಿ ನಡೆದ ಕಂಬಳ

0

ಉಪ್ಪಿನಂಗಡಿ: ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿ ಉಪ್ಪಿನಂಗಡಿ ಇದರ ವತಿಯಿಂದ ಇಲ್ಲಿನ ಹಳೆಗೇಟು ಬಳಿಯ ನೇತ್ರಾವತಿ ನದಿ ಕಿನಾರೆಯಲ್ಲಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆದ ಉಬಾರ್ ಕಂಬಳೋತ್ಸವವು ಮಾ.31ರಂದು ಸಂಪನ್ನಗೊಂಡಿತು.


ಎರಡು ದಿನಗಳ ಕಾಲ ವಿಜಯ- ವಿಕ್ರಮ ಜೋಡುಕರೆ ಕಂಬಳವು ನಡೆದಿದ್ದು, ಇದು ಸಂಜೆ 6.45ಕ್ಕೆ ಸಂಪನ್ನಗೊಂಡಿತು. ಬಳಿಕ ವಿಜೇತ ಕೋಣಗಳ ಮಾಲಕರಿಗೆ ಬಹುಮಾನ ವಿತರಣೆ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನ್ಯಾಯವಾದಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಬೆಂಗಳೂರು ಇದರ ಮಾಜಿ ಸದಸ್ಯರಾದ ಮಹೇಶ್ ಕಜೆ, ಕಂಬಳವು ನಮ್ಮ ಜನಪದ ಕ್ರೀಡೆಯಾಗಿದ್ದು, ಉಪ್ಪಿನಂಗಡಿಯ ಈ ಕಂಬಳವು ಈ ಬಾರಿ ಉತ್ಸವವಾಗಿ ಮೂಡಿ ಬಂದಿದೆ. ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ಮೂರು ಮಖೆ ಜಾತ್ರೆಗಳು ಹಾಗೂ ಮಹಾಕಾಳಿ ಮೆಚ್ಚಿ ಸೇರಿ ನಾಲ್ಕು ಉತ್ಸವಗಳು ನಡೆದರೆ, ಐದನೇ ಉತ್ಸವವು ವಿಜಯ- ವಿಕ್ರಮ ಕಂಬಳವಾಗಿವೆ. ಇದು ಇನ್ನಷ್ಟು ಉತ್ತಮವಾಗಿ ಮೂಡಿಬಂದು ನಮ್ಮ ಊರಿಗೆ ಇನ್ನಷ್ಟು ಮೆರುಗು ತರಲಿ ಎಂದರು.


ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ, ಶಾಸಕರೂ ಆದ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಮಾತನಾಡಿ, ಕಂಬಳವೆನ್ನುವುದು ರೈತಾಪಿ ವರ್ಗದ ಕ್ರೀಡೆ. ನಾವು ರೈತರೆಂದು ಹೇಳಿಕೊಳ್ಳಲು ಕೀಳರಿಮೆ ಬೇಡ. ಕಂಬಳ ಕ್ರೀಡೆಯಿಂದಾಗಿ ತುಳುನಾಡು ರಾಷ್ಟ್ರ- ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಆದ್ದರಿಂದ ನಾವು ರೈತರೆಂದು ಎದೆತಟ್ಟಿ ಹೇಳಿಕೊಳ್ಳೋಣ ಎಂದರಲ್ಲದೆ, ಉಪ್ಪಿನಂಗಡಿಯು ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯಬೇಕು ಎಂದರು.


ಕಾರ್ಯಕ್ರಮದಲ್ಲಿ ಬಿಎಸ್ಸೆಫ್‌ನ ನಿವೃತ ಡೆಪ್ಯೂಟಿ ಕಮಾಂಡೆಂಟ್, ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಿ. ಚಂದಪ್ಪ ಮೂಲ್ಯ, ಕಟ್ಟಡ ಕಾರ್ಮಿಕ ಸಂಘ ಉಪ್ಪಿನಂಗಡಿ ಇದರ ಅಧ್ಯಕ್ಷ ಮುನೀರ್ ದಾವೂದ್, ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು ಶಿವನಾಥ ರೈ ಮೇಗಿನಗುತ್ತು, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರರು ರಮಾನಂದ ವಿಟ್ಲ, ಕಂಬಳದ ಪ್ರಧಾನ ತೀರ್ಪುಗಾರ ರಾಜೀವ್ ಶೆಟ್ಟಿ ಎಡ್ತೂರು, ಪ್ರಮುಖರಾದ ರಾಜೀವ್ ಶೆಟ್ಟಿ ಕೇದಗೆ, ಉಮೇಶ್ ಶೆಟ್ಟಿ, ಅಶೋಕ್ ಕುಮಾರ್ ರೈಯವರ ಧರ್ಮ ಪತ್ನಿ ಸುಮಾ ಅಶೋಕ್ ರೈ, ಮಕ್ಕಳಾದ ಪ್ರದಿಲ್ ರೈ, ಶೃಧಿ ರೈ, ಉಪ್ಪಿನಂಗಡಿ ಕಂಬಳ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ ಎನ್., ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹಗ್ಡೆಹಿತ್ಲು ಉಪಸ್ಥಿತರಿದ್ದರು.


ಮೂರು ದಿನಗಳ ಕಾಲ ಉಬಾರ್ ಕಂಬಳೋತ್ಸವ ಅದ್ದೂರಿಯಾಗಿ ನಡೆದಿದ್ದು, ಈ ಸಂದರ್ಭ ಮಾಜಿ ಸಚಿವರಾದ ರಮಾನಾಥ ರೈ, ವಿನಯಕುಮಾರ್ ಸೊರಕೆ, ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್., ಜಿ.ಎಲ್. ಆಚಾರ್ಯ ಸ್ವರ್ಣಾಭರಣ ಮಳಿಗೆಯ ಮಾಲಕರಾದ ಬಲರಾಮ ಆಚಾರ್ಯ, ಸುಧನ್ವ ಆಚಾರ್ಯ, ಬೇಬಿಕುಂದರ್, ಸುಧೀರ್ ಶೆಟ್ಟಿ ಮತ್ತಿತರ ಗಣ್ಯರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿ, ವೀಕ್ಷಣೆ ನಡೆಸಿದರು.


ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಸ್ವಾಗತಿಸಿ, ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ಕಂಬಳ ಸಮಿತಿಯ ಉಪಾಧ್ಯಕ್ಷರಾದ ನಟೇಶ್ ಪೂಜಾರಿ, ವಿದ್ಯಾಧರ ಜೈನ್ ಪದ್ಮವಿದ್ಯಾ, ವಿಠಲ ಶೆಟ್ಟಿ ಕೊಲ್ಯೊಟ್ಟು, ರಾಮಚಂದ್ರ ಮಣಿಯಾಣಿ, ಜಯಂತ ಪೊರೋಳಿ, ವಾರಿಸೇನ ಜೈನ್ ಕೋಡಿಯಾಡಿಗುತ್ತು, ಶಿವಪ್ರಸಾದ್ ರೈ ಮಠಂತಬೆಟ್ಟು, ಮುರಳೀಧರ ರೈ ಮಠಂತಬೆಟ್ಟು, ಸುದೇಶ್ ಶೆಟ್ಟಿ ಶಾಂತಿನಗರ, ಗೌರವ ಸಲಹೆಗಾರ ಯು. ರಾಮ, ಕಾರ್ಯದರ್ಶಿಗಳಾದ ಶಿವರಾಮ ಶೆಟ್ಟಿ ಗೋಳ್ತಮಜಲು, ಚಂದ್ರಶೇಖರ ಮಡಿವಾಳ, ಜೊತೆ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಕಂಗ್ವೆ, ಸಂಘಟನಾ ಕಾರ್ಯದರ್ಶಿಗಳಾದ ಕೃಷ್ಣಪ್ರಸಾದ್ ಬೊಳ್ಳಾವು, ಯೋಗೀಶ್ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ದಿಲೀಪ್ ಶೆಟ್ಟಿ ಕರಾಯ, ಸಹ ಸಂಚಾಲಕರಾದ ಜಯಪ್ರಕಾಶ್ ಬದಿನಾರು, ಕುಮಾರನಾಥ ಪಲ್ಲತ್ತಾರು ಕೋಡಿಂಬಾಡಿ, ಸತೀಶ್ ಶೆಟ್ಟಿ ಹೆನ್ನಾಳ, ಜಯಾನಂದ ಪಿಲಿಗುಂಡ, ಜಗದೀಶ್ ಪೂಜಾರಿ ಪರಕ್ಕಜೆ, ಉಮೇಶ ನಟ್ಟಿಬೈಲು ಮತ್ತಿತರರು ಉಪಸ್ಥಿತರಿದ್ದು, ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.


ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಸ್ವಾಗತಿಸಿದರು. ಸಮಿತಿಯ ನಿಹಾಲ್ ಶೆಟ್ಟಿ ಡ್ಯಾಶ್ ಮಾರ್ಕೇಟಿಂಗ್ ವಂದಿಸಿದರು. ಕಂಬಳ ಸಮಿತಿಯ ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ಕಂಬಳ ಫಲಿತಾಂಶ
ವಿಜಯ- ವಿಕ್ರಮ ಜೋಡುಕರೆ ಕಂಬಳದಲ್ಲಿ ನೇಗಿಲು ಕಿರಿಯದಲ್ಲಿ 53 ಜೊತೆ, ನೇಗಿಲು ಹಿರಿಯದಲ್ಲಿ 22 ಜೊತೆ, ಅಡ್ಡಹಲಗೆಯಲ್ಲಿ 4 ಜೊತೆ, ಹಗ್ಗ ಕಿರಿಯದಲ್ಲಿ 24 ಜೊತೆ, ಹಗ್ಗ ಹಿರಿಯದಲ್ಲಿ 13 ಜೊತೆ, ಕನೆ ಹಲಗೆಯಲ್ಲಿ 5 ಜೊತೆ ಹೀಗೆ ಒಟ್ಟು 121 ಜೊತೆ ಕೋಣಗಳು ಭಾಗವಹಿಸಿದ್ದವು. ಇವುಗಳ ಫಲಿತಾಂಶದ ವಿವರ ಈ ಕೆಳಗಿನಂತಿದೆ.


ಕನೆ ಹಲಗೆ ವಿಭಾಗ: (ನೀರು ನೋಡಿ ಬಹುಮಾನ):
ಪ್ರಥಮ ಬೋಳಾರ ತ್ರಿಶಾಲ್ ಕೆ. ಪೂಜಾರಿ (ಕೋಣ ಓಡಿಸಿದವರು- ಬೈಂದೂರು ಮಹೇಶ ಪೂಜಾರಿ), ದ್ವಿತೀಯ ಬೋಳಂಬಳ್ಳಿ ಶ್ರೀರಾಮ ಚೈತ್ರ ಪರಮೇಶ್ವರ ಭಟ್ (ಕೋಣ ಓಡಿಸಿದವರು- ಪಾಂಡು ನಾಯ್ಕ್).

ಹಗ್ಗ ಹಿರಿಯ ವಿಭಾಗ:
ಪ್ರಥಮ- ವೇಣೂರು ಮೂಡುಕೋಡಿ ಗಣೇಶ್‌ನಾರಾಯಣ ಪಂಡಿತ್ (ಎ) (ಕೋಣ ಓಡಿಸಿದವರು- ಬಂಬ್ರಾಣಬೈಲು ವಂದಿತ್ ಶೆಟ್ಟಿ), ದ್ವಿತೀಯ- ಕೊಳಕ್ಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ (ಬಿ) (ಕೋಣ ಓಡಿಸಿದವರು- ಕೊಳಕ್ಕೆ ಇರ್ವತ್ತೂರು ಆನಂದ).

ಹಗ್ಗ ಕಿರಿಯ ವಿಭಾಗ:
ಪ್ರಥಮ- ಸುರತ್ಕಲ್ ಪಾಂಚಜನ್ಯ ಯೋಗೀಶ್ ಪೂಜಾರಿ (ಎ) (ಕೋಣ ಓಡಿಸಿದವರು- ಬೈಂದೂರು ವಿಶ್ವನಾಥ ದೇವಾಡಿಗ), ದ್ವಿತೀಯ- ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಕರ ಬಿ. ಶೆಟ್ಟಿ (ಕೋಣ ಓಡಿಸಿದವರು- ಆದಿ ಉಡುಪಿ ಜಿತೇಶ್).

ಅಡ್ಡ ಹಲಗೆ ವಿಭಾಗ:
ಪ್ರಥಮ- ಬೀಯಪಾದೆ ಕೆರೆಕೋಡಿಗುತ್ತು ವಿಕ್ರಂ ಶೇಖರ್ ಪೂಜಾರಿ (ಕೋಣ ಓಡಿಸಿದವರು ಸಾವ್ಯ ಗಂಗಯ್ಯ ಪೂಜಾರಿ), ದ್ವಿತೀಯ- ಪೆರಿಯಾವುಗುತ್ತು ನವೀನ್ ಚಂದ್ರ ಗಟ್ಟಿಯಾಲ್ (ತೆಕ್ಕಟ್ಟೆ ಸುಧೀರ್ ದೇವಾಡಿಗ).

ನೇಗಿಲು ಹಿರಿಯ ವಿಭಾಗ:
ಪ್ರಥಮ- ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ (ಕೋಣ ಓಡಿಸಿದವರು- ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ), ದ್ವಿತೀಯ- ಬೆಳ್ಳಿಪ್ಪಾಡಿ ಕೈಪ ಕೇಶವ ಮಾಂಕು ಭಂಡಾರಿ (ಎ) (ಕೋಣ ಓಡಿಸಿದವರು- ವಿಜಾರು ಅಶ್ವಥಪುರ ಶ್ರೀನಿವಾಸ ಗೌಡ).

ನೇಗಿಲು ಕಿರಿಯ ವಿಭಾಗ:
ಪ್ರಥಮ- ಮುನಿಯಾಲು ಉದಯಕುಮಾರ್ ಶೆಟ್ಟಿ (ಬಿ) (ಕೋಣ ಓಡಿಸಿದವರು- ಮಂಗಲ್ಪಾಡಿ ರಕ್ಷಿತ್ ಶೆಟ್ಟಿ), ದ್ವಿತೀಯ- ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ (ಬಿ) (ಕೋಣ ಓಡಿಸಿದವರು- ಬೈಂದೂರು ವಿಶ್ವನಾಥ ದೇವಾಡಿಗ).

LEAVE A REPLY

Please enter your comment!
Please enter your name here